ಬಾಬೂಜೀ ಸಮಾನತೆಗಾಗಿ ಹೋರಾಡಿದ ನಾಯಕ: ವಿಜಯ್ ಕುಮಾರ್ ಅಭಿಮತ

KannadaprabhaNewsNetwork |  
Published : Jul 06, 2025, 11:48 PM IST
ಫೋಟೋ: 6 ಹೆಚ್‌ಎಸ್‌ಕೆ 1ಹೊಸಕೋಟೆ ನಗರದ ತಾಲೂಕು ಕಚೇರಿಯಲ್ಲಿ ಡಾ ಬಾಬು ಜಗಜೀವನ ರಾಮ್ ರವರ 39ನೇ ಪುಣ್ಯಸ್ಮರಣೆ ಪ್ರಯುಕ್ತ ಬಾಬು ಜಗಜೀವನ ರಾಮ್ ಬಾವಚಿತ್ರಕ್ಕೆ ಬಿಎಂಆರ್‌ಡಿಎ ಸದಸ್ಯ ಡಾ.ಹೆಚ್.ಎಂ.ಸುಬ್ಬರಾಜ್ ಸೇರಿದಂತೆ ಹಲವಾರು ಗಣ್ಯರು ಪುಷ್ಪ ನಮನ ಸಮರ್ಪಿಸಿ ಗೌರವ ಸಲ್ಲಿಸಿದರು. | Kannada Prabha

ಸಾರಾಂಶ

ದೇಶದಲ್ಲಿ ಸಮಾನತೆ ತರುವಲ್ಲಿ ಹೋರಾಡಿದ ನಾಯಕರಾಗಿದ್ದು, ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂರವರು ದೇಶದ ಎರಡು ಕಣ್ಣುಗಳಿದ್ದಂಗೆ, ಸಂವಿಧಾನ ಬರೆದ ಅಂಭೇಡ್ಕರ್ ಜೊತೆಗೆ ಬಾಬು ಜಗಜೀವನ್ ರಾಂ ಅವರು ಸಂವಿಧಾನದಡಿ ಸರ್ವ ಸಮಾನತೆಗೆ ಹೋರಾಟದ ಮೂಲಕ ಶ್ರಮಿಸಿದ ಮಹಾನ್ ನಾಯಕ.

ಕನ್ನಡಪ್ರಭವಾರ್ತೆ ಹೊಸಕೋಟೆ

ಹೋರಾಟದ ಮೂಲಕ ರಾಜಕೀಯ ಸೇರಿದ ಬಾಬು ಜಗಜೀವನ್ ರಾಂರವರು ತಮ್ಮ 28ನೇ ವಯಸ್ಸಿನಲ್ಲಿ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದ ಮಹಾನ್ ನಾಯಕ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಡಾ.ಬಾಬು ಜಗಜೀವನ್ ರಾಂರವರ 39ನೇ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಸಮಾನತೆ ತರುವಲ್ಲಿ ಹೋರಾಡಿದ ನಾಯಕರಾಗಿದ್ದು, ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂರವರು ದೇಶದ ಎರಡು ಕಣ್ಣುಗಳಿದ್ದಂಗೆ, ಸಂವಿಧಾನ ಬರೆದ ಅಂಭೇಡ್ಕರ್ ಜೊತೆಗೆ ಬಾಬು ಜಗಜೀವನ್ ರಾಂ ಅವರು ಸಂವಿಧಾನದಡಿ ಸರ್ವ ಸಮಾನತೆಗೆ ಹೋರಾಟದ ಮೂಲಕ ಶ್ರಮಿಸಿದ ಮಹಾನ್ ನಾಯಕ ಎಂದರು.

ಬಿಎಂಆರ್‌ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜ್ ಮಾತನಾಡಿ, ಬಾಬು ಜಗಜೀವನ್ ರಾಂರವರು ೧೯೭೧ ರಲ್ಲಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು, ದೇಶದಲ್ಲಿ ಶಾಂತಿ- ನೆಮ್ಮದಿ, ಸಮಾನತೆಗೆ ಹೋರಾಡಿದ್ದರು, ಅದರಂತೆ ಸಾರಿಗೆ ಸಚಿವ, ಕಾರ್ಮಿಕ ಸಚಿವ, ಕೃಷಿ ಸಚಿವರಾಗಿ ಅನೇಕ ಹುದ್ದೆ ಹೊಂದುವ ಮೂಲಕ ಸಮಾಜದಲ್ಲಿ ಅನೇಕ ಸುಧಾರಣೆ ತಂದಿದ್ದರು ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜ್ ಮಾತನಾಡಿ, ನಾನು ಪಟ್ಟ ಕಷ್ಟ ನಮ್ಮ ಸಮುದಾಯ ಪಡಬಾರದು ಎಂಬ ಉದ್ದೇಶದಿಂದ ಆಹಾರ ಭದ್ರತೆ ಯೋಜನೆಯಲ್ಲಿ ಸ್ವಾಮಿನಾಥನ್ ರಿಗೆ ಮಾರ್ಗದರ್ಶನ ನೀಡಿ ಹಸಿರು ಕ್ರಾಂತಿ ಮೂಡಿಸಿದ ನಾಯಕ ಬಾಬೂಜೀ, ಅವರ ಆದರ್ಶಗಳನ್ನು ನಾವೆಲ್ಲಾ ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಡಾ. ಸಿ.ಎನ್. ನಾರಾಯಣಸ್ವಾಮಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದರಾಜು, ನಗರಸಭೆ ಮಾಜಿ ಸದಸ್ಯ ಶಿವಾನಂದ್, ಮುಖಂಡರಾದ ಡಿ.ಎಂ. ಮುನಿರಾಜ್, ಸುಬ್ರಮಣಿ, ಶ್ರೀಕಾಂತ್ ಬಡಿಗೇರ್, ಮುನಿರಾಜ್, ಮಂಜುನಾಥ್ ಸೇರಿ ಹಲವು ಮುಖಂಡರು ಹಾಜರಿದ್ದರು.

PREV