ಬೆಂಗಳೂರಿನಲ್ಲಿ ಬೈಚುಂಗ್ ಭುಟಿಯಾ ಫುಟ್‌ಬಾಲ್‌ ಕುರಿತು ಮಾಸ್ಟರ್‌ಕ್ಲಾಸ್

KannadaprabhaNewsNetwork | Published : Jan 13, 2024 1:33 AM

ಸಾರಾಂಶ

ಮಾಜಿ ವೃತ್ತಿಪರ ಫುಟ್‌ಬಾಲ್ ಆಟಗಾರ ಮತ್ತು ಪದ್ಮಶ್ರೀ ಭೈಚುಂಗ್ ಭುಟಿಯಾ ಅವರು 'ಪವರ್ ಅಪ್ ವಿತ್ ಲೆಜೆಂಡ್ಸ್' ಸರಣಿಯ ಭಾಗವಾಗಿ, ಜನವರಿ 11 ರಿಂದ ಆರ್ಕಿಡ್‌ನ ಹರಳೂರು ಮತ್ತು ಕಾಡುಗೋಡಿ ಕ್ಯಾಂಪಸ್‌ಗಳಲ್ಲಿ ನಡೆಯುವ ಫುಟ್‌ಬಾಲ್ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು: ''''''''ಪವರ್ ಅಪ್ ವಿತ್ ಲೆಜೆಂಡ್ಸ್'''''''' ಸರಣಿಯ ಭಾಗವಾಗಿ, ಜನವರಿ 11 ರಿಂದ ಆರ್ಕಿಡ್‌ನ ಹರಳೂರು ಮತ್ತು ಕಾಡುಗೋಡಿ ಕ್ಯಾಂಪಸ್‌ಗಳಲ್ಲಿ ಫುಟ್‌ಬಾಲ್ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಜನವರಿ 13 ರಂದು ಭಾರತೀಯ ಫುಟ್‌ಬಾಲ್‌ತಾರೆ ಭೈಚುಂಗ್ ಭುಟಿಯಾ ಆಟದ ಕೌಶಲಗಳ ಕುರಿತು ಮಾಸ್ಟರ್‌ ಕ್ಲಾಸ್‌ ನಡೆಸಿಕೊಡಲಿದ್ದಾರೆ. ಇಲ್ಲಿ ತನಕ ಕ್ರೀಡಾ ಐಕಾನ್‌ಗಳಾದ ಮೇರಿ ಕೋಮ್, ಶಿಖರ್ ಧವನ್ ಅವರ ಡಾ ಒನ್ ಸ್ಪೋರ್ಟ್ಸ್ ಅಕಾಡೆಮಿ, ಗೀತಾ ಫೋಗಟ್ ಮತ್ತು ಅಜಂತಾ ಮೆಂಡಿಸ್ ಶಿಬಿರ ನಡೆಸಿಕೊಟ್ಟಿದ್ದಾರೆ. ಈ ಫುಟ್‌ಬಾಲ್ ತರಬೇತಿ ಶಿಬಿರಗಳ ಪ್ರಾಥಮಿಕ ಗುರಿ ಆರ್ಕಿಡ್‌ನ ಯುವ ವಿದ್ಯಾರ್ಥಿಗಳಲ್ಲಿ ಶಿಸ್ತು, ತಂಡದ ಜವಬ್ದಾರಿ, ನಿರ್ಣಯ ತೆಗೆದುಕೊಳ್ಳುವಿಕೆ ಮುಂತಾದ ಕೌಶಲ ಹೆಚ್ಚಿಸುವುದು. ಮೂರು ದಿನಗಳ ಶಿಬಿರವು ಈ ತರಬೇತಿ, ಆಟದ ಒಳನೋಟ ಮತ್ತು ಆಟಕ್ಕೆ ಅಗತ್ಯವಾದ ಕೌಶಲ ವೃದ್ಧಿಯನ್ನು ಒಳಗೊಂಡಿರುತ್ತದೆ.ಭಾರತದ ಪ್ರಮುಖ ಅಂತರರಾಷ್ಟ್ರೀಯ K12 ಶಾಲಾ ಸರಪಳಿಗಳಲ್ಲಿ ಒಂದಾದ ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್ ಇಂದು ಭಾರತೀಯ ಮಾಜಿ ವೃತ್ತಿಪರ ಫುಟ್‌ಬಾಲ್ ಆಟಗಾರ ಮತ್ತು ಪದ್ಮಶ್ರೀ ಭೈಚುಂಗ್ ಭುಟಿಯಾ ಅವರ ''''''''ಭೈಚುಂಗ್ ಭುಟಿಯಾ ಫುಟ್‌ಬಾಲ್‌ ಅಕಾಡೆಮಿ ಯೊಂದಿಗೆ ಪಾಲುದಾರಿಕೆಯನ್ನು ಪ್ರಕಟಿಸಿದೆ. ಭೈಚುಂಗ್ ಭುಟಿಯಾ ಮಾತನಾಡಿ, ‘ಒಬ್ಬ ಫುಟ್‌ಬಾಲ್ ಆಟಗಾರನಾಗಿ, ಮೈದಾನದಲ್ಲಿ ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದು ನಿಜವಾದ ಗೆಲುವು. ನಾನು ಮಾಸ್ಟರ್‌ಕ್ಲಾಸ್ ನಡೆಸಲು ಮತ್ತು ಫುಟ್‌ಬಾಲ್‌ನಲ್ಲಿ ನನ್ನ ಕಲಿಕೆಯ ಕೌಶಲಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಗಳು ಈ ಮಾಸ್ಟರ್‌ಕ್ಲಾಸ್ ಮತ್ತು ಕ್ಯಾಂಪ್‌ಗಳ ಮೂಲಕ, ಮೈದಾನದಲ್ಲಿ ಉತ್ತಮ ಸಾಧನೆ ಮಾಡುವುದಲ್ಲದೆ ತಮ್ಮ ಜೀವನದ ಎಲ್ಲಾ ಅಂಶಗಳಲ್ಲಿ ಕ್ರೀಡಾ ಮನೋಭಾವ ಮತ್ತು ಟೀಮ್‌ವರ್ಕ್‌ನ ಮನೋಭಾವವನ್ನು ಬೆಳೆಸಿಕೊಳ್ಳುವುದನ್ನು ನೋಡಲು ಆಶಿಸುತ್ತೇನೆ " ಎಂದರು.ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್‌ನ ಅಕಾಡೆಮಿಕ್ಸ್‌ ವಿಪಿ ಡಾ.ವೇದಾ ಬೈಸಾನಿ ಮಾತನಾಡಿ, ಆರ್ಕಿಡ್‌ನಲ್ಲಿ ಯಾವಾಗಲೂ ಕ್ರೀಡೆ ಮತ್ತು ದೈಹಿಕ ಶಿಕ್ಷಣವನ್ನು ಪ್ರೋತ್ಸಾಹಿಸುತ್ತೇವೆ. ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಅನುಭವವನ್ನು ಒದಗಿಸಲು ಸಾಮಾನ್ಯವಾಗಿರುವುದನ್ನು ಹೊರತುಪಡಿಸಿ ಅನನ್ಯವಾದ ಅವಕಾಶಗಳನ್ನು ಹುಡುಕುತ್ತೇವೆ. ಬೈಚುಂಗ್ ಭುಟಿಯಾ ಅವರ ಮಾಸ್ಟರ್‌ಕ್ಲಾಸ್ ಸಮಗ್ರ ಶಿಕ್ಷಣಕ್ಕೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಅವರ ಉಪಸ್ಥಿತಿಯು ನಮ್ಮ ವಿದ್ಯಾರ್ಥಿಗಳ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ” ಎಂದರು.ಆರ್ಕಿಡ್‌ನ ಅಕಾಡೆಮಿಕ್ಸ್‌ ವಿಪಿ ಸಕಿನಾ ಸಕಿನ ಖಾಸಿಮಗ್‌ ಜೈದಿ ಮಾತನಾಡಿ, ಈ ಕ್ರೀಡಾ ಸಹಭಾಗಿತ್ವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೇಗೆ ಸಹಕಾರಿ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ದಿ ಆರ್ಕಿಸ್‌ನ ವಿದ್ಯಾರ್ಥಿ ಹಿತರಕ್ಷಣೆ ವಿಭಾಗದ ವಿಪಿ ಹರ್ಷ ಗುಪ್ತಾ ಮಾತನಾಡಿ, ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿದ್ದನ್ನು ನೀಡಲು ಶಾಲೆಯ ಬದ್ಧತೆ ಮತ್ತು ಅದರ ಉಪಕ್ರಮಗಳ ಕುರಿತು ವಿವರಿಸಿದರು.

Share this article