ಬಾಡಗಂಡಿ ಮೆಡಿಕಲ್ ಕಾಲೇಜು ಉತ್ತರ ಕರ್ನಾಟಕದ ಹೆಮ್ಮೆ:ಡಾ. ಸುಭಾಸ್ ಪಾಟೀಲ

KannadaprabhaNewsNetwork |  
Published : Nov 09, 2025, 03:45 AM IST
ಎಸ್ ಆರ್ ಪಾಟೀಲ ಮೆಡಿಕಲ್ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾದ ಎಂಆರ್‌ಐ ಸ್ಕ್ಯಾನಿಂಗ್‌ ಯಂತ್ರಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಬೀಳಗಿಯ ತಾಲೂಕಿನ ಬಾಡಗಂಡಿ ಗ್ರಾಮಮ ಎಸ್.ಆರ್. ಪಾಟೀಲ್ ಮೆಡಿಕಲ್ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿದ ಎಂಆರ್‌ಐ ಸ್ಕ್ಯಾನಿಂಗ್‌ ಯಂತ್ರಕ್ಕೆ ಬಾಗಲಕೋಟೆಯ ಖ್ಯಾತ ವೈದ್ಯರಾದ ಸುಭಾಸ್ ಪಾಟೀಲ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಅವಳಿ ಜಿಲ್ಲೆಗಳಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ಬಾಡಗಂಡಿ ಗ್ರಾಮದಲ್ಲಿ ಎಸ್.ಆರ್. ಪಾಟೀಲರು ಸ್ಥಾಪಿಸಿರುವ ಮೆಡಿಕಲ್ ಕಾಲೇಜು ಉತ್ತರ ಕರ್ನಾಟಕದ ಹೆಮ್ಮೆಯ ಆರೋಗ್ಯ ಕೇಂದ್ರವಾಗಿದೆ ಎಂದು ಬಾಗಲಕೋಟೆಯ ಖ್ಯಾತ ವೈದ್ಯರಾದ ಸುಭಾಸ್ ಪಾಟೀಲ ತಿಳಿಸಿದರು.

ಎಸ್.ಆರ್. ಪಾಟೀಲ್ ಮೆಡಿಕಲ್ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿದ ಎಂಆರ್‌ಐ ಸ್ಕ್ಯಾನಿಂಗ್‌ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಆಸ್ಪತ್ರೆಯಲ್ಲಿ ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ಬೇಕಾಗುವ ಎಲ್ಲಾ ಸೌಲಭ್ಯ ಹೊಂದಿದ್ದು, ತುರ್ತು ನಿಗಾ ಘಟಕಗಳಲ್ಲಿ ಡಯಾಲಿಸಿಸ್ ಯಂತ್ರ ಅಳವಡಿಕೆ ಆದರೆ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅತಿ ಹೆಚ್ಚು ಬೆಲೆಯ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಅಳವಡಿಸಿದ್ದು, ರೋಗಿಗಳಿಗೆ ಒಂದೇ ಸ್ಥಳದಲ್ಲೇ ಎಲ್ಲಾ ಚಿಕಿತ್ಸೆ ಸಿಕ್ಕರೆ ಅನುಕೂಲವಾಗಲಿದೆ ಎಂದ ಅವರು, ಮೆದುಳು, ಬೆನ್ನುಹುರಿ, ಮೃದು ಅಂಗಾಂಗಗಳ ನಿಖರತೆ, ಕ್ಯಾನ್ಸರ್ ರೋಗದ ಚಿಕಿತ್ಸೆ ನಿರ್ಣಯಕ್ಕೆ ಇದು ಅತ್ಯಂತ ಸಹಾಯಕವಾಗಲಿದೆ. ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಇದೊಂದು ಮಹತ್ವದ ಕೊಡುಗೆಯಾಗಿದೆ ಎಂದು ಹೇಳಿದರು.ಗ್ರಾಮೀಣ ಭಾಗದ ಜನರಿಗೆ ಸುಧಾರಿತ ವೈದ್ಯಕೀಯ ಸೇವೆಗಳು ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶದಿಂದ ವಿಶ್ವ ರೇಡಿಯಾಲಜಿ ದಿನಾಚರಣೆ ನಿಮಿತ್ತ ₹೭.೩೦ ಕೋಟಿ ವೆಚ್ಚದ ಅತ್ಯಾಧುನಿಕ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಗಂಭೀರ ಕಾಯಿಲೆಗಳ ತಪಾಸಣೆಗಾಗಿ ಪಟ್ಟಣಕ್ಕೆ ಅಲೆಯುವುದು ತಪ್ಪಲಿದ್ದು,.ಇದರಿಂದ ಸಮಯ, ಹಣ ಎರಡೂ ಉಳಿತಾಯ ಆಗಲಿದೆ. ತ್ವರಿತವಾಗಿ ರೋಗಗಳಿಗೆ ವೈದ್ಯಕೀಯ ಸೇವೆ ಸ್ಥಳೀಯವಾಗಿ ಲಭ್ಯವಾಗಲಿದೆ ಎಂದು ಎಸ್.ಆರ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ, ಡಾ.ಚಿರಾಗ್ ಪಾಟೀಲ, ಹಿರಿಯರಾದ ಸತ್ಯಪ್ಪ ಮೆಲ್ನಾಡ, ಅನುಷಾ ಪಾಟೀಲ, ರಾಹುಲ್‌ ನಾಡಗೌಡ, ಪ್ರವೀಣಗೌಡ ಪಾಟೀಲ, ಕಾಲೇಜಿನ ಡೀನ್ ಡಾ.ಧರ್ಮರಾಯ ಇಂಗಳೆ, ಡಾ.ರಾಘವೇಂದ್ರ ಪಾಟೀಲ, ರವೀಂದ್ರ ಶಿರೂರ ಸೇರಿದಂತೆ ಇತರರು ಇದ್ದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ