ಬಾಗಲಕೋಟೆ ಮೆಡಿಕಲ್ ಹಬ್, ಆಸ್ಪತ್ರೆಗಳಿಂದ ಮೆರಗು

KannadaprabhaNewsNetwork |  
Published : Nov 03, 2025, 03:03 AM IST
ಬೀಳಗಿ | Kannada Prabha

ಸಾರಾಂಶ

ಬಾಗಲಕೋಟೆ ನಗರ ಮೆಡಿಕಲ್ ಹಬ್ ಆಗಿದೆ. ಆಸ್ಪತ್ರೆಗಳಿಂದ ಬಾಗಲಕೋಟೆಗೆ ಮೆರಗು ಬಂದಿದೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಬಾಗಲಕೋಟೆ ನಗರ ಮೆಡಿಕಲ್ ಹಬ್ ಆಗಿದೆ. ಆಸ್ಪತ್ರೆಗಳಿಂದ ಬಾಗಲಕೋಟೆಗೆ ಮೆರಗು ಬಂದಿದೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ತಾಲೂಕಿನ ಯಡಹಳ್ಳಿ ಗ್ರಾಮದ ಗ್ರಾಪಂ ಕಾರ್ಯಾಲಯದ ಎದುರಿನ ಹಳೆ ಕನ್ನಡ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೃದಯರೋಗ ತಜ್ಞ ಡಾ.ವಿಕ್ರಮ್ ಎಸ್.ಪಾಟೀಲರು ಆಯೋಜಿಸಿದ್ದ ಉಚಿತ ಹೃದಯರೋಗ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಜನರ ಸಹಭಾಗಿತ್ವ ಬರುವವರೆಗೆ ಸರ್ಕಾರದ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಯೋಗ, ಪರಿಸರಕ್ಕೆ ಆದ್ಯತೆ ಕೊಡಬೇಕು. ಬಯಲು ಬಹಿರ್ದೆಸೆಗೆ ಹೋಗದಂತೆ ಎಲ್ಲ ಗ್ರಾಮಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.ಹೃದಯ ರೋಗಿಗಳ ಸೇವೆ ಮಾಡುವ ಉದ್ದೇಶದಿಂದ ಇಂದು ಹೃದಯರೋಗ ತಜ್ಞ ಡಾ.ವಿಕ್ರಮ್ ಎಸ್.ಪಾಟೀಲ ಅವರ ಆಶಯದಂತೆ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಉದ್ಘಾಟಿಸಲಾಗಿದ್ದು, ಪ್ರತಿ ತಿಂಗಳು ೨ನೇ ಭಾನುವಾರ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಮೂಲಕ ಹೃದಯ ರೋಗಿಗಳ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.ಹೃದಯರೋಗ ತಜ್ಞ ಡಾ.ವಿಕ್ರಮ್ ಎಸ್.ಪಾಟೀಲ ಮಾತನಾಡಿ, ಲಂಡನ್‌ನಲ್ಲಿ ಶಿಕ್ಷಣ ಪಡೆದು, ಬೆಂಗಳೂರಿನ ಪ್ರತಿಷ್ಠಿತ ಹೃದಯರೋಗ ಆಸ್ಪತ್ರೆಯಲ್ಲಿ ಡಾ.ಸಿ.ಎನ್.ಮಂಜುನಾಥ ಅವರ ಹತ್ತಿರ ಹಲವಾರು ಹೃದಯ ರೋಗಗಳಿಗೆ ಚಿಕಿತ್ಸೆ ನೀಡಿದ್ದೇನೆ ಎಂದು ತಿಳಿಸಿದರು.ಖ್ಯಾತ ಚಿಕ್ಕಮಕ್ಕಳ ತಜ್ಞವೈದ್ಯ ಡಾ.ಆರ್.ಟಿ.ಪಾಟೀಲ ಶಿಬಿರದ ನೇತೃತ್ವ ವಹಿಸಿ ಮಾತನಾಡಿ, ಕೇವಲ ಕಮರ್ಷಿಲ್ ಡಾಕ್ಟಗಳಾಗದೇ ರೋಗಿಗಳಿಗೆ ಆತ್ಮವಿಶ್ವಾಸ ತುಂಬುವಂತ ವೈದ್ಯರಿದ್ದಾಗ ರೋಗಿಗಳು ಬೇಗನೆ ಗುಣಮುಖರಾಗಲು ಸಾಧ್ಯ ಎಂದರು.ವನ್ಯಜೀವಿ ಪರಿಪಾಲಕ ಡಾ.ಎಂ.ಆರ್. ದೇಸಾಯಿ ಮಾತನಾಡಿ, ಆರೋಗ್ಯವೇ ಭಾಗ್ಯ, ಆರೋಗ್ಯ ಕೇವಲ ನಮ್ಮದು ಆಗಬಾರದು ಇತರರ ಆರೋಗ್ಯಕ್ಕೆ ಬೇಕಿರುವ ಪರಿಸರ ಸ್ರಷ್ಠಿಸುವ ಜೊತೆಗೆ ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯವನ್ನು ಸ್ವಾಸ್ಥ್ಯವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.ಮರೆಗುದ್ದಿ ದಿಗಂಬರೇಶ್ವರ ಮಠದ ಪ್ರಭುತೋಂಟದಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮಿಗಿಲಾದುದು. ಆದ್ದರಿಂದ ಸುತ್ತ-ಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಡಾ.ವಿಕ್ರಮ್ ಪಾಟೀಲರು ಬಡ ರೋಗಿಗಳ ಸೇವೆ ಮಾಡಲು ಹಳ್ಳಿಗೆ ಬಂದಿದ್ದು ನಮ್ಮ ಸೌಭಾಗ್ಯ ಎಂದು ಶ್ಲಾಘಸಿದರು.ಈ ಶಿಬಿರದಲ್ಲಿ ೨೫೦ಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ ಹಳ್ಳೂರ, ಐ.ಜಿ.ಪುರಾಣಿಕ, ಎಸ್.ಟಿ.ಪಾಟೀಲ, ಎಂ.ಎಲ್.ಕೆಂಪಲಿಂಗಣ್ಣವರ, ದೊಡ್ಡಣ್ಣ ದೇಸಾಯಿ, ಸದಪ್ಪ ನಂದಗಾಂವಿ, ಮುತ್ತು ದೇಸಾಯಿ, ಜೀತುಗೌಡ ಪಾಟೀಲ ಮತ್ತಿತರಿದ್ದರು.

ಮಂಜುನಾಥ ಕೊರ್ತಿ ನಿರೂಪಿಸಿದರು. ರಮೇಶ ಬಗಲಿ ವಂದಿಸಿದರು.ಪ್ರತಿಯೊಬ್ಬರೂ ಕಾಯಿಲೆ ಬರದ ಹಾಗೇ ಆರೋಗ್ಯವನ್ನು ಕಾಪಾಡಿಕೊಂಡರೆ ವೈದ್ಯರ ಬಳಿಗೆ ಹೋಗುವ ಪ್ರಸಂಗ ಬರುವುದಿಲ್ಲ. ಚಿಕ್ಕಮಕ್ಕಳ ವೈದ್ಯರು, ಪಶು ವೈದ್ಯರು ದೇವರ ಸಮಾನ, ಅದೊಂದು ದೇವರ ಸೇವೆ ,ಜೊತೆಗೆ ಪರಿಸರ ಬೆಳಸಿ ಅದನ್ನು ಉಳಿಸುವ ವೈದ್ಯರು ಜಿಲ್ಲೆಯಲ್ಲಿದ್ದು ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಯಾರು ಮಾಡಬಾರದು.

-ಜೆ.ಟಿ.ಪಾಟೀಲ,

ಶಾಸಕರು.ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ವದಗಿಸುವ ಸದುದ್ದೇಶದಿಂದ ಜಿಲ್ಲೆಯಲ್ಲಿ ಪ್ರತಿ ತಿಂಗಳು ೨ನೇ ಭಾನುವಾರ ದಿವಸ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ದಿನವಾದ ಇಂದು ಹುಟ್ಟೂರಾದ ಯಡಹಳ್ಳಿಯಲ್ಲಿ ಈ ಶಿಬಿರ ಆರಂಭ ಮಾಡಲಾಗಿದೆ.

-ಡಾ.ವಿಕ್ರಮ್ ಎಸ್.ಪಾಟೀಲ,
ಹೃದಯರೋಗ ತಜ್ಞರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ