ಎಲ್‌ಪಿಜಿ ಪರದಾಟ: ಇವಿ ಆಟೋಗಳತ್ತ ಚಿತ್ತ

KannadaprabhaNewsNetwork |  
Published : Apr 06, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಎಲ್‌ಪಿಜಿ ಗ್ಯಾಸ್‌ ಪರದಾಟದಿಂದ ಕಂಗಾಲಾಗಿರುವ ಕಾಫಿ ನಾಡು ಚಿಕ್ಕಮಗಳೂರಿಗ ಆಟೋ ಮಾಲೀಕರು ಮತ್ತು ಚಾಲಕರು ಇದೀಗ ಇವಿ ಆಟೋಗಳ ಮೊರೆ ಹೋಗುತ್ತಿದ್ದಾರೆ.

ಆಟೋ ನಂಬಿ ಬದುಕುತ್ತಿರುವ ಸುಮಾರು ಮೂರು ಸಾವಿರ ಕುಟುಂಬಗಳು ಅತಂತ್ರ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಎಲ್‌ಪಿಜಿ ಗ್ಯಾಸ್‌ ಪರದಾಟದಿಂದ ಕಂಗಾಲಾಗಿರುವ ಕಾಫಿ ನಾಡು ಚಿಕ್ಕಮಗಳೂರಿಗ ಆಟೋ ಮಾಲೀಕರು ಮತ್ತು ಚಾಲಕರು ಇದೀಗ ಇವಿ ಆಟೋಗಳ ಮೊರೆ ಹೋಗುತ್ತಿದ್ದಾರೆ. ಹೌದು. ಕಳೆದ ಒಂದು ತಿಂಗಳಿನಿಂದ ಚಿಕ್ಕಮಗಳೂರು ನಗರದಲ್ಲಿ ಎಲ್‌ಪಿಜಿ ಗ್ಯಾಸ್‌ ಪೂರೈಕೆಯಲ್ಲಿ ಭಾರೀ ಸಮಸ್ಯೆ ಉಂಟಾಗಿದೆ. ಇದರಿಂದ ಆಟೋ ನಂಬಿಕೊಂಡು ಬದುಕುತ್ತಿರುವ ಸುಮಾರು ಮೂರು ಸಾವಿರ ಕುಟುಂಬಗಳು ಅತಂತ್ರ ಸ್ಥಿತಿಗೆ ಈಡಾಗಿವೆ. ಕಳೆದೊಂದು ವಾರದಿಂದ ಆಟೋ ಗ್ಯಾಸ್‌ ಪೂರೈಕೆ ಇಲ್ಲದೇ ಎಲ್ಲ ಗ್ಯಾಸ್‌ ಪಂಪ್‌ ಬಂದ್‌ ಆಗಿವೆ. ಖಾಸಗಿ ಎಲ್‌ಪಿಜಿ ಬಂಕ್‌ ಗಳಲ್ಲಿ ಪ್ರತಿ ಕೆಜಿ ಇಂಧನಕ್ಕೆ ಎರಡುಪಟ್ಟು ಹೆಚ್ಚಿನ ದರ ವಿಧಿಸಲಾಗುತ್ತಿದೆ. ಹೀಗಾಗಿ, ನೂರು ಆಟೋಗಳು ರಸ್ತೆ ಬದಿ ನಿಂತು ಕೊಂಡಿವೆ. ಮತ್ತಷ್ಟು ಆಟೋಗಳನ್ನು ಶೆಡ್‌ಗೆ ಹಾಕಲಾಗಿದೆ. ಆಟೋ ಬಿಟ್ಟು ಬೇರೆ ಏನು ಗೊತ್ತಿಲ್ಲದವರು ಇದೀಗ ಈ ಸಮಸ್ಯೆಯಿಂದ ಶಾಶ್ವತವಾಗಿ ಪಾರಾಗುವುದಕ್ಕೆ ಹಲವು ಆಟೋ ಚಾಲಕರು ಇವಿ(ಎಲೆಕ್ಟ್ರಿಕ್‌ ವೆಹಿಕಲ್‌) ಆಟೋ ಖರೀದಿಗೆ ಮುಂದಾಗಿದ್ದಾರೆ.ಖರೀದಿ ಮತ್ತು ವಿಚಾರಣೆ ಸಂಖ್ಯೆ ಹೆಚ್ಚಳ ಪ್ರತಿಷ್ಠಿತ ಕಂಪನಿಗಳಾದ ಮಹಿಂದ್ರಾ ಶೋ ರೂಂಗಳಲ್ಲಿ ಈ ಎಲ್‌ಪಿಜಿ ಅಭಾವ ಶುರುವಾದ ಮೇಲೆ ಇವಿ ಆಟೋ ಖರೀದಿ ಮತ್ತು ಇವಿ ಆಟೋ ಖರೀದಿಗೆ ಸಂಬಂಧಿಸಿದಂತೆ ಶೋ ರೂಂಗಳಿಗೆ ಭೇಟಿ ನೀಡಿ ವಿಚಾರಣೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ.ಮಾಹಿತಿ ಪ್ರಕಾರ, ಈ ಹಿಂದೆ ತಿಂಗಳಿಗೆ ಸುಮಾರು ಐದರಿಂದ ಹತ್ತು ಮಂದಿ ವಿಚಾರಣೆ ಮಾಡುತ್ತಿದ್ದರು, ಇದೀಗ ಈ ಸಂಖ್ಯೆ 25 ರಿಂದ 30ಕ್ಕೆ ಏರಿಕೆಯಾಗಿದೆ ಎಂದು ಶೋರೂಂ ಸಿಬ್ಬಂದಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ಶೇಕಡ 5 ಮಾರಾಟ ಹೆಚ್ಚಳ: ಕುತೂಹಕ್ಕೆ ಕಳೆದ ತಿಂಗಳು ಭೇಟಿ ನೀಡಿ ವಿಚಾರಣೆ ಮಾಡಿಕೊಂಡು ಬಂದವರ ಪೈಕಿ ಈ ತಿಂಗಳು ಬ್ಯಾಂಕ್‌ ಸಾಲ ಸೌಲಭ್ಯ ಅಥವಾ ಇನ್ನಿತರೆ ವ್ಯವಸ್ಥೆ ಮಾಡಿ ಖರೀದಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ಮಾರಾಟದಲ್ಲಿ ಶೇ.5 ರಷ್ಟು ಹೆಚ್ಚಳ ಉಂಟಾಗಿದೆ ಎಂದು ಮಹಿಂದ್ರಾ ಕಂಪನಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.ಪೂರೈಕೆ ಸಮಸ್ಯೆ:ಖರೀದಿಗೆ ಗ್ರಾಹಕರು ಬುಕಿಂಗ್‌ ಮಾಡುತ್ತಿದ್ದಾರೆ. ಆದರೆ, ಆರ್ಥಿಕ ವರ್ಷದ ಕೊನೆ ಆಗಿರುವುದರಿಂದ ಹೊಸ ದರ ನಿಗದಿ ಹಾಗೂ ಮಾಡಲ್‌ ಬದಲಾವಣೆ ಸೇರಿದಂತೆ ಮೊದಲಾದ ಪ್ರಕ್ರಿಯೆ ಆಗಬೇಕಾಗಿದೆ. ಈ ಕಾರಣಕ್ಕೆ ತ್ವರಿತವಾಗಿ ಗ್ರಾಹಕರಿಗೆ ವಾಹನ ನೀಡುವುದಕ್ಕೂ ಆಗುತ್ತಿಲ್ಲ ಎಂದು ಶೋರೂಂ ಅಧಿಕಾರಿಗಳು ತಿಳಿಸಿದ್ದಾರೆ.-- ಕೋಟ್‌ -- ಕಳೆದ ಒಂದು ವರ್ಷದಿಂದ ಇವಿ ಆಟೋ ಖರೀದಿ ಮಾಡಿ ಓಡಿಸಿ ಜೀವನ ನಡೆಸಲಾಗುತ್ತಿದೆ. ತುಂಬಾ ಚೆನ್ನಾಗಿದೆ. ಗ್ಯಾಸ್‌ ಆಟೋಕ್ಕೆ ದಿನಕ್ಕೆ ₹150 ರಿಂದ 300 ಇಂದನಕ್ಕೆ ವೆಚ್ಚ ಮಾಡಬೇಕಾಗಿತ್ತು. ಆದರೆ, ಈಗ ವಿದ್ಯುತ್‌ ನಿಂದ ಚಾರ್ಜ್‌ ಮಾಡುವುದಕ್ಕೆ ಗರಿಷ್ಠ ₹50 ವೆಚ್ಚ ಮಾಡಿದರೆ ಸಾಕು. ಗ್ಯಾಸ್‌ ಸಮಸ್ಯೆ ತಲೆ ಬಿಸಿ ಉಂಟಾಗಿಲ್ಲ.- ನಟರಾಜ್‌, ಇವಿ ಆಟೋ ಚಾಲಕ, ಬೈಪಾಸ್‌, ಚಿಕ್ಕಮಗಳೂರು

(ಇವಿ ಆಟೋ ಫೋಟೋ ಬಳಕೆ ಮಾಡಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜಿ ಭಾರತ ರಾಜಕಾರಣದಲ್ಲಿ ಪ್ರಾತಃ ಸ್ಮರಣೀಯರು
ಶೀಘ್ರ ಬಾಬು ಜಗಜೀವನರಾಮ್‌ ಭವನ ಕಾಮಗಾರಿ ಪೂರ್ಣ