ಬಾಗೇಪಲ್ಲಿ: 1. 25 ಲಕ್ಷ ರು. ಮೌಲ್ಯದ 2.5 ಕೇಜಿ ಗಾಂಜಾವನ್ನು ವಶಕ್ಕೆ ಪಡೆದು ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗೂಳೂರು ಗ್ರಾಮದಲ್ಲಿ ನಡೆದಿದೆ. ಬಂಧಿತ ವ್ಯಕ್ತಿ ಪಟ್ಟಣದ ಸಾಯಿ ದೀಪಕ್ ಎಂಬುದಾಗಿ ತಿಳಿದಿದೆ.
ತಾನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿಯ ಅರಕುವ್ಯಾಲಿ ಎಂಬ ಊರಿನಿಂದ ತೆಗೆದುಕೊಂಡು ಬಂದು ಗೂಳೂರು, ಬಾಗೇಪಲ್ಲಿ ಮತ್ತು ಇತರೆ ಕಡೆಗಳಲ್ಲಿ ಕಾನೂನು ಬಾಹೀರವಾಗಿ ಮಾರಾಟ ಮಾಡುತ್ತಿರುವುದಾಗಿ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದು, ಮಾಲು ಸಮೇತ ವಶಕ್ಕೆ ಪಡೆದ ಬಾಗೇಪಲ್ಲಿ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.
ಎಸ್ ಪಿ ಕುಶಾಲ್ ಚೌಕ್ಸಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ ರೈ ಮತ್ತು ಚಿಕ್ಕಬಳ್ಳಾಪುರ ಉಪ- ವಿಭಾಗದ ಪೊಲೀಸ್ ಉಪಾಧೀಕ್ಷಕ ಶಿವಕುಮಾರ್ ರ ಮಾರ್ಗದರ್ಶನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಶಾಂತ್ ಆರ್. ವರ್ಣಿಯವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ (ಅಪರಾಧ ವಿಭಾಗ) ಮುನಿರತ್ನಂ ಪಿ. ಮತ್ತು ಪಿಎಸ್ಐ ಸುನೀಲ್ ಕುಮಾರ್ ಹಾಗೂ ಸಿಬ್ಬಂದಿ ಸುರೇಶ್, ಧನಂಜಯ್ ಕುಮಾರ್, ಸಾಗರ್, ವೆಂಕಟಶಿವ, ಕೃಷ್ಣಪ್ಪ , ಶಂಕರಪ್ಪ , ರಾಜಪ್ಪರವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.