ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಿ ಅರ್ಜಿ ಕಡಿಮೆ ಬರುತ್ತವೆಯೋ ಅಲ್ಲಿ ಸಮಸ್ಯೆ ಕಡಿಮೆ ಇವೆ ಎಂದರ್ಥ. ನಾನು ಮೊನ್ನೆ ಗ್ರಾಮ ಸಭೆ ಮಾಡಿದೆ. ಮನೆ - ನಿವೇಶನಕ್ಕೆ ೫-೬ ಅರ್ಜಿಗಳು ಬಂದಿದ್ದವು. ನಾನು ಮೊದಲನೇ ಬಾರಿ ಶಾಸಕನಾದಾಗ ಹೆಚ್ಚು ನಿವೇಶನಗಳನ್ನು ಕೊಟ್ಟಿದ್ದೆ. ಸ್ಥಳದಲ್ಲೇ ಪರಿಹರಿಸಬಹುದಾದ ಯೋಜನೆಗಳನ್ನು ಇಲ್ಲೇ ಪೂರ್ಣ ಪರಿಹರಿಸುತ್ತೇವೆ. ಬೇರೆ ಅರ್ಜಿಗಳಿಗೆ ೭ ದಿನಗಳ ಕಾಲಾವಕಾಶ ಕೊಡುತ್ತೇವೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಪ್ರಜಾಸೇವೆ ಇಲಾಖೆ ವತಿಯಿಂದ ತುಮಕೂರು ಜಿಲ್ಲಾಡಳಿತ ಜಿಲ್ಲೆಯಲ್ಲಿ ಈ ದಿನ ಜಿಲ್ಲಾ ಮಟ್ಟದ ಪ್ರಜಾಸೇವಾ ಅಭಿಯಾನ, ಜನರ ಜೊತೆಗೆ ಸಭೆಯನ್ನು ನಡೆಸುತ್ತಿದೆ. ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದ ಕಾರ್ಯಕ್ರಮವಾಗಿ ತಿಪಟೂರು ತಾಲೂಕು ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಳೆದ ಎರಡು ತಿಂಗಳಿಂದ ಈ ಪ್ರಜಾಸೇವಾ ಅಭಿಯಾನ ಪ್ರಾರಂಭವಾಗಿದೆ. ಇದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಮಹತ್ವದ ಹೆಜ್ಜೆ. ಜನರಿಗೆ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ತಲುಪಬೇಕು ಎಂಬ ಬಗ್ಗೆ ದಿಟ್ಟ ನಿರ್ಧಾರ. ಪಾರದರ್ಶಕವಾಗಿ, ಪ್ರತಿಯೊಬ್ಬ ಅರ್ಜಿದಾರನಿಗೆ ತನ್ನ ಅರ್ಜಿ ಏನಾಗಿದೆ, ಎಲ್ಲಿದೆ ಎಂದು ತಿಳಿಸುವುದು ಇದರ ಉದ್ದೇಶ. ನೀವು ಕೊಟ್ಟ ಅರ್ಜಿಗೆ ಕಂಪ್ಯೂಟರ್‌ನಲ್ಲಿ ನಂಬರ್ ಆಗಬೇಕು. ಅದು ೭ ದಿನ ಆ ಅಧಿಕಾರಿ ಹತ್ತಿರ ಇರಬೇಕು. ಅರ್ಜಿಯಲ್ಲಿರುವ ವಿಷಯಕ್ಕೆ ಆಗುವುದಾದರೆ ಆಗುತ್ತದೆ ಎಂದು ಹೇಳಬೇಕು, ಇಲ್ಲವಾದರೆ ಯಾಕೆ ಆಗುವುದಿಲ್ಲ ಎಂದು ಹೇಳಬೇಕು. ನಂತರ ಅದು ಮುಂದಿನ ಅಧಿಕಾರಿಗೆ ಹೋಗಬೇಕು. ಅಂತಿಮವಾಗಿ ತಾಲೂಕು ಮಟ್ಟದ ಅಧಿಕಾರಿಯಲ್ಲಿ ನಿಮ್ಮ ಸಮಸ್ಯೆ ಬಗೆಹರಿಯಬೇಕು ಎಂದರು.ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಮಡಿಲು ತುಂಬುವ ಕಾರ್ಯಕ್ರಮ ಹಾಗೂ ವಿವಿಧ ಇಲಾಖೆಗಳ ಸವಲತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.