ಕನ್ನಡಪ್ರಭ ವಾರ್ತೆ ಇಂಡಿ
ನಗರದ ಕನ್ನಡ ಭವನ ಕಾರ್ಯಾಲಯದಲ್ಲಿ ಜರುಗಿದ ಕಸಾಪ ತಾಲೂಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕನ್ನಡ ಭವನದ ಉದ್ಘಾಟನೆ ಜರುಗಿದ್ದು, ಅತ್ಯಂತ ಸಂತಸದ ಕಾರ್ಯವಾಗಿದೆ. ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಕನ್ನಡ ಮನಸ್ಸುಗಳ ಪರವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಸದಾ ಶಾಸಕರಿಗೆ ಋಣಿಯಾಗಿದೆ. ಹಿರೇಮಸಳಿ ಹಾಗೂ ತಾಂಬಾ ಗ್ರಾಮಗಳಲ್ಲಿ ಜಾನಪದ ಸಂಭ್ರಮ ಹಾಗೂ ನಾಡಗೀತೆಯ ನೂರರ ಸಂಭ್ರಮ ಆಚರಿಸೋಣ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಅತಿ ಶೀಘ್ರವಾಗಿ ಆಚರಿಸೋಣ. ನಾಡು- ನುಡಿ.ನೆಲ-ಜಲ ಕುರಿತು ಉಪನ್ಯಾಸಗಳನ್ನು ಹಮ್ಮಿಕೊಳ್ಳೋಣ. ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಕನ್ನಡ ಮನಸ್ಸುಗಳನ್ನು ಬೆಸೆಯುವ ಮಹೋನ್ನತ ಕಾರ್ಯ ಮಾಡೋಣ ಎಂದರು. ಹಿರಿಯ ಸಾಹಿತಿ ಎನ್.ಡಿ.ಅಕ್ಕಿ ಮಾತನಾಡಿ, ಸಾಹಿತ್ಯ ಕಮ್ಮಟಗಳನ್ನು ಹಮ್ಮಿಕೊಂಡು ಯುವ ಬರಹಗಾರರಿಗೆ ಹಾಗೂ ಕವಿಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಅವರಲ್ಲಿರುವ ಸಾಹಿತ್ಯ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದರು.ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಟಿ.ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಚಟುವಟಿಕೆಗಳು ನಿರಂತರ ಸಾಗಬೇಕು. ಇಂಡಿ ಸಾಹಿತಿಗಳ ನೆಲೆಯಾಗಿದೆ ಎಂದರು. ಸತ್ಯಪ್ಪ ಹಡಪದ, ಪಾರ್ವತಿ ಸೊನ್ನದ, ಪ್ರಭು ಚಾಂದಕವಟೆ, ಐ.ಎಸ್.ಮಾಶ್ಯಾಳ, ಆನಂದ ಕೆಂಬಾವಿ, ಪುಂಡಲೀಕ ಪಕಾಲಿ, ಜಯಶ್ರೀ ತೆಲಗ, ಗೀತಾ ಹಿರೇಮಾಳ, ಹಸನ ಮುಜಾವರ ಮುಂತಾದವರು ಉಪಸ್ಥಿತರಿದ್ದರು.