ವಾಡಿ: ಇಂಗಳಗಿ ಗ್ರಾಮದಲ್ಲಿ ಗಂಡು ಮಗುವಿಗೆ ಜನ್ಮ ನೀಡಿ, ಬಾಣಂತಿ ಸಾವುನ್ನಪ್ಪಿದ್ದಾಳೆ. ಇದು ಗ್ರಾಮದಲ್ಲಿ ಎರಡನೇ ಹೆರಿಗೆ ಸಾವಿನ ಧಾರುಣ ಘಟನೆಯಾಗಿದೆ. ಕವಿತಾ ಚನ್ನಯ್ಯಾ ಪತ್ರಿ(27) ಮೃತ ದುರ್ದೈವಿ. ಮೃತರಿಗೆ 7 ವರ್ಷದ ನಂತರ ಗರ್ಭಿಣಿಯಾಗಿದ್ದರು. ಸೂಕ್ತ ಚಿಕಿತ್ಸೆ ಕೊರತೆ ಕಾರಣಕ್ಕೆ ಮೊದಲನೇ ಹೆರಿಗೆಗೆ ಹದಿನೈದು ದಿನದ ಹಿಂದೆಯೇ ತವರಿಗೆ ಹೋಗಿದ್ದಳು. ಶನಿವಾರ ಹೆರಿಗೆ ನೋವಿನಿಂದ ಬಳುಲುತ್ತಿದ್ದ ಕವಿತಾಳನ್ನು ಕಲಬುರಗಿ ವಾತ್ಸಲ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಭಾನುವಾರ ಬೆಳಿಗ್ಗೆ ಬಾಣಂತಿ ಆಸ್ಪತ್ರೆಯಲ್ಲೇ ಸಾವುನಪ್ಪಿದ್ದಾಳೆ. ಹೆರಿಗೆ ಸಮಯದಲ್ಲಿ ಶಸ್ತ್ರಚಿಕಿತ್ಸೆಯಿಂದ ಮಗುವನ್ನು ಹೊರ ತೆಗೆಯಲಾಗಿದೆ. ಹೆರಿಗೆ ನಂತರ ರಕ್ತಸ್ರಾವ ಉಂಟಾಗಿ, ಬಾಣಂತಿ ಸಾವುನ್ನಪ್ಪಿರಬಹುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ವೀರನಾಥ ತಿಳಿಸಿದ್ದಾರೆ.