ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಬಡದಾಳ ಗ್ರಾಮದ ಚನ್ನಮಲ್ಲೇಶ್ವರ ಮಠದಲ್ಲಿ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯ 17ನೇ ವಾರ್ಷಿಕೋತ್ಸವ ಹಾಗೂ ಮಠದ ಡಾ. ಅಭಿನವ ಚನ್ನಮಲ್ಲ ಶಿವಯೋಗಿಗಳ 61ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಮಠದ ಪೂಜ್ಯರಾಗಿ ಬಂದ ಭಕ್ತರಿಗೆ ಆಶೀರ್ವಾದ ಮಾಡಿದರೆ ಸಾಲದು, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವ ನಿಟ್ಟಿನಲ್ಲಿ 17 ವರ್ಷಗಳ ಹಿಂದೆ ಪೂಜ್ಯರು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಲು ಆರಂಭಿಸಿದ್ದರು. ಇಂದು ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಇನ್ನೂ ದೊಡ್ಡದಾಗಿ ಬೆಳೆವಣಿಗೆಯಾಗಬೇಕು. ಪೂರ್ವ ಪ್ರಾಥಮಿಕ ದಿಂದ ಪಿಯುವ ವರೆಗಿನ ಶಾಲಾ ಕಾಲೇಜು ಬರುವ ದಿನಗಳಲ್ಲಿ ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಡಿಪ್ಲೋಮಾ ದಂತ ಪದವಿಗಳು ಪ್ರಾರಂಭಗೊಂಡು ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂದ ಅವರು ಪೂಜ್ಯರ ಜನ್ಮದಿನ ನಮ್ಮ ಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲಿ. ಪದವಿ, ಮೆಡಿಕಲ್, ಪ್ಯಾರಾ ಮೆಡಿಕ್ ಕಾಲೇಜುಗಳು ಕೂಡ ಶ್ರೀಮಠದ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಆರಂಭವಾಗುವ ದಿನಗಳು ಬರಲಿ ಎಂದು ಶುಭ ಹಾರೈಸಿದರು.ಅಫಜಲ್ಪುರ ಠಾಣಾ ಪಿಎಸ್‌ಐ ಮಹಿಬೂಬ ಅಲಿ ಮಾತನಾಡಿ, ಬಡದಾಳ ಮಠ ಹಾಗೂ ಪೂಜ್ಯರ ಭಕ್ತ ಬಳಗ ಕಂಡು ನಾನು ನಿಬ್ಬೆರಗಾಗಿದ್ದೇನೆ. ಬಡದಾಳ ಶ್ರೀಗಳು ನಮ್ಮ ಠಾಣಾ ವ್ಯಾಪ್ತಿಯಲ್ಲಿ ಇರುವುದರಿಂದ ನಮಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನಷ್ಟು ಅನುಕೂಲ ಆಗಿದೆ. ಶ್ರೀಗಳ ಆಶಿರ್ವಾದ ಎಲ್ಲರ ಮೇಲಿರಲಿ ಎಂದರು.
ಚಿಂಚೋಳಿ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ನಿಲೂರಿನ ಶರಣಯ್ಯ ಸ್ವಾಮಿಗಳು ಮಾತನಾಡಿದರು. ಬಳಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.