ಬೈಲಹೊಂಗಲ ಪುರಸಭೆ; ಅಧಿಕಾರ ಉಳಿಸಿಕೊಂಡ ಕಾಂಗ್ರೆಸ್‌

KannadaprabhaNewsNetwork |  
Published : Sep 04, 2024, 01:58 AM IST
3ಬಿಎಲ್‌ಎಚ್‌1 | Kannada Prabha

ಸಾರಾಂಶ

ಬೈಲಹೊಂಗಲ ಪುರಸಭೆಯ ನೂತನ ಅಧ್ಯಕ್ಷರಾಗಿ ವಿಜಯ ಶ್ರೀಶೈಲ ಬೋಳನ್ನವರ, ಉಪಾಧ್ಯಕ್ಷರಾಗಿ ಬುಡ್ಡೆಸಾಬ ಫಕ್ರುಸಾಬ ಶಿರಸಂಗಿ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ವಿಜಯ ಶ್ರೀಶೈಲ ಬೋಳನ್ನವರ, ಉಪಾಧ್ಯಕ್ಷರಾಗಿ ಬುಡ್ಡೆಸಾಬ ಫಕ್ರುಸಾಬ ಶಿರಸಂಗಿ ಅವಿರೋಧವಾಗಿ ಆಯ್ಕೆಯಾದರು.

ಪುರಸಭೆ ಸಭಾಭವನದಲ್ಲಿ ನಡೆದ ಚುಣಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯ ಶ್ರೀಶೈಲ ಬೋಳನ್ನವರ, ಉಪಾಧ್ಯಕ್ಷ ಸ್ಥಾನಕ್ಕೆ ಬುಡ್ಡೆಸಾಬ ಫಕ್ರುಸಾಬ ಶಿರಸಂಗಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ತಹಸೀಲ್ದಾರ, ಚುಣಾವಣೆ ಅಧಿಕಾರಿ ಎನ್.ಎಚ್. ಶಿರಹಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳು ಹೂಮಾಲೆ ಹಾಕಿ ಅಭಿನಂದಿಸಿ, ಗುಲಾಲು ಹಚ್ಚಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಪಟ್ಟಣದಲ್ಲಿ ಈಗಾಗಲೆ ಬೈಲಹೊಂಗಲ ಪುರಸಭೆ ರಾಜ್ಯದಲ್ಲಿ ಸ್ವಚ್ಛತೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದ್ದು, ಎಲ್ಲ ಸದಸ್ಯರು, ಹಿರಿಯರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಬೇಕೆಂದರು.

ನೂತನ ಅಧ್ಯಕ್ಷ ವಿಜಯ ಬೋಳನ್ನವರ ಮಾತನಾಡಿ, ಶಾಸಕ ಮಹಾಂತೇಶ ಕೌಜಲಗಿ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರು, ಅಧಿಕಾರಿಗಳ ವಿಶ್ವಾಸ ತೆಗೆದುಕೊಂಡು ನಗರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದ ಅವರು, ವಿರೋಧವಾಗಿ ಆಯ್ಕೆ ಮಾಡಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನೂತನ ಉಪಾಧ್ಯಕ್ಷ ಬುಡ್ಡೆಸಾಬ ಶಿರಸಂಗಿ ಮಾತನಾಡಿ, ನಗರ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕರ ಮತ್ತು ಎಲ್ಲ ಸದಸ್ಯರ ವಿಶ್ವಾಸ ತೆಗೆದುಕೊಂಡು ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಪುರಸಭೆ ಸದಸ್ಯ ಶಿವಾನಂದ ಕೋಲಕಾರ ಮಾತನಾಡಿ, ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿವೃದ್ದಿ ಕಾರ್ಯಗಳಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ವೇದಿಕೆ ಮೇಲೆ ಮುಖ್ಯಾಧಿಕಾರಿ ವಿರೇಶ ಹೆಸಬಿ, ಮಲ್ಲಿಕಾರ್ಜುನ ಬೋಳನ್ನವರ, ಶ್ರೀಶೈಲ ಬೋಳನ್ನವರ, ಸದಸ್ಯರಾದ ಉಳವಪ್ಪ ಬಡ್ಡಿಮನಿ, ಅರ್ಜುನ ಕಲಕುಟಕರ, ರಾಜಶೇಖರ ಮೂಗಿ, ಜಗದೀಶ ಜಂಬಗಿ, ಸುಧೀರ ವಾಲಿ, ಗುರು ಮೆಟಗುಡ್ಡ, ಅಂಜನಾ ಬೊಂಗಾಳೆ, ಲಕ್ಷ್ಮಿ ಬಡ್ಲಿ, ಅಮೀರಾಬಿ ಬಾಗವಾನ, ದಿಲಶ್ಯಾದ್‌ ನದಾಫ್, ಶಶಿಕಲಾ ಹೊಸಮನಿ, ಪ್ರೇಮಾ ಇಂಚಲ, ಲತಿಪಾ ಬೇಗಂ ಮುಲ್ಲಾ, ವಾಣಿಶ್ರೀ ಪತ್ತಾರ, ಶ್ರೀದೇವಿ ದೇವಲಾಪುರ, ಸಾಗರ ಬಾಂವಿಮನಿ ಅನೇಕರು ಇದ್ದರು. ಮುಖ್ಯಾಧಿಕಾರಿ ವಿರೇಶ ಹಸಬಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

ಬೈಲಹೊಂಗಲ ಪುರಸಭೆ ಮೊದಲಿನಿಂದಲೂ ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿದಿದ್ದು, ಚುಣಾವಣೆಯಲ್ಲಿ ಮಾತ್ರ ನಾವು ಬೇರೆ ಬೇರೆಯಾಗಿರುತ್ತೇವೆ ಚುನಾವಣೆ ಬಳಿಕ ಎಲ್ಲರೂ ನಗರದ ಅಭಿವೃದ್ಧಿಗೆ ಒಂದಾಗಿ ಕಾರ್ಯ ನಿರ್ವಹಿಸುತ್ತೇವೆ. ನೂತನ ಅಧ್ಯಕ್ಷ-ಉಪಾಧ್ಯಕ್ಷರು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಬೇಕು.

ಮಹಾಂತೇಶ ಕೌಜಲಗಿ ಶಾಸಕರು ಬೈಲಹೊಂಗಲ

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ