ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲ್ಲೂಕಿನಲ್ಲಿ ಡ್ರಗ್ಸ್, ಗಾಂಜಾ, ಮಟ್ಕಾ, ಇಸ್ಪೀಟ್, ಅಕ್ರಮ ಮರಳು ಸಾಗಾಟ ಹಾಗೂ ಆನ್ಲೈನ್ ಜೂಜಾಟಕ್ಕೆ ಸಂಬಂಧಿಸಿದಂತೆ ಇದುವರೆಗೆ ನೂರಾರು ಪ್ರಕರಣಗಳು ದಾಖಲಾಗಿವೆ ಎಂದ ಅವರು, ಪ್ರಕರಣಗಳಲ್ಲಿ ಭಾಗಿ ಯಾಗಿರುವ ಆರೋಪಿಗಳ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಇದುವರೆಗೆ ಎಷ್ಟು ಪ್ರಮಾಣದ ಡ್ರಗ್ಸ್ ಹಾಗೂ ಗಾಂಜಾವನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿ ಕೊಂಡ ಮಾದಕ ವಸ್ತುಗಳನ್ನು ಎಲ್ಲಿ ಮತ್ತು ಯಾವ ಇಲಾಖೆಯ ವಶದಲ್ಲಿ ಶೇಖರಿಸಿಡಲಾಗಿದೆ. ಅಕ್ರಮ ಚಟುವಟಿಕೆಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಇದುವರೆಗೆ ಯಾವುದೇ ಇಲಾಖಾ ಅಥವಾ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಎಂದು ದೂರಿದರು.
ವಿಶೇಷವಾಗಿ ಯುವಜನರನ್ನು ಮಾದಕ ವ್ಯಸನ ಮತ್ತು ಆನ್ಲೈನ್ ಜೂಜಾಟದಂತಹ ಅಪಾಯಕಾರಿ ಚಟುವಟಿಕೆಗಳಿಂದ ದೂರವಿಡುವುದು ಅತ್ಯಂತ ಅಗತ್ಯವಾಗಿದ್ದು, ಸಿಂಧನೂರು ತಾಲ್ಲೂಕಿನಲ್ಲಿ ಪೆÇಲೀಸ್ ಗಸ್ತು, ಗುಪ್ತಚರ ಹಾಗೂ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಜನರಿಗೆ ಸುರಕ್ಷಿತ ಹಾಗೂ ಶಾಂತಿಯುತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.