ಇಂದಿನಿಂದ ಬ್ಯಾಡ್ಮಿಂಟನ್‌ ಪಂದ್ಯ

KannadaprabhaNewsNetwork |  
Published : May 17, 2026, 03:00 AM IST
ಮೇ 17 ರಿಂದ ಮೇ 23ರ ವರೆಗೆ ಗುಮ್ಮಟನಗರಿಯಲ್ಲಿ ಬ್ಯಾಡ್ಮಿಂಟನ್‌ ಪಂದ್ಯ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಕೆಬಿಎ) ಅಧಿಕೃತ ಮಾನ್ಯತೆಯೊಂದಿಗೆ, ಯೋನೆಕ್ಸ್ ಸನ್‌ರೈಸ್ ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಯು-15 ಮತ್ತು ಯು-17 ಬ್ಯಾಡ್ಮಿಂಟನ್ ಪಂದ್ಯಾವಳಿ-2026 ಮೇ 17 ರಿಂದ ಮೇ 23 ರವರೆಗೆ ಐತಿಹಾಸಿಕ ನಗರಿ ವಿಜಯಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅಧ್ಯಕ್ಷ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಕೆಬಿಎ) ಅಧಿಕೃತ ಮಾನ್ಯತೆಯೊಂದಿಗೆ, ಯೋನೆಕ್ಸ್ ಸನ್‌ರೈಸ್ ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಯು-15 ಮತ್ತು ಯು-17 ಬ್ಯಾಡ್ಮಿಂಟನ್ ಪಂದ್ಯಾವಳಿ-2026 ಮೇ 17 ರಿಂದ ಮೇ 23 ರವರೆಗೆ ಐತಿಹಾಸಿಕ ನಗರಿ ವಿಜಯಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅಧ್ಯಕ್ಷ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಾದ್ಯಂತ ಇರುವ ಉದಯೋನ್ಮುಖ ಹಾಗೂ ಖ್ಯಾತ ಬ್ಯಾಡ್ಮಿಂಟನ್ ಆಟಗಾರರು ತಮ್ಮ ಕೌಶಲ್ಯ ಪ್ರದರ್ಶಿಸಲು ವಿಜಯಪುರಕ್ಕೆ ಲಗ್ಗೆ ಇಡುತ್ತಿದ್ದು, ಮುಂದಿನ 7 ದಿನಗಳ ಕಾಲ ಕ್ರೀಡಾ ಪ್ರೇಮಿಗಳಿಗೆ ತಡೆರಹಿತ ಬ್ಯಾಡ್ಮಿಂಟನ್ ಆಕ್ಷನ್ ರಸದೌತಣ ಸಿಗಲಿದೆ ಎಂದರು.ಪಂದ್ಯಾವಳಿಯ ವೇಳಾಪಟ್ಟಿ:

ಕ್ರೀಡಾಕೂಟವನ್ನು 2 ಹಂತಗಳಲ್ಲಿ ಆಯೋಜಿಸಿದೆ. ಕ್ವಾಲಿಫೈಯಿಂಗ್ ರೌಂಡ್ಸ್ (ಮೇ 17 - ಮೇ 20): ಹೊಸ ಪ್ರತಿಭೆಗಳು ಮೇನ್ ಡ್ರಾ ಪ್ರವೇಶಿಸಲು ಈ ಹಂತದಲ್ಲಿ ಸೆಣಸಾಡಲಿದ್ದಾರೆ. ಮೇನ್ ಡ್ರಾ ಪಂದ್ಯಗಳು (ಮೇ 21-ಮೇ 23): ಪ್ರಮುಖ ಶ್ರೇಯಾಂಕದ ಆಟಗಾರರ ನಡುವೆ ಕ್ವಾರ್ಟರ್‌ ಫೈನಲ್, ಸೆಮಿಫೈನಲ್ (ಮೇ 22) ಹಾಗೂ ರೋಮಾಂಚಕ ಫೈನಲ್ ಪಂದ್ಯಗಳು (ಮೇ 23) ನಡೆಯಲಿವೆ ಎಂದರು.ವಿಶ್ವದರ್ಜೆಯ ಕ್ರೀಡಾ ಸೌಲಭ್ಯ:

ವಿಜಯಪುರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣ ಮತ್ತು ಬಿಎಲ್‌ಡಿಇ ಅಸೋಸಿಯೇಷನ್ ಬಂಗಾರಮ್ಮ ಸಜ್ಜನ ಕ್ಯಾಂಪಸ್ ನಲ್ಲಿ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದರು.ಅಂತಾರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಮ್ಯಾಟ್ ಅಂಕಣಗಳು, ಅತ್ಯಾಧುನಿಕ ಬೆಳಕಿನ ವ್ಯವಸ್ಥೆ ಹಾಗೂ ಸಾವಿರಾರು ವೀಕ್ಷಕರಿಗೆ ಆಸನದ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದರು. ಸ್ಥಳೀಯ ಮತ್ತು ರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ತಮ್ಮ ಪ್ರಚಾರಕ್ಕಾಗಿ ಈ ಪಂದ್ಯಾವಳಿ ದೊಡ್ಡ ವೇದಿಕೆ ಕಲ್ಪಿಸಿದೆ. ಪಂದ್ಯಾವಳಿಯುದ್ದಕ್ಕೂ 10,000ಕ್ಕೂ ಹೆಚ್ಚು ನೇರ ವೀಕ್ಷಕರು, 2 ದಶಲಕ್ಷಕ್ಕೂ (2M+) ಹೆಚ್ಚು ಡಿಜಿಟಲ್ ವೀಕ್ಷಕರು ಹಾಗೂ 5 ದಶ ಲಕ್ಷಕ್ಕೂ (5M+) ಹೆಚ್ಚು ಸೋಸಿಯಲ್ ಮೀಡಿಯಾ ಇಂಪ್ರೆಷನ್‌ಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದರು. ಈ ಸಂದರ್ಭದಲ್ಲಿ ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ.ಆನಂದ‌.ಕೆ, ಮಹಾಂತೇಶ ಬಿರಾದಾರ, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಸೇರಿದಂತೆ ಕೋಚ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಪಂದ್ಯಾವಳಿಯ ಹೆಚ್ಚಿನ ವಿವರಗಳಿಗಾಗಿಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಜಸ್ಮಾ ಭವನ ರಸ್ತೆ, ವಸಂತನಗರ, ಬೆಂಗಳೂರು) ಕಚೇರಿಯನ್ನು ಸಂಪರ್ಕಿಸಬಹುದು. ಮೊ.9108354547 /ಮೊ.9845615105. ವೆಬ್‌ಸೈಟ್: www.kba.org.in, ಇಮೇಲ್: Secretary@kba.org.in

ಜಗತ್ಪ್ರಸಿದ್ಧ ಗೋಲಗುಮ್ಮಟ ನಗರಿಗೆ ಬರುವ ಕ್ರೀಡಾಪಟುಗಳು ಹಾಗೂ ಪ್ರವಾಸಿಗರು ಇಲ್ಲಿನ ಸಾಂಪ್ರದಾಯಿಕ ಆಹಾರಗಳಾದ ಜೋಳದ ರೊಟ್ಟಿ- ಎಣ್ಣೆಗಾಯಿ ಹಾಗೂ ಕರೆದಂಟು ಸವಿಯುವ ಮೂಲಕ ವಿಜಯಪುರದ ಶ್ರೀಮಂತ ಸಂಸ್ಕೃತಿಯನ್ನು ಆಸ್ವಾದಿಸಬಹುದಾಗಿದೆ. ಬನ್ನಿ, ವಿಜಯಪುರದಲ್ಲಿ ಕ್ರೀಡಾ ಇತಿಹಾಸ ನಿರ್ಮಿಸೋಣ.-ಕುಮಾರ ಬಂಗಾರಪ್ಪ, ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪಾಯಕ್ಕೆ ಆಹ್ವಾನಿಸುತ್ತಿರುವ ಫುಟ್‌ಪಾತ್ ಗುಂಡಿಗಳು..!
ಕೆರೆ ತುಂಬುವ ಯೋಜನೆ ಎಂಬಿಪಾ ಪರಿಕಲ್ಪನೆ ಕೂಸು