ಹಸಿದ ಭಾರತಕ್ಕೆ ಹಸಿರು ಕ್ರಾಂತಿ ಮೂಲಕ ಉಣಿಸಿದ ಅನ್ನದಾತ ಬಾಬೂಜಿ

KannadaprabhaNewsNetwork |  
Published : Apr 06, 2026, 01:15 AM IST
35 | Kannada Prabha

ಸಾರಾಂಶ

ಬಾಬೂಜಿ ಬೆಳೆದು ನಿಂತ ಪರಿ ಬೆರಗು ಹುಟ್ಟಿಸುತ್ತದೆ. ಹಸಿರು ಕ್ರಾಂತಿ ಹರಿಕಾರ, ಸ್ವಾತಂತ್ರ್ಯ ಸೇನಾನಿ, ಕಾರ್ಮಿಕ ವರ್ಗದ ನೇತಾರ, ಬಾಂಗ್ಲಾದೇಶ ಉಗಮಕ್ಕೆ ಕಾರಣಿಭೂತರು. ಹಸಿದ ಭಾರತಕ್ಕೆ ಹಸಿರು ಕ್ರಾಂತಿ ಮೂಲಕ ಅನ್ನ ಉಣಿಸಿದ ಅನ್ನದಾತ.

ಕನ್ನಡಪ್ರಭ ವಾರ್ತೆ ಮೈಸೂರು

ಹಸಿದ ಭಾರತಕ್ಕೆ ಹಸಿರು ಕ್ರಾಂತಿ ಮೂಲಕ ಅನ್ನ ಉಣಿಸಿದ ಅನ್ನದಾತ ಬಾಬು ಜಗಜೀವನರಾಮ್ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಶೈಕ್ಷಣಿಕ ಡೀನ್ ಪ್ರೊ. ರಾಮನಾಥಂ ನಾಯ್ಡು ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಡಾ. ಬಾಬು ಜಗಜೀವನರಾಮ್ ಅಧ್ಯಯನ ಪೀಠವು ಭಾನುವಾರ ಆಯೋಜಿಸಿದ್ದ ಬಾಬೂಜಿ 119ನೇ ಜಯಂತಿಯಲ್ಲಿ ಮಾತನಾಡಿದ ಅವರು, ಬಾಬೂಜಿ ಬೆಳೆದು ನಿಂತ ಪರಿ ಬೆರಗು ಹುಟ್ಟಿಸುತ್ತದೆ. ಹಸಿರು ಕ್ರಾಂತಿ ಹರಿಕಾರ, ಸ್ವಾತಂತ್ರ್ಯ ಸೇನಾನಿ, ಕಾರ್ಮಿಕ ವರ್ಗದ ನೇತಾರ, ಬಾಂಗ್ಲಾದೇಶ ಉಗಮಕ್ಕೆ ಕಾರಣಿಭೂತರು ಎಂದರು.

ಬಾಬು ಜಗಜೀವನರಾಮ್ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ.ಆರ್. ಶರಣಮ್ಮ ಮಾತನಾಡಿ, ದೇಶದ ರಕ್ಷಣಾ ಇಲಾಖೆ ವಹಿಸಿಕೊಂಡ ಸಂದರ್ಭದಲ್ಲಿ ಪಾಕಿಸ್ತಾನ ಭಾರತಕ್ಕೆ ಶರಣಾಗತಿಯಾಗುವಂತೆ ಮಾಡಿ, ಹೊಸ ರಾಷ್ಟ್ರವಾದ ಬಾಂಗ್ಲಾದೇಶ ಉದಯಕ್ಕೆ ಕಾರಣರಾದರು. ಬಾಬೂಜಿಯವರು ಎಲ್ಲ ಸಮಾಜದ ಪರವಾಗಿ ಕೆಲಸ ಮಾಡಿದ ವ್ಯಕ್ತಿತ್ವ, ಇವರು ಸಾರಿಗೆ, ರಕ್ಷಣಾ, ಕಾರ್ಮಿಕ, ರೈಲು ಮಂತ್ರಿಯಾಗಿದ್ದ ಸಂಧರ್ಭದಲ್ಲಿ ಹೊಸ ಯೋಜನೆಗಳನ್ನು ತರುವ ಮೂಲಕ ಇತಿಹಾಸ ನಿರ್ಮಿಸಿದರು ಎಂದರು.

ಡಾ.ಜೆ.ಎಸ್. ಚಂದ್ರಶೇಖರ್, ಸತ್ಯನಾರಾಯಣ ಗೌಡ, ದಯಾನಂದ, ಪ್ರವೀಣ್, ಸಿದ್ದೇಗೌಡ, ಚೇತನ ಮೊದಲಾದವರು ಇದ್ದರು.ಬಿಜೆಪಿ ಕಚೇರಿಯಲ್ಲಿ ಬಾಬೂಜಿ ಜನ್ಮದಿನಾಚರಣೆ

ಕನ್ನಡಪ್ರಭ ವಾರ್ತೆ ಮೈಸೂರುನಗರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮದಿನ ಆಯೋಜಿಸಲಾಗಿತ್ತು.

ಬಾಬೂಜಿ ಅವರ ಭಾವಚಿತ್ರಕ್ಕೆ ನಗರ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಲ್. ನಾಗೇಂದ್ರ ಅವರು ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರು ಶೋಷಿತ ಸಮುದಾಯದಲ್ಲಿ ಹುಟ್ಟಿದ ಮಹಾನ್ ಚೇತನ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.ಕೇಂದ್ರದಲ್ಲಿ ಆಹಾರ ಮಂತ್ರಿಯಾಗಿ ಆಹಾರ ಭೀಕರ ಬರಗಾಲದ ಸಮಯದಲ್ಲಿ ಆಹಾರ ಬಿಕ್ಕಟ್ಟು ನಿಭಾಯಿಸುವವರೆಗೆ ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಿಸಲು ಅವರ ಶ್ರಮ ಆಪಾರ. ಅದ್ದರಿಂದ ಅವರು ಹಸಿರು ಕ್ರಾಂತಿಯ ಹರಿಕಾರ ಎಂದೇ ಜನಪ್ರಿಯತೆ ಪಡೆದರು. ಬಾಬೂಜಿ ಅವರ ಜಿವನ ಚರಿತ್ರೆ ಪ್ರತಿಯೊಬ್ಬ ವ್ಯಕ್ತಿಗೂ ತಲುಪಿ ಅವರ ಆದರ್ಶಗಳನ್ನು ಗೌರವಿಸಿ ಪಾಲಿಸಬೇಕು ಎಂದರು.

ಈ ವೇಳೆ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಬಿ.ಎಂ.ರಘು, ರುದ್ರಮೂರ್ತಿ, ಉಪಾಧ್ಯಕ್ಷ ಮೈ.ಪು. ರಾಜೇಶ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ, ನಗರ ಪ್ರಧಾನ ಕಾರ್ಯದರ್ಶಿ ಕಾರ್ತಿಕ್, ಮರಿಯಪ್ಪ, ಸ್ವಾಮಿ, ಧರ್ಮರಾಜ್, ಚಲುವರಾಜ್, ಸೋಮೇಶ್, ಸರ್ವೇಶ್, ಸಿದ್ದರಾಜು, ಸುರೇಂದ್ರಬಾಬು, ಶಿವಣ್ಣ, ಸಿದ್ದರಾಜು, ಕೆ. ಗಿರೀಶ್, ಎಸ್ಟಿ ಮೋರ್ಚಾ ಅಧ್ಯಕ್ಷ ಪಡುವಾರಹಳ್ಳಿ ಎಂ. ರಾಮಕೃಷ್ಣ, ನಗರ ಪಾಲಿಕೆ ಮಾಜಿ ಸದಸ್ಯ ಚಿಕ್ಕವೆಂಕಟು, ಮಂಜುನಾಥ್, ಚಂದ್ರು, ರವಿ ನಾಗರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜಿ ಭಾರತ ರಾಜಕಾರಣದಲ್ಲಿ ಪ್ರಾತಃ ಸ್ಮರಣೀಯರು
ಶೀಘ್ರ ಬಾಬು ಜಗಜೀವನರಾಮ್‌ ಭವನ ಕಾಮಗಾರಿ ಪೂರ್ಣ