ಬಗರ್ ಹುಕುಂ ಅಕ್ರಮ ಮಂಜೂರಾತಿ ಪರಿಶೀಲಿಸಿ ಭೂಮಿ ವಶಕ್ಕೆ ಪಡೆಯಲು ಒತ್ತಾಯ

KannadaprabhaNewsNetwork |  
Published : Nov 10, 2024, 01:49 AM ISTUpdated : Nov 10, 2024, 01:50 AM IST
 ಬಗರ್ ಹುಕುಂ ಮುಖಾಂತರ ಮಂಜೂರಾತಿಯಾಗಿರುವ ಎಲ್ಲ ಮಂಜೂರಾತಿ ಅರ್ಜಿಗಳನ್ನು ಪರಿಶೀಲಿಸಿ                                  ಅಕ್ರಮವಾಗಿ ಮಂಜೂರಾತಿಯಾಗಿರುವ ಭೂಮಿಯನ್ನು ,ಸರ್ಕಾರದ ವಶಕ್ಕೆ ಪಡೆಯಲು ಎಂ.ಮಹೇಶ್ ಒತ್ತಾಯ | Kannada Prabha

ಸಾರಾಂಶ

ತರೀಕೆರೆ, ತಾಲೂಕಿನಾದ್ಯಂತ ಎಲ್ಲಾ ಹೋಬಳಿಗಳಲ್ಲಿಯೂ ಬಗರ್ ಹುಕುಂ ನಡಿ ಮಂಜೂರಾದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಕಡೂರು ತಾಲೂಕಿನಂತೆ, ನ್ಯಾಯಯುತವಾಗಿ ತನಿಖೆ ನಡೆಸಿ ಅಕ್ರಮ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಮಹೇಶ್ ಒತ್ತಾಯಿಸಿದ್ದಾರೆ.

ಕಾನೂನು ಬಾಹಿರವಾಗಿ ಹತ್ತಾರು ಎಕರೆ ಭೂಮಿ ಇರುವವರಿಗೆ, ಸಾಗುವಳಿ ಮಾಡದವವರಿಗೆ ಭೂಮಿ ನೀಡಿಕೆ: ಮಹೇಶ್‌ ಆರೋಪ

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕಿನಾದ್ಯಂತ ಎಲ್ಲಾ ಹೋಬಳಿಗಳಲ್ಲಿಯೂ ಬಗರ್ ಹುಕುಂ ನಡಿ ಮಂಜೂರಾದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಕಡೂರು ತಾಲೂಕಿನಂತೆ, ನ್ಯಾಯಯುತವಾಗಿ ತನಿಖೆ ನಡೆಸಿ ಅಕ್ರಮ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಮಹೇಶ್ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಬಗರ್ ಹುಕುಂ ಮುಖಾಂತರ ಭೂಮಿ ವಿತರಣೆ ಪ್ರಾರಂಭವಾದ ಮೇಲೆ 10 ವರ್ಷಗಳಿಂದ ತಾಲೂಕು ಕಚೇರಿಗಳಲ್ಲಿ ಪಡೆಯಲಾದ ಅರ್ಜಿಗಳನ್ನು ನಿಯಮದಡಿ ನಂ. 50 ರಿಂದ 57 ರ ವರೆಗೆ ಬಗರ್ ಹುಕುಂ ಸಮಿತಿ ಸಭೆಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ತೀರ್ಮಾನಿಸಿ ಭೂಮಿ ಕೊಡುವುದು ಕಾನೂನು.

ಆದರೆ, ಇದರಂತೆ ನಡೆದ ಭೂಮಿ ಮಂಜೂರಾತಿಯಲ್ಲಿ ಅಕ್ರಮ ನಡೆದಿದೆ. ಬಗರ್ ಹುಕುಂ ಮುಖಾಂತರ ಕಾನೂನು ಬಾಹಿರವಾಗಿ ಹತ್ತಾರು ಎಕರೆ ಭೂಮಿ ಇರುವವರಿಗೆ, ಸಾಗುವಳಿ ಮಾಡದವವರಿಗೆ ಜಿಲ್ಲೆಯನ್ನೇ ಬಿಟ್ಟು ಬೇರೆ ಜಿಲ್ಲೆಯಲ್ಲಿ ವಾಸವಿರುವವರಿಗೆ ಮತ್ತು ಪಟ್ಟಣದಲ್ಲಿ ಕುಳಿತು ಕೃಷಿಕರಲ್ಲದವರು ಸಾಗುವಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಕಡೂರು ಮತ್ತು ಮೂಡಿಗೆರೆಯಲ್ಲಿ ನಡೆದ ಬಗರ್ ಹುಕುಂ ಭ್ರಷ್ಟಾಚಾರದಿಂದ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿಯೇ ಗಮನ ಸೆಳೆಯುವಂತಾಗಿತ್ತು. ಅದೇ ರೀತಿ ತರೀಕೆರೆ ತಾಲೂಕಿನಲ್ಲು ಬಗರ್ ಹುಕುಂ ಮಂಜೂರಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತಾಲೂಕು ಶಾಖೆ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್ ತಿಳಿಸಿದ್ದಾರೆ.

ನಾವು ಈಗಾಗಲೇ ರಾಜ್ಯದ ರೆವಿನ್ಯೂ ಸೆಕ್ರೆಟರಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ದೂರು ಸಲ್ಲಿಸಿದ ಮೇರೆಗೆ ತರೀಕೆರೆ ಉಪವಿಭಾಗಾಧಿಕಾರಿಗಳಿಗೆ ತನಿಖೆ ಮಾಡಲು ಆದೇಶಿಸಿದ್ದಾರೆ. ಇದರಂತೆ 04-11-2024 ರಂದು ಮತ್ತು 07-11-2024 ರಂದು ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿ ನಂದಿ ಗ್ರಾಮದಲ್ಲಿ ಭೂಮಿ ಸಾಗುವಳಿ ಮಾಡದೆ ಇದ್ದ ಕೆಲವರಿಗೆ ಹಿಂದಿನ ತಹಸೀಲ್ದಾರ್ ಸಾಗುವಳಿ ಚೀಟಿ ನೀಡಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಂದಿ ಹೊಸಳ್ಳಿ ಗ್ರಾಮದ ಇವರು ಬಗರ್ ಹುಕುಂ ಸಾಗುವಳಿ ಪಡೆದು ಜಮೀನಲ್ಲಿ ಸಾಗುವಳಿ ಮಾಡಿಲ್ಲ, ಆದರೆ ಕಾನೂನು ಪ್ರಕಾರ 1996 ರಿಂದ ಮತ್ತು 2002 ರಿಂದ ಈ ದಿನಾಂಕಗಳಿಂದ ಸಾಗುವಳಿ ಮಾಡಿ ಸ್ವಾಧೀನ ಇರುವ ರೈತರಿಗೆ ಜಮೀನು ಮಂಜೂರು ಮಾಡಬೇಕು. ಆದರೆ ಅಕ್ರಮವಾಗಿ ಕಾನೂನು ಗಾಳಿಗೆ ತೂರಿ ಸಾಗುವಳಿ ನೀಡಿದ್ದು, ತರೀಕೆರೆ ಉಪವಿಭಾಗಾಧಿಕಾರಿ ತನಿಖೆ ನಡೆಸಿದ್ದಾರೆ.

ಆದರೆ ತಾಲೂಕಿನಾದ್ಯಂತ ಎಲ್ಲಾ ಹೋಬಳಿಗಳಲ್ಲಿಯೂ ಬಗರ್ ಹುಕುಂ ಮುಖಾಂತರ ಮಂಜೂರಾದ ಎಲ್ಲಾ ಅರ್ಜಿ ಗಳನ್ನು ಪರಿಶೀಲಿಸಿ ಕಡೂರು ತಾಲೂಕಿನಲ್ಲಿ ತನಿಖೆ ನಡೆಸಿದಂತೆ, ನ್ಯಾಯಯುತವಾಗಿ ತನಿಖೆ ನಡೆಸಿ ಅಕ್ರಮ ಮಂಜೂರಾತಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಮಹೇಶ್ ಜಿಲ್ಲಾಧಿಕಾರಿಗಳು ಮತ್ತು ತರೀಕೆರೆ ಉಪವಿಭಾಗಾಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯವರನ್ನು ಒತ್ತಾಯಿಸಿದ್ದಾರೆ.9ಕೆಟಿಆರ್.ಕೆ.10ಃ ಎಂ.ಮಹೇಶ್

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ