ಬಾಬು ಜಗಜೀವನ ರಾಮ್‌ ದೇಶದ ದಕ್ಷ ಆಡಳಿತಗಾರ

KannadaprabhaNewsNetwork |  
Published : Apr 06, 2026, 01:15 AM IST
ಫೋಟೋ ಕ್ಯಾಪ್ಷನ್-ಚಿತ್ರದುರ್ಗ ತಾಲೂಕಿನ ಸೀಬಾರದಲ್ಲಿ ಬಾಬುಜಗಜೀವನ ರಾಂ ಭಾವಚಿತ್ರಕ್ಕೆ ಮಾಜಿ ಸಚಿವಎಚ್.ಆಂಜನೇಯ,ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಪುಷ್ಪನಮನ ಸಲ್ಲಿಸಿದರು. | Kannada Prabha

ಸಾರಾಂಶ

ಚಿತ್ರದುರ್ಗ ತಾಲೂಕಿನ ಸೀಬಾರದಲ್ಲಿ ಬಾಬು ಜಗಜೀವನ ರಾಮ್‌ ಭಾವಚಿತ್ರಕ್ಕೆ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಪುಷ್ಪನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಂಬೇಡ್ಕರ್ ನಿಧನದ ಬಳಿಕ ಶೋಷಿತರು, ಅಸ್ಪೃಶ್ಯರು, ದುರ್ಬಲರಲ್ಲಿ ಮನೆ ಮಾಡಿದ್ದ ಅನಾಥ ಪ್ರಜ್ಞೆ ದೂರಗೊಳಿಸಿ ಅವರನ್ನು ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಿದ ಮಹಾನ್ ನಾಯಕ ಬಾಬು ಜಗಜೀವನ ರಾಮ್‌ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ತಾಲೂಕಿನ ಸೀಬಾರದ ತಮ್ಮ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಬಾಬು ಜಗಜೀವನ ರಾಮ್‌ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

1956ರಲ್ಲಿ ಅಂಬೇಡ್ಕರ್ ಅಗಲಿಕೆ ದೇಶದ ಪರಿಶಿಷ್ಟ ಸಮುದಾಯದ ಜನರಲ್ಲಿ ಕತ್ತಲು ಆವರಿಸಿಕೊಂಡಿತ್ತು. ಈ ವೇಳೆ ಸಂವಿಧಾನದ ಆಶಯಗಳನ್ನು ಸರ್ಕಾರದಲ್ಲಿ ಮಂತ್ರಿಯಾಗಿದ್ದು ಕೊಂಡು ಸಮರ್ಥವಾಗಿ ಅನುಷ್ಠಾನಗೊಳಿಸಿ ಜನರ ಮನಗೆದ್ದ ನಿಜನಾಯಕ ಬಾಬು ಜಗಜೀವನ ರಾಮ್ ಎಂದು ಬಣ್ಣಿಸಿದರು.

ಮೀಸಲಾತಿ ಅನುಷ್ಠಾನದ ಜೊತೆಗೆ ರೈಲ್ವೆ ಸೇರಿ ವಿವಿಧ ಇಲಾಖೆಯಲ್ಲಿ ಬಡ್ತಿ ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತರ ಬದುಕಿನಲ್ಲಿ ಆಶಾಕಿರಣರಾಗಿ ವಿಜೃಂಭಿಸಿದರು. ನೆಹರೂ, ಇಂದಿರಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವಧಿಯಲ್ಲಿ ಅನೇಕ ಖಾತೆಗಳ ಜೊತೆಗೆ ಒಮ್ಮೆ ಉಪ ಪ್ರಧಾನಿಯಾಗಿ ಆಡಳಿತ ನಡೆಸಿ ದೇಶದ ಗಮನವನ್ನೇ ತನ್ನಡೆಗೆ ಸೆಳೆದ ದಕ್ಷ ಆಡಳಿತಗಾರ ಎಂದರು.

ಸಂಸದೀಯ ಪಟು ದಕ್ಷ ಆಡಳಿತಗಾರನಾಗಿ ಚುನಾವಣೆಯಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದ ಬಾಬು ಜಗಜೀವನ ರಾಮ್‌ ದೇಶದಲ್ಲಿ ಆಹಾರದ ಕೊರತೆ ಎದುರಾದ ವೇಳೆ ಹಸಿರು ಕ್ರಾಂತಿಯ ಮೂಲಕ ಹಸಿವು ನೀಗಿದ ಮಹಾತ್ಮ ಎಂದು ಹೇಳಿದರು.

ದಕ್ಷ ಆಡಳಿತಗಾರ, ಗೆಲುವಿನ ಸರದಾರ, ಉತ್ತಮ ಸಂಸದೀಯ ಪಟು ಆಗಿದ್ದ ಬಾಬು ಜಗಜೀವನ ರಾಮ್‌ ಪ್ರಧಾನಿ ಆಗಲು ಅಂದಿನ ಜಾತಿ ವ್ಯವಸ್ಥೆ ಅಡ್ಡಿಯಾಗಿದ್ದು ನೋವಿನ ವಿಷಯ. ಆದರೆ, ಅಂತಹ ಕಾಲಘಟ್ಟದಲ್ಲಿ ದಲಿತ ನಾಯಕನಿಗೆ ಎಐಸಿಸಿ ಅಧ್ಯಕ್ಷ ಸ್ಥಾನ, ಉಪಪ್ರಧಾನಿ, ರಕ್ಷಣಾ ಖಾತೆ, ಹೀಗೆ ವಿವಿಧ ಉನ್ನತ ಹುದ್ದೆಗಳನ್ನು ಕಾಂಗ್ರೆಸ್ ಪಕ್ಷ ನೀಡುವ ಮೂಲಕ ದಕ್ಷ ವ್ಯಕ್ತಿಗೆ ಗೌರವ ನೀಡಿತು. ಅವರ ಆಶಯಗಳು, ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಅಭಿವೃದ್ಧಿಯ ಹಾದಿಯಲ್ಲಿ ಸಾಗಬೇಕು. ಈ ನಿಟ್ಟಿನಲ್ಲಿ ಯುವ ಪೀಳಿಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್‌ ದೇಶದ ಎರಡು ಕಣ್ಣಿದ್ದಂತೆ. ಅವರನ್ನು ನಾವು ಪ್ರತ್ಯೇಕಿಸಿ ನೋಡಲು ಸಾಧ್ಯವೇ ಇಲ್ಲ. ಇಬ್ಬರ ಚಿಂತನೆಯೂ ದೇಶ ಮತ್ತು ದಲಿತೋದ್ಧಾರ ಆಗಿತ್ತು ಎಂದರು. ದೇಶಕ್ಕೆ ಈ ಇಬ್ಬರು ನಾಯಕರು ಅಪಾರ ಕೊಡುಗೆ ನೀಡಿದ್ದಾರೆ. ಇವರ ಸಾಧನೆಗೆ ಬೆನ್ನೆಲುಬು ಆಗಿ ನಿಂತು ತನ್ನ ಕರ್ತವ್ಯ ನಿರ್ವಹಿಸಿದ ಕಾಂಗ್ರೆಸ್ ಪಕ್ಷ ಮಾತ್ರ ದಲಿತರು, ಸಮರ್ಥರನ್ನು ಗುರುತಿಸಿ ಉನ್ನತ ಸ್ಥಾನ ಕಲ್ಪಿಸಲಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು. ಮುಖಂಡರಾದ ಅನಿಲ್ ಕೋಟಿ, ಚೇತನ್ ಬೋರೇನಹಳ್ಳಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜಿ ಭಾರತ ರಾಜಕಾರಣದಲ್ಲಿ ಪ್ರಾತಃ ಸ್ಮರಣೀಯರು
ಶೀಘ್ರ ಬಾಬು ಜಗಜೀವನರಾಮ್‌ ಭವನ ಕಾಮಗಾರಿ ಪೂರ್ಣ