ಸವದತ್ತಿಯ ಅಗಸ್ತ್ಯ ತಂಡಕ್ಕೆ ಬೈಲಹೊಂಗಲ ಚಾಂಪಿಯನ್ಸ್ ಟ್ರೋಫಿಬೈಲಹೊಂಗಲ ಬೈಲಹೊಂಗಲ ಚಾಂಪಿಯನ್ಸ್ ಟ್ರೋಫಿ–2026 ಸೀಜನ್-1

KannadaprabhaNewsNetwork |  
Published : Apr 21, 2026, 04:15 AM IST
ಕ್ರಿಕೆಟ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ನಗರಸಭೆ ಕ್ರೀಡಾಂಗಣದಲ್ಲಿ ನಡೆದ ಬೈಲಹೊಂಗಲ ಚಾಂಪಿಯನ್ಸ್ ಟ್ರೋಫಿ-2026 ಸೀಜನ್-1 ಕ್ರಿಕೆಟ್ ಟೂರ್ನಾಮೆಂಟ್‍ನ ಫೈನಲ್ ಪಂದ್ಯದಲ್ಲಿ ರೋಚಕ ಅಂತಿಮ ಹಣಾಹಣಿಯಲ್ಲಿ ಅದ್ಭುತ ಆಟವಾಡಿದ ಸವದತ್ತಿಯ ಅಗಸ್ತ್ಯ-11 ತಂಡ ಚಾಂಪಿಯನ್ ಪಟ್ಟ ತನ್ನ ಮುಡಿಗೇರಿಸಿಕೊಂಡಿತು. ಈ ಮೂಲಕ ಟೂರ್ನಿಯಲ್ಲಿ ವಿಜಯ ಪತಾಕೆ ಹಾರಿಸಿ ಒಟ್ಟು ₹2.50 ಲಕ್ಷ ನಗದು ಪ್ರಥಮ ಬಹುಮಾನವನ್ನು ಪಡೆದುಕೊಂಡಿತು. ಈ ವೇಳೆ ಶಾಸಕ ಮಹಾಂತೇಶ ಕೌಜಲಗಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಗರಸಭೆ ಕ್ರೀಡಾಂಗಣದಲ್ಲಿ ನಡೆದ ಬೈಲಹೊಂಗಲ ಚಾಂಪಿಯನ್ಸ್ ಟ್ರೋಫಿ-2026 ಸೀಜನ್-1 ಕ್ರಿಕೆಟ್ ಟೂರ್ನಾಮೆಂಟ್‍ನ ಫೈನಲ್ ಪಂದ್ಯದಲ್ಲಿ

ರೋಚಕ ಅಂತಿಮ ಹಣಾಹಣಿಯಲ್ಲಿ ಅದ್ಭುತ ಆಟವಾಡಿದ ಸವದತ್ತಿಯ ಅಗಸ್ತ್ಯ-11 ತಂಡ ಚಾಂಪಿಯನ್ ಪಟ್ಟ ತನ್ನ ಮುಡಿಗೇರಿಸಿಕೊಂಡಿತು. ಈ ಮೂಲಕ ಟೂರ್ನಿಯಲ್ಲಿ ವಿಜಯ ಪತಾಕೆ ಹಾರಿಸಿ ಒಟ್ಟು ₹2.50 ಲಕ್ಷ ನಗದು ಪ್ರಥಮ ಬಹುಮಾನವನ್ನು ಪಡೆದುಕೊಂಡಿತು. ಈ ವೇಳೆ ಶಾಸಕ ಮಹಾಂತೇಶ ಕೌಜಲಗಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಅಂತಿಮ ಫೈನಲ್‌ ಪಂದ್ಯ ಭಾರಿ ಜಿದ್ದಾಜಿದ್ದಿನಿಂದ ಕೂಡಿತ್ತು. ತೀವ್ರ ಪೈಪೋಟಿ ನೀಡಿದ ಬೈಲಹೊಂಗಲದ ನಿಲ್ ಬಾಯ್ಸ್ ತಂಡ ರನ್ನರ್-ಅಪ್ ಸ್ಥಾನ ಪಡೆದು ₹1.50 ಲಕ್ಷ ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು. ಪಂದ್ಯದ ಅಂತ್ಯದಲ್ಲಿ ಆಯೋಜಕರು ವಿಜೇತ ಹಾಗೂ ರನ್ನರ್-ಅಪ್ ತಂಡಗಳಿಗೆ ಟ್ರೋಫಿ, ನಗದು ಬಹುಮಾನ ಹಾಗೂ ಸ್ಮರಣಿಕೆಗಳನ್ನು ವಿತರಿಸಿ ಗೌರವಿಸಿದರು.

ಟೂರ್ನಮೆಂಟ್‍ದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಯಿತು. ಈ ಕ್ರಿಕೆಟ್ ಟೂರ್ನಾಮೆಂಟ್‍ನಲ್ಲಿ ನಗರ ಸೇರಿದಂತೆ ವಿವಿಧ ರಾಜ್ಯಗಳು, ಗ್ರಾಮಗಳು ಹಾಗೂ ಪಟ್ಟಣಗಳಿಂದ ಭಾಗವಹಿಸಿದ್ದ ತಂಡಗಳು ಕ್ರೀಡಾ ಮನೋಭಾವದಿಂದ ಸ್ಪರ್ಧೆ ನಡೆಸಿದ್ದವು. ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಶಿಸ್ತಿನ ಬೌಲಿಂಗ್ ಪ್ರದರ್ಶಿಸಿ ಪಂದ್ಯವನ್ನು ರೋಚಕಗೊಳಿಸಿದರು.ಪಂದ್ಯಾವಳಿಯುದ್ದಕ್ಕೂ ಪ್ರೇಕ್ಷಕರು ಆಟಗಾರರನ್ನು ಹುರಿದುಂಬಿಸಿ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದರು. ಪಂದ್ಯಾವಳಿ ನಂತರ ಕ್ರೀಡಾಪಟುಗಳನ್ನು ಅಭಿನಂದಿಸಿ ಶುಭಾಶಯ ಕೋರಿದ ಶಾಸಕ ಮಹಾಂತೇಶ ಕೌಜಲಗಿ, ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳ ಆಯೋಜನೆ ಯುವಕರಲ್ಲಿ ಕ್ರೀಡಾಸಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಪ್ರತಿಭೆಯನ್ನು ಹೊರತರುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.ಚಾಂಪಿಯನ್ಸ್ ಟ್ರೋಫಿ-2026 ಸೀಜನ್-1ರಲ್ಲಿ ನಗರ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಒಟ್ಟು 24 ತಂಡಗಳು ಭಾಗವಹಿಸಿ ಅತ್ಯುತ್ತಮ ಆಟ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಬಸವರಾಜ ಕೌಜಲಗಿ, ಚಿತ್ರನಟ ಶಿವರಂಜನ ಬೋಳನ್ನವರ, ಮಹಾಂತೇಶ ತುರಮರಿ, ವೇ.ಮೂ.ಡಾ.ಮಹಾಂತಯ್ಯ ಆರದ್ರಿಮಠ, ಮುಖಂಡರಾದ ಮಹೇಶ ಬೆಲ್ಲದ, ಬಿ.ಆರ್.ಪಾಟೀಲ, ಮಹೇಶ ಹೂಲಿ, ಶಂಕರಗೌಡ ಪಾಟೀಲ, ಅನೀಶ ಕೌಜಲಗಿ, ಆದಿರಾಜ ಕೌಜಲಗಿ ಗೆಳೆಯರ ಬಳಗ ಹಾಗೂ ಪಟ್ಟಣದ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.ಧನಪಾಲ ಪಾಟೀಲ, ಪ್ರೀತಮ ಬೆಳಗಾವಿ, ಪ್ರಥಮ ತುರಮರಿ, ನವೀನ ತುರಮರಿ, ಚೇತನ ಬೆಳಗಾವಿ, ಅರುಣ ತುರಮರಿ, ಸಂಗಮೇಶ ರೇಶ್ಮಿ, ಚಿನ್ಮಯ ಸುಕುಂದಮಠ, ಬಸವರಾಜ ಚಿನಿವಾಲರ, ಮಂಜು ಪಟ್ಟಿಹಾಳ, ಮಣಿಕಂಠ ಕಗ್ಗೋಡಿ, ದರ್ಶನ ಕಮ್ಮಾರ, ಸೋಮು ಬಡ್ಡಿಮನಿ, ಶಮಿ ಮಕಾನದಾರ, ಸಮೀರ ಬೂದಿಹಾಳ, ವಿನಯ ಬೋಡಕಿ ಸೇರಿದಂತೆ ಹಲವರು ಕ್ರಿಕೆಟ್ ಟೂರ್ನಮೆಂಟ್‌ಗೆ ಯಶಸ್ಸಿಗೆ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಕ್ತರಿಗೆ ಸೋಮನಾಥ ಜ್ಯೋತಿರ್ಲಿಂಗದ ದರ್ಶನ
ಜಗಜ್ಯೋತಿ ಬಸವಣ್ಣನಿಗೆ ನಮೋ ನಮಹಃ