ಕೃಷಿ ಕ್ಷೇತ್ರಕ್ಕೆ ಬಾಬು ಜಗಜೀವನ್‍ರಾಮ್ ಕೊಡುಗೆ ಅಪಾರ

KannadaprabhaNewsNetwork |  
Published : Apr 06, 2026, 02:00 AM IST
05ಬಿಜಿಪಿ-1 | Kannada Prabha

ಸಾರಾಂಶ

ಹಸಿರು ಕ್ರಾಂತಿಯನ್ನೇ ರೂಪಿಸಿದ ಜಗಜೀವನರಾಂ ರವರು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು. ಅಲ್ಲದೆ ಇಂತಹ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಜನರಿಗೆ ಅರಿವು ಮೂಡಿಸುವಂತಹ ಕೆಲಸಕ್ಕೆ ಸರ್ಕಾರಗಳು ಮುಂದಾಗಬೇಕಾದ ಅಗತ್ಯವಿದೆ.

ಬಾಗೇಪಲ್ಲಿ: ದೇಶದ ಕೃಷಿ ಕ್ಷೇತ್ರಕ್ಕೆ ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿ ಹರಿಕಾರ ಡಾ.ಬಾಬುಜಗಜೀವನ್‍ರಾಮ್ ರವರ ಕೊಡುಗೆ ಅಪಾರವಾದದ್ದು, ಇಂತಹ ಮಹಾನ್ ನಾಯಕರನ್ನು ಸದಾ ನೆನಸಿಕೊಳ್ಳಬೇಕಾಗಿರುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ಜಿ.ಪಂ, ತಾ.ಪಂ, ಪುರಸಭೆ, ಸಮಾಜಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಡೆದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ರವರ 119ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಕಷ್ಟದ ಸಮಯದಲ್ಲಿ ದೇಶದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ನಿಲುವು ತೆಗೆದುಕೊಂಡು ಇಡೀ ಕೃಷಿ ಕ್ಷೇತ್ರವನ್ನೇ ಗಣನೀಯವಾಗಿ ಬದಲಾವಣೆ ತರುವ ಮೂಲಕ ಹಸಿರು ಕ್ರಾಂತಿಯನ್ನೇ ರೂಪಿಸಿದ ಜಗಜೀವನರಾಂ ರವರು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು. ಅಲ್ಲದೆ ಇಂತಹ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಜನರಿಗೆ ಅರಿವು ಮೂಡಿಸುವಂತಹ ಕೆಲಸಕ್ಕೆ ಸರ್ಕಾರಗಳು ಮುಂದಾಗಬೇಕಾದ ಅಗತ್ಯವಿದೆ ಎಂದರು.

ತಹಸೀಲ್ದಾರ್ ಮನೀಷಾ ಎನ್.ಪತ್ರಿ ಮಾತನಾಡಿ, ದೇಶದ ಪ್ರತಿಯೊಬ್ಬರಿಗೂ ಆಹಾರ ಸಿಗಬೇಕು ಎನ್ನುವ ದೂರದೃಷ್ಠಿಯಿಂದ ಕೃಷಿ ಕ್ಷೇತ್ರದಲ್ಲಿ ಬಾರಿ ಬದಲಾವಣೆ ತಂದು ಆಹಾರ ಉತ್ಪಾದನೆಯನ್ನು ಹೆಚ್ಚಳ ಮಾಡುವ ಮೂಲಕ ಹಸಿರು ಕ್ರಾಂತಿಯನ್ನೇ ಸಾರಿದಂತಹ ಮಹಾನ್ ನಾಯಕರು ಎಂದರು

ಈ ಸಂದರ್ಭದಲ್ಲಿ ಬಿಇಒ ವೆಂಕಟೇಶಪ್ಪ, ಸಿಡಿಪಿಒ ಕೆ.ರಾಮಚಂದ್ರ, ಕೈಗಾರಿಕೆ ವಿಸ್ತರಣಾಧಿಕಾರಿ ಮೆಹಬೂಬ್ ಬಾಷಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜೆ.ಸಿ.ಮಂಜುಳಾ, ಪುರಸಭೆ ಮುಖ್ಯಾಧಿಕಾರಿ ಎ.ಶ್ರೀನಿವಾಸ್ ಇದ್ದರು.

05ಬಿಜಿಪಿ-1: ಬಾಗೇಪಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ರವರ 119 ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎನ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೈಂಗಿಕ‌ ದೌರ್ಜನ್ಯ: ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಲಿ: ರವಿಂದ ಬೆಲ್ಲದ
ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ: ಆರೋಪಿ ಬಂಧನ