ಕನ್ನಡಪ್ರಭ ವಾರ್ತೆ ಪಾಂಡವಪುರ
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳನ್ನು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಆಯ್ಕೆ ಮಾಡಿ ತಯಾರಿಸಿದ್ದ ಆಯ್ಕೆ ಪಟ್ಟಿಯನ್ನು ಮಠದ ಶ್ರೀಶಿವಬಸವ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ರೈತರ ಎದುರು ಓಪನ್ ಮಾಡಿದರು.
ಬಳಿಕ ಬಹುಮಾನಕ್ಕೆ ಆಯ್ಕೆಯಾದ ಪಟ್ಟಿಯಲ್ಲಿದ್ದ ರೈತರ ಹೆಸರನ್ನು ಇಲಾಖೆ ಸಹಾಯಕ ನಿರ್ದೇಶಕ ಮಹೇಂದ್ರ ಓದಿದರು. ಬಹುಮಾನ ಪಡೆದ ರೈತರಿಗೆ ಸ್ವಾಮೀಜಿ ಹಾಗೂ ಶಾಸಕರು ಚಿನ್ನದ ನಾಣ್ಯ ಹಾಗೂ ಪ್ರಶಂಸೆ ಪತ್ರವನ್ನು ನೀಡಿ ಗೌರವಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬಹಳ ಉತ್ಸಾಹದಿಂದ ರೈತರು ಜಾತ್ರಾ ಮಹೋತ್ಸವದಲ್ಲಿ ತಮ್ಮ ರಾಸುಗಳನ್ನು ಕಟ್ಟುವ ಮೂಲಕ ಮೆರಗು ನೀಡಿದ್ದಾರೆ. ಜಾತ್ರೆ ಯಶಸ್ಸಿಗೆ ಗ್ರಾಪಂ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ರೈತರು ಎಲ್ಲರು ಸಹಕಾರ ನೀಡಿದ್ದಾರೆ ಎಂದರು.
ಶಿವಬಸವ ಸ್ವಾಮೀಜಿ ಮಾತನಾಡಿ, ಎಲ್ಲರು ಶ್ರಮದಿಂದ ಜಾತ್ರೆ ಯಶಸ್ವಿಯಾಗಿ ನಡೆದಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪರಿಶ್ರಮ ಹೆಚ್ಚಾಗಿದೆ. ಮಠಗಳು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ, ಮಠಗಳು ಸಾರ್ವಜನಿಕರ ಸ್ವತ್ತು. ಎಲ್ಲರು ಜಾತಿಭೇದದ ಭಾವನೆಬಿಟ್ಟು ಇದು ನಮ್ಮಮಠ ಎಂಬ ಭಾವನೆಯಲ್ಲಿ ಮಠದ ಪ್ರಗತಿಗೆ ಸಹಕಾರ ನೀಡಿ ಎಂದರು.
ಪಾಂಡವಪುರ:
ಹಾಲು ಹಲ್ಲಿನ ಜೋಡಿ ಕರುಗಳ ವಿಭಾಗ: ಶಶಿಧರ್, ಹಿರೋಡೆಬೀದಿ, ಬಸವಣ್ಣ ಹೊನ್ನೇನಹಳ್ಳಿ, ನಡಕರೀಗೌಡ ಬೇವಿನಕುಪ್ಪೆ ಪಾಂಡವಪುರ, ಪ್ರವೀಣ್ ಪಡುವಾರಹಳ್ಳಿ ಮೈಸೂರು, ಪೈ.ಶಿವಕುಮಾರ್ ಗಂಜಾಂ, ಶಿವಣ್ಣ ಚೀಕನಹಳ್ಳಿ ಕೆ.ಆರ್.ಪೇಟೆ, ಅಭಿನಂದನ್ ಹೊಳಲು ಮಂಡ್ಯ, ಹೋರಿ ಮಾದಪ್ಪ ಮೈಸೂರು, ಎಚ್.ಬಿ.ದೊಡ್ಡೇಗೌಡ ಹೊಳಲು ಮಂಡ್ಯ, ಕಾರ್ತಿಕ್ ಮೋದೂರು ಕೆ.ಆರ್.ಪೇಟೆ.
ನಾಲ್ಕು ಹಲ್ಲಿನ ಜೋಡಿ ಎತ್ತುಗಳ ವಿಭಾಗ: ಮಂಜುನಾಥ್ ಬೆಂಗಳೂರು ಪೂರ್ವ, ಹೇಮೇಶ್ ಸಿ.ಹಳ್ಳಿ ಟಿ.ನರಸೀಪುರ, ಪುನೀತ ಗಂಜಾಂ, ನಾಗರಾಜು ಹೊಳಲು ಮಂಡ್ಯ, ರವಿಕುಮಾರ್ ಹಾರೋಹಳ್ಳಿ, ಸಂದೀಪ್ ಹಿರಿಸೇವೆ, ಸೋಮಣ್ಣ ಕಾಳಸಿದ್ದನಹುಂಡಿ,
ಬಾಯಿಗೂಡಿದ ಜೋಡಿ ಎತ್ತುಗಳ ವಿಭಾಗ: ಆಲೆಮೆನೆ ಬಲರಾಮೇಗೌಡ ಪಾಂಡವಪುರ, ಚಂದ್ರಶೇಖರ್ ದೊಡ್ಡ ಅರಸಿನಕೆರೆ, ಶಿವಣ್ಣ ಮಿರ್ಲೆ, ಸಂತೋಷ್ ಹಳ್ಳನಾಯಕನಹಳ್ಳಿ ಬೆಂಗಳೂರು, ರಾಜು ಕಾಳಸಿದ್ದಹುಂಡಿ ಮೈಸೂರು, ಕುಮಾರ ದೊಡ್ಡಗಾಡಿಗನಹಳ್ಳಿ, ಗೋಪಾಲಕೃಷ್ಣ ನೆಲಮನೆ, ರೇವಂತಗೌಡ ಕೆನ್ನಾಳು, ಶಶಿಧರ್ ಹಳೇಕೆಂಪಯ್ಯನಹುಂಡಿ, ಕೃಷ್ಣೇಗೌಡ ತಿಮ್ಮನಕೊಪ್ಪಲು.
ಎರಡು ಹಲ್ಲಿನ ಕಡಸುಗಳ ವಿಭಾಗ: ಮಹೇಶ್ ಕೆ.ಆರ್.ಪೇಟೆ, ರೇಣು ಚೀಕನಹಳ್ಳಿ, ಜೋಗಪ್ಪ ಮೇಗಲಕೊಪ್ಪಲು, ಮಹದೇವು ಬೀಡನಹಳ್ಳಿ ಟಿ.ನರಸೀಪುರ, ಸಿದ್ದಪ್ಪ ಕಳ್ಳೀಪುರ ಟಿ.ನರಸೀಪುರ.
ನಾಲ್ಕು ಹಲ್ಲಿನ ಜೋಡಿ ಕಡಸುಗಳ ವಿಭಾಗ: ರವಿಕುಮಾರ್ ಹಳೇಬೂದನೂರು, ಅಶೋಕ ರಾಗಿಮುದ್ದನಹಳ್ಳಿ, ಪ್ರಸನ್ನ ಹಳೇಸಾಯಪನಹಳ್ಳಿ, ಮಂಜು ಮರಡಿಕೊಪ್ಪಲು, ಆಕಾಶ್ ಎಂ.ಹೊಸೂರು,ಆರು ಹಲ್ಲಿನ ಕಡಸುಗಳು: ಮಣಿಮಹದೇವು ಬಿ.ಸೀಹಳ್ಳಿ, ಶಿವಣ್ಣ ಶೆಟ್ಟಿ ಕಳ್ಳೀಪುರ, ಹುಚ್ಚೇಗೌಡ ಬೀಡನಹಳ್ಳಿ, ಲಿಂಗರಾಜು ಕೊತ್ತತ್ತಿ. ಉಮೇಶ್ ಎಂ.ಹೊಸೂರು.
ಬಾಯಿಗೂಡಿದ ಜೋಡಿ ಕಡಸು: ಕೃಷ್ಣೇಗೌಡ ಅಕ್ಕಿಹೆಬ್ಬಾಳು, ಸ್ವಾಮೀಗೌಡ ಎಂ.ಹೊಸೂರು, ಪರಶಿವಮೂರ್ತಿ ಎಂ.ಎಲ್.ಹುಂಡಿ, ಚೇತನ್ ಪುರಿಗಾಲಿ, ಸಚ್ಚಿನ್ ತೆಂಡೇಕೆರೆ., ಹಾಲು ಹಲ್ಲಿನ ಬೀಜದ ಹೋರಿ ವಿಭಾಗ:- ಸಾಗರ್ ಹುಳೇನಹಳ್ಳಿ, ವಿನು ಸೋನಗಹಳ್ಳಿ, ಶಾಂತರಾಜು ಬ್ಯಾಟರಾಯನಕೊಪ್ಪಲು.,ಎರಡು ಹಲ್ಲಿನ ಬೀಜದ ಹೋರಿ: ಸೋಮೇಗೌಡ ಕುರುಬಹಳ್ಳಿ, ಪುಟ್ಟರಾಜು ಹೊಸಕೋಟೆ, ನರಸೇಗೌಡ ಹೊಸಮಾವಿನಕೆರೆ.,
ನಾಲ್ಕು ಹಲ್ಲಿನ ಬೀಜದ ಹೋರಿ:ಮರಿಯಪ್ಪ ಹುಣಸೂರು, ರೇವಣ್ಣ ಅಂಜನಾಪುರ, ಗೋಪಾಲಗೌಡ ಹಳೇಮಾವಿನಕೆರೆ.,ಆರು ಹಲ್ಲಿನ ಬೀಜದ ಹೋರಿ: ಚಿಕ್ಕಣ್ಣ ದೇವರ ದೊಡ್ಡಿ ರಾಮನಗರ, ಪ್ರಕಾಶ್ ಹಳೇಮಾವಿನಕೆರೆ, ರಂಜನ್ ಗುಮ್ಮನಹಳ್ಳಿ ಸಾಲಿಗ್ರಾಮ., ಬಾಯಿಗೂಡಿದ ಬೀಜದ ಹೋರಿ: ನಂಜೇಗೌಡ ಬನ್ನಂಗಾಡಿ, ಅನಿಲ್ ಕುಮಾರ್ ಅಂಕನಹಳ್ಳಿ ಹುಣಸೂರು, ಮೋಹನ್ ಕುಮಾರ್ ಮುತ್ತಪುರದ ದೊಡ್ಡಿಯ ರೈತರಿಗೆ ಬಹುಮಾನ ನೀಡಲಾಯಿತು.