ಬಾಬಾ ಸಾಹೇಬ ಅಂಬೇಡ್ಕರ್ ದಮನಿತರ ಆಶಾಕಿರಣ: ಪೃಥ್ವಿರಾಜ್ ಎನ್.

KannadaprabhaNewsNetwork |  
Published : Apr 15, 2026, 02:30 AM IST
ಕಾರ್ಯಕ್ರಮವನ್ನು ನಾಗರಾಜ ಮಡಿವಾಳರ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತುಳಿತಕ್ಕೆ ಒಳಗಾದ ಸಮುದಾಯದ ಧ್ವನಿಯಾಗಿ ಹೋರಾಡಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರು.

ಲಕ್ಷ್ಮೇಶ್ವರ: ಶೋಷಣೆರಹಿತ ಸಮಾಜದ ಕನಸು ಕಂಡವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಸ್ವಾತಂತ್ರ್ಯ ಮತ್ತು ಶಿಕ್ಷಣದಿಂದ ಮಾತ್ರ ಸಮಾಜದ ಉದ್ಧಾರವಾಗಲು ಸಾಧ್ಯ ಎಂದು ಪೃಥ್ವಿರಾಜ್ ಎನ್. ತಿಳಿಸಿದರು.

ಪಟ್ಟಣದ ಚೆನ್ನಮ್ಮ ವನ ಕಲ್ಯಾಣ ಮಂಟಪದಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಪಂ, ತಾಲೂಕು ಆಡಳಿತ, ದಲಿತ ಸಂಘರ್ಷ ಸಮಿತಿ, ತಾಲೂಕಿನ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಹಾಗೂ ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿಯಲ್ಲಿ ಉಪನ್ಯಾಸ ನೀಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತುಳಿತಕ್ಕೆ ಒಳಗಾದ ಸಮುದಾಯದ ಧ್ವನಿಯಾಗಿ ಹೋರಾಡಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರು. ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಸಮಾಜದಲ್ಲಿ ಇಂದಿಗೂ ಕೂಡಾ ಅಸ್ಪೃಶ್ಯತೆ ಜೀವಂತವಾಗಿರುವುದು ನೋವಿನ ಸಂಗತಿಯಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಿತರ ಆಶಾ ಕಿರಣವಾಗಿದ್ದರು.

ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಜಗತ್ತಿನ ಅತ್ಯುತ್ತಮ ಸಂವಿಧಾನ ಕೊಡುಗೆ ಕೊಟ್ಟ ಕೀರ್ತಿ ಬಾಬಾಸಾಹೇಬ್ ಅಂಬೇಡ್ಕರ್ ಅವರದ್ದು. ಅಂಬೇಡ್ಕರ್ ಅವರ ಆದರ್ಶಗಳನ್ನು ಆಚರಣೆಯಲ್ಲಿ ತರುವ ಕಾರ್ಯ ಹಿಂದಿಗಿಂತಲೂ ಈಗ ಹೆಚ್ಚು ಅವಶ್ಯವಾಗಿವೆ ಎಂದು ಅವರು ಹೇಳಿದರು.

ಈ ವೇಳೆ ತಾಲೂಕು ಪಂಚ ಗ್ಯಾರಂಟಿ ಅಧ್ಯಕ್ಷ ನಾಗರಾಜ ಮಡಿವಾಳರ, ತಹಸೀಲ್ದಾರ್ ಧನಂಜಯ ಎಂ., ತಾಪಂ ಇಒ ಕೃಷ್ಣಪ್ಪ ಧರ್ಮರ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವಣ್ಣೆಪ್ಪ ನಂದೆಣ್ಣವರ, ಕೋಟೇಪ್ಪ ವರ್ಧಿ, ಪೂರ್ಣಾಜಿ ಕರಾಟೆ, ನಾಗರಾಜ ದೊಡ್ಡಮನಿ, ಹನಮಂತಪ್ಪ ನಂದೆಣ್ಣವರ, ನಾಗರಾಜ ನಂದೆಣ್ಣವರ, ಎಚ್.ಡಿ. ಸಂಜೀವಣ್ಣವರ, ದೇವಪ್ಪ ನಂದೆಣ್ಣವರ, ರಾಮು ಗಡದವರ, ರಾಮು ಅಡಗಿಮನಿ, ಫಕ್ಕೀರೇಶ ನಂದೆಣ್ಣವರ, ಫಕ್ಕೀರೇಶ ಮ್ಯಾಟಣ್ಣವರ, ಫಕ್ಕೀರೇಶ ಭಜಕ್ಕನವರ, ಬಸವರಾಜ ನಂದೆಣ್ಣವರ, ಮಧು ಹಾದಿಮನಿ ಹಾಗೂ ಹೆಸ್ಕಾಂ ಎಇಇ ಆಂಜನೇಯಪ್ಪ, ಮೃತ್ಯುಂಜಯ ಗುಡ್ಡದ್ವಾನೇವರಿ, ಎಪಿಎಂಸಿ ಕಾರ್ಯದರ್ಶಿ ಎಂ.ಎನ್. ಹಳೆಮನಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಪಿಎಸ್‌ಐ ನಾಗರಾಜ ಗಡದ, ಹುಡೇದ ಸೇರಿದಂತೆ ಅನೇಕರು ಇದ್ದರು. ಉಮೇಶ ನೇಕಾರ ನಿರ್ವಹಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಸ್. ಸಂಕನೂರ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್‌ ವ್ಯಕ್ತಿಯಲ್ಲ ಜಗತ್ತಿನ ಶಕ್ತಿ
ನಾಯಿ, ಬೆಕ್ಕುಗಳಿಗಿಲ್ಲದ ಮೈಲಿಗೆ ಮನುಷ್ಯರಿಗೆ ಏಕೆ?