ಉತ್ತರ ಕರ್ನಾಟಕದಲ್ಲಿ ಬೈಲಹೊಂಗಲ ಗಟ್ಟಿತನಕ್ಕೆ ಖ್ಯಾತಿ

KannadaprabhaNewsNetwork |  
Published : May 26, 2024, 01:32 AM IST
ವರ್ಗಾವಣೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲಉತ್ತರ ಕರ್ನಾಟಕದಲ್ಲಿ ಬೈಲಹೊಂಗಲ ಅತ್ಯಂತ ಗಟ್ಟಿತನಕ್ಕೆ ಹೆಸರಾಗಿದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶೆ ಉಷಾರಾಣಿ.ಆರ್ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ನ್ಯಾಯವಾದಿಗಳ ಸಭಾಭವನದಲ್ಲಿ ವರ್ಗಾವಣೆಗೊಂಡ ಮೂವರು ನ್ಯಾಯಾಧೀಶರ ಬಿಳ್ಕೋಡುಗೆ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಈ ಸ್ಥಳಕ್ಕೆ ಬರುವ ಮೊದಲು ಮನಸ್ಸಿನಲ್ಲಿ ಕಳವಳವಿತ್ತು.

ಕನ್ನಡಪ್ರಭ ವಾರ್ತೆ ಬೈಲಹೊಂಗಲಉತ್ತರ ಕರ್ನಾಟಕದಲ್ಲಿ ಬೈಲಹೊಂಗಲ ಅತ್ಯಂತ ಗಟ್ಟಿತನಕ್ಕೆ ಹೆಸರಾಗಿದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶೆ ಉಷಾರಾಣಿ.ಆರ್ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ನ್ಯಾಯವಾದಿಗಳ ಸಭಾಭವನದಲ್ಲಿ ವರ್ಗಾವಣೆಗೊಂಡ ಮೂವರು ನ್ಯಾಯಾಧೀಶರ ಬಿಳ್ಕೋಡುಗೆ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಈ ಸ್ಥಳಕ್ಕೆ ಬರುವ ಮೊದಲು ಮನಸ್ಸಿನಲ್ಲಿ ಕಳವಳವಿತ್ತು. ಆದರೆ, ಇಲ್ಲಿಯ ಹಿರಿಯ ಕಿರಿಯ ನ್ಯಾಯವಾದಿಗಳು, ಕಕ್ಷಿದಾರರು ಹಾಗೂ ಜನತೆಯ ನೀಡಿದ ಸಹಕಾರವನ್ನು ಮರೆಯಲಾಗದು. ಸರ್ಕಾರದ ನಿಯಮದಲ್ಲಿ‌ ವರ್ಗಾವಣೆ ಕಡ್ಡಾಯ ಎಂದರು.ಪ್ರಧಾನ ನ್ಯಾಯಾಧೀಶ ಮನು ಶರ್ಮಾ ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶ ಸುನೀಲಕುಮಾರ್ ಮಾತನಾಡಿ, ನಮ್ಮ ಸೇವಾವಧಿಯಲ್ಲಿ ನ್ಯಾಯಾಲಯದ ಸುಗಮ ಕಾರ್ಯ ಕಲಾಪಗಳು ನಡೆಯಲು ನ್ಯಾಯವಾದಿಗಳು ನೀಡಿದ ಸಹಕಾರ ಅತ್ಯಂತ ಶ್ಲಾಘನೀಯ. ಹಿರಿಯ ನ್ಯಾಯವಾದಿಗಳ ಅನುಭವದಿಂದ ಅನೇಕ ವಿಷಯಗಳನ್ನು ಅರಿಯುವುದರೊಂದಿಗೆ ಸಾಕಷ್ಟು ವಿಷಯಗಳನ್ನು ತಿಳಿಯುವ ಅವಕಾಶ ನಮಗೆ ಲಭಿಸಿದೆ. ಬೈಲಹೊಂಗಲದಲ್ಲಿ ಪಡೆದ ಅನುಭವ ನಮ್ಮ ಸೇವೆಗೆ ಅತ್ಯಂತ ಉಪಯುಕ್ತವಾಗಲಿದೆ ಎಂದು ತಿಳಿಸಿದರು.ಹಿರಿಯ ನ್ಯಾಯವಾದಿ ಎಂ.ವೈ.ಸೋಮಣ್ಣವರ ಮಾತನಾಡಿ, ನ್ಯಾಯಾಧೀಶರಿಗೆ ಬಿಡುವಿಲ್ಲದ ಕಾರ್ಯಗಳಲ್ಲಿಯೂ ಇಲ್ಲಿಯ ಯುವ ನ್ಯಾಯವಾದಿಗಳಿಗೆ ನ್ಯಾಯಾಧೀಶರ ಹುದ್ದೆಗೇರಲು ಪ್ರೋತ್ಸಾಹಿಸಿ, ಮಾರ್ಗದರ್ಶನ ಮಾಡಿದ್ದು, ಅಣಕು ಸಂದರ್ಶನ ನಡೆಸಿ ಇಬ್ಬರು ನ್ಯಾಯಾಧೀಶರಾಗಿ ಆಯ್ಕೆಯಾಗಲು ಶ್ರಮಿಸಿದ್ದು ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.ನ್ಯಾಯವಾದಿಗಳಾದ ಎಸ್.ಎಸ್.ಆಲದಕಟ್ಟಿ, ಎನ್.ಕೆ.ಮೆಳ್ಳಿಕೇರಿ, ಎಸ್.ಎಂ.ಅಬ್ಬಾಯಿ, ಆರ್.ಎ.ಪಾಟೀಲ ಮಾತನಾಡಿದರು. ಬೆಳಗಾವಿ ನ್ಯಾಯವಾದಿಗಳ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಸ್.ಕಿವಡಸಣ್ಣವರ ಹಾಗೂ ಪ್ರಧಾನ ಕಾರ್ಯದರ್ಶಿ ವೈ.ಕೆ.ದಿವಟೆ ಹಾಗೂ ನ್ಯಾಯವಾದಿ ಮಂಜುನಾಥ. ಕೆ.ಎಸ್.ಅವರನ್ನು ಸತ್ಕರಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವೆಂಕಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎ.ಎಂ.ಸಿದ್ರಾಮನಿ, ವಿ.ಜಿ.ಕಟದಾಳ, ವಿ.ಸಿ.ಪೂಜಾರ ಇದ್ದರು. ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಮೇಘಾ ಸೋಮಣ್ಣವರ, ಮಹಾಂತೇಶ ಮಠದರನ್ನು ಸನ್ಮಾನಿಸಲಾಯಿತು. ಎ.ಎಂ.ಮೂಗಿ, ಬಿ.ಆರ್.ಅಲಸಂಧಿ, ಝಡ್.ಎ.ಗೋಕಾಕ, ಸಿ.ಎಸ್.ಚಿಕ್ಕನಗೌಡರ, ಬಿ.ಬಿ.ಹುಲಮನಿ, ಉಮಾ ಬುಲಾಕೆ, ಎಸ್.ಎಸ್.ಮಠದ, ಬಿ.ಎಂ.ಮೂಲಿಮನಿ, ಎಸ್.ಎಂ.ಕುಲಕರ್ಣಿ, ಎ.ಎ.ಪಟ್ಟಿಹಾಳ, ಜಿ.ಬಿ.ಶಿಗಿಹಳ್ಳಿ, ಜಿ.ಬಿ.ಗೀರಿಜನ್ನವರ, ಎ.ಸಿ.ನೇಗಿನಹಾಳ, ಎಂ.ಜೆ.ಪಾಸಲಕರ, ಸಿ.ಎಚ್.ಹೊಸಮನಿ, ಬಿ.ಬಿ.ವೆಂಕಣ್ಣವರ, ಬಿ.ಆರ್.ಹರಿದಾಸ, ಪ್ರೇಮಾ ಬಡಿಗೇರ ಸೇರಿದಂತೆ ವಕೀಲರು ಉಪಸ್ಥಿತರಿದ್ದರು. ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ನಿರೂಪಿಸಿದರು. ವಿಠಲ ಕಟದಾಳ ಸ್ವಾಗತಿಸಿದರು. ಸಂತೋಷ ಹಣ್ಣಿಕೇರಿ ವಂದಿಸಿದರು.ಕೋಟ್‌....ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮನ ನಾಡಿನಲ್ಲಿ 125 ಸಂವತ್ಸರ ಪೊರೈಸಿರುವ ನ್ಯಾಯಾಲಯದಲ್ಲಿ 4 ವರ್ಷ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ. ಬೈಲಹೊಂಗಲ ಸದಾ ತವರು ಮನೆ ಇದ್ದಂತೆ, 4 ವರ್ಷದ ಸೇವಾ ನೆನಪು ಮಾಡಿಕೊಳ್ಳುವೆ.-ಉಷಾ ರಾಣಿ.ಆರ್, ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು