ಕನ್ನಡಪ್ರಭ ವಾರ್ತೆ ಅರಸೀಕೆರೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಾದ್ಯಂತ ಹೊಸ ೧೦ ಲೇಔಟ್‌ಗಳು ಹೆಂಜಗೊಂಡನಹಳ್ಳಿ, ಮಾರುತಿನಗರ, ಗರುಡನಗಿರಿ ರಸ್ತೆ, ಕಾಟೀಕೆರೆ ರಸ್ತೆ, ಶಿವಾಲಯದಲ್ಲಿ ನಿರ್ಮಾಣಗೊಂಡಿವೆ. ಅದರಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರಿನ ಪೈಪ್ ಲೈನ್, ಕಳಪೆ ಗುಣಮಟ್ಟದ ರಸ್ತೆ, ಸಿಟ್ಟಿಂಗ್ ಬೇಂಚ್ ಅಳವಡಿಸಿಲ್ಲ, ಯುಜಿಡಿ ಕಳಪೆ ಕಾಮಗಾರಿ, ಪಾರ್ಕ್ ಸುತ್ತ ಪೆನ್ಸಿಂಗ್ ಅಳವಡಿಕೆ ಇಲ್ಲ, ಬೀದಿ ದೀಪಗಳಿಲ್ಲದಿರುವುದು ಸ್ಪಷ್ಟವಾಗಿದೆ. ಅಲ್ಲಿಯ ಲೇಔಟ್‌ಗಳಿಗೆ ಖಾತೆ ನೀಡಲು ಯೋಗ್ಯವಾಗಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಖಾತೆಗಳನ್ನು ನೀಡದಂತೆ ತಿಳಿಸುತ್ತೇವೆ ಎಂದರು.
ಲೋಕಯುಕ್ತರಿಗೆ ದೂರು:ಪರಿಶೀಲನೆ ನಡೆಸದೇ ಇಂಜಿನಿಯರ್‌ಗಳು ಅಧಿಕಾರದ ದುರುಪಯೋಗಪಡಿಸಿಕೊಂಡರೆ ನಾವು ಲೋಕಾಯುಕ್ತರಿಗೆ ದೂರು ನೀಡುವ ಮೂಲಕ ತನಿಖೆಗೆ ಒತ್ತಾಯಿಸಲಾಗುವುದು ಎಂದರು.
ಲೇಔಟ್‌ಗಳಲ್ಲಿ ಅಕ್ರಮ ನಡೆದಿದ್ದು ಗುಣಮಟ್ಟದ ಕಾಮಗಾರಿ ಇಲ್ಲದೇ ಇರುವುದರ ಬಗ್ಗೆ ಮಾಹಿತಿ ಪಡೆದು ಪೌರಾಯುಕ್ತರಿಗೆ ಈಗಾಗಲೇ ದೂರು ನೀಡಿದ್ದೇವೆ. ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.
ನಗರಸಭೆ ಸದಸ್ಯ ಮೇಲಗಿರಿಗೌಡ, ಭಾಸ್ಕರ್, ಮುಖಂಡರಾದ ರಮೇಶ್ ನಾಯ್ಡು, ಮುಖಂಡರಾದ ಹರ್ಷವರ್ಧನ್, ಶಿವನ್ ರಾಜ್ ಉಪಸ್ಥಿತರಿದ್ದರು.