ಇಂದಿನ ಸಮಾಜದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಆರೋಗ್ಯಕರ ಸಮಾಜಕ್ಕೆ ಬೇಕಾಗಿರುವ ಸಹೋದರತೆ ಹಾಗೂ ಭಾತೃತ್ವ ಬೆಳೆಸುವ ಕೆಲಸ ಮಾಡುತ್ತಿವೆ ಎಂದು ಬಾಗಲಕೋಟೆ ವಿಶ್ವವಿದ್ಯಾಲಯ ಕುಲಸಚಿವ ಡಾ.ಸೋಮಲಿಂಗ ಗೆಣ್ಣೂರ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಂದಿನ ಸಮಾಜದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಆರೋಗ್ಯಕರ ಸಮಾಜಕ್ಕೆ ಬೇಕಾಗಿರುವ ಸಹೋದರತೆ ಹಾಗೂ ಭಾತೃತ್ವ ಬೆಳೆಸುವ ಕೆಲಸ ಮಾಡುತ್ತಿವೆ ಎಂದು ಬಾಗಲಕೋಟೆ ವಿಶ್ವವಿದ್ಯಾಲಯ ಕುಲಸಚಿವ ಡಾ.ಸೋಮಲಿಂಗ ಗೆಣ್ಣೂರ ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಬಾಗಲಕೋಟೆ, ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ ಬಾಗಲಕೋಟೆ ಇವರ ಸಹಯೋಗದಲ್ಲಿ ನಡೆದ ಪದವಿ ಕಾಲೇಜಿನ ಉಪನ್ಯಾಸಕರಿಗೆ ಒಂದು ದಿನದ ರೋವರಿಂಗ್ ರೇಂಜರಿಂಗ್ ಕುರಿತು ಸಾಮಾನ್ಯ ಮಾಹಿತಿ ಹಾಗೂ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ಮಾತು, ನಡತೆ, ಭಾವನೆಗಳು ಶುದ್ಧವಾಗಿರಬೇಕಾದರೆ ನಿಶ್ವಾರ್ಥದಿಂದ ಸೇವೆ ಮಾಡುವ ಮನಸ್ಥಿತಿ ಹೊಂದಿರಬೇಕು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ವ್ಯಕ್ತಿ ಹಾಗೂ ಸಮಾಜವನ್ನು ಸದಾ ಚಟುವಟಿಕೆಯುಕ್ತವಾಗಿ ಮಾಡುತ್ತವೆ. ಆ ಮೂಲಕ ಸಮಾನತೆಯ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಸಿ.ಎ. ಸಾವಳಗಿ ಮಾತನಾಡಿ, ಸಮಾಜಮುಖಿ ಸೇವೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಕಾರ್ಯಚಟುವಟಿಕೆ ಮಾದರಿಯಾಗಿವೆ ಎಂದರು.
ನವನಗರ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲ ಡಾ.ಅರುಣಕುಮಾರ ಗಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರದಿಂದ ಕ್ರಿಯಾತ್ಮಕವಾದ ಚಟುವಟಿಕೆ ಮಾಡಲು ಅನುಕೂಲವಾಗಿದ್ದು, ನಿವೃತ್ತಿಯ ಬಳಿಕ ಸಮಾಜದಲ್ಲಿ ಗೌರವ ಪಡೆಯುವ ಶಿಕ್ಷಕ, ಬೋಧಕರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜೊತೆಗೂಡಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಇತರರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿದೆ ಎಂದು ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಎಸ್. ದಳವಾಯಿ, ಜಿಲ್ಲಾ ಸಂಘಟಕರಾದ ಪ್ರಮೋದ ಚೌಗುಲೆ, ಜಿಲ್ಲಾ ಸಂಘಟನಾ ಶಿಕ್ಷಕರಾದ ನಾರಾಯಣ ಯಳ್ಳಿಗುತ್ತಿ ಹಾಗೂ ಪುನಶ್ಚೇತನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರವಿ ಗಡದನ್ನವರ, ಡಾ.ಸುಮಂಗಲಾ ಮೇಟಿ, ಪರಸಪ್ಪ ತಳವಾರ ಉಪಸ್ಥಿತರಿದ್ದರು.
ಭಾರತ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಎಸ್. ದಳವಾಯಿ ಸ್ವಾಗತಿಸಿದರು. ಪ್ರೊ.ಪರಸಪ್ಪ ತಳವಾರ ವಂದಿಸಿದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಪುನಶ್ಚೇತನ ಶಿಬಿರದಲ್ಲಿ ಜಿಲ್ಲೆಯ ಸುಮಾರು 75 ಪದವಿ ಕಾಲೇಜುಗಳ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ರೋವರ್, ರೇಂಜರ್ ಲೀಡರ್‌ಗಳು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.