ಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ: ಹುಲಜತ್ತಿಗೆ ಕೊಕ್, ಸುರೇಶಗೆ ಗದ್ದುಗೆ!

KannadaprabhaNewsNetwork |  
Published : Dec 26, 2025, 03:00 AM IST
ಸುರೇಶ ಪಾಟೀಲ, ನೂತನ ಅಧ್ಯಕ್ಷ. | Kannada Prabha

ಸಾರಾಂಶ

ಸೆ.೩೦ರಂದು ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕಗೊಂಡಿದ್ದ ದಾನಪ್ಪ ಹುಲಜತ್ತಿಯವರ ಬದಲಾಗಿ ಸುರೇಶ ಪಾಟೀಲರನ್ನು ನಾಮನಿರ್ದೇಶನ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ.ಕೆ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸೆ.೩೦ರಂದು ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕಗೊಂಡಿದ್ದ ದಾನಪ್ಪ ಹುಲಜತ್ತಿಯವರ ಬದಲಾಗಿ ಸುರೇಶ ಪಾಟೀಲರನ್ನು ನಾಮನಿರ್ದೇಶನ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ.ಕೆ ಆದೇಶ ಹೊರಡಿಸಿದ್ದಾರೆ.

ದಿಢೀರ್ ಬದಲಾವಣೆ : ಕಾಂಗ್ರೆಸ್ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ವಿರೋಧದ ಮಧ್ಯೆಯೂ ಈ ಮೊದಲು ದಾನಪ್ಪ ಹುಲಜತ್ತಿಯವರನ್ನು ಸೆ.೩೦ರಂದು ನೇಮಕ ಮಾಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಒತ್ತಡದ ಮೇರೆಗೆ ಡಿ.೨೩ರಂದು ನೂತನ ಅಧ್ಯಕ್ಷರನ್ನಾಗಿ ಸುರೇಶ ಪಾಟೀಲರನ್ನು ನೇಮಕ ಮಾಡಲಾಗಿದೆ.

ಮೂರು ತಿಂಗಳಲ್ಲಿ ಇಬ್ಬರು ಅಧ್ಯಕ್ಷರು : ಈ ಮೊದಲು ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿಯಲ್ಲಿದ್ದ ಸುರೇಶ ಪಾಟೀಲ, ಶಂಕರ ಕೆಸರಗೊಪ್ಪ ಹಾಗೂ ದಾನಪ್ಪ ಹುಲಜತ್ತಿ ಹೆಸರುಗಳ ಮಧ್ಯೆ ಮಾಜಿ ಸಚಿವೆ ಉಮಾಶ್ರೀ ಅವರ ಬಳಗದಲ್ಲಿ ಕಾಣಿಸಿಕೊಂಡಿದ್ದ ದಾನಪ್ಪ ಹುಲಜತ್ತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ದಿಢೀರ್ ಬದಲಾವಣೆ ಮೂಲಕ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಬಳಗದಲ್ಲಿನ ಸುರೇಶ ಪಾಟೀಲರಿಗೆ ಮಣೆ ಹಾಕುವ ಮೂಲಕ ಮೂರು ತಿಂಗಳಲ್ಲಿ ಪ್ರಾಧಿಕಾರಕ್ಕೆ ಇಬ್ಬರು ಅಧ್ಯಕ್ಷರಾದಂತಾಗಿದೆ. ----

ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಸುರೇಶ ಪಾಟೀಲರನ್ನೇ ನೇಮಕ ಮಾಡಬೇಕೆಂಬ ಒತ್ತಾಯ ಪಕ್ಷ ಸರ್ವಾನುಮತದ ಒಪ್ಪಿಗೆಯ ಕಾರಣ ದಾನಪ್ಪ ಹುಲಜತ್ತಿಯವರನ್ನು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

-ಸಿದ್ದು ಕೊಣ್ಣೂರ ಕಾಂಗ್ರೆಸ್ ಮುಖಂಡ ತೇರದಾಳ

---

ಪಕ್ಷ ನನಗೆ ಅವಕಾಶ ಕೊಟ್ಟಷ್ಟು ದಿನ ಕೆಲಸ ಮಾಡಿದ್ದೇನೆ. ಅಸಮಾಧಾನ, ವಿರೋಧವಿಲ್ಲ. ಪಕ್ಷದ ನಿಲುವನ್ನು ಪಾಲಿಸುವೆ.

-ದಾನಪ್ಪ ಹುಲಜತ್ತಿ, ನಿರ್ಗಮಿತ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ