
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಜಿಲ್ಲೆಯ ಎಲ್ಲ ಜನತೆಯ ಸಹಿ ಸಂಗ್ರಹ ಮಾಡಿಕೊಂಡು, ಜ.1ರಂದು ಉಸ್ತುವಾರಿ ಸಚಿವರ ಮನೆಗೆ ತೆರಳಿ ಯಾದಿಯನ್ನು ಸಲ್ಲಿಸಿ ಮನವರಿಕೆ ಮಾಡಲಾಗುವುದು. ಪ್ರತಿ ಗುರುವಾರ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ಒಂದು ಅಜೆಂಡಾ ಸಿದ್ಧಪಡಿಸಿ, ಚರ್ಚಿಸಿ ತೀರ್ಮಾನಿಸಬೇಕು ಎಂದರು.ಜಿಲ್ಲೆಯ ಎಲ್ಲ ಶಾಸಕರು ಸಿಎಂ ಅವರ ಮೇಲೆ ಒತ್ತಡ ಹಾಕಿ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಬೇಕು. ಆದಷ್ಟು ಬೇಗ ಸರ್ಕಾರಿ ವೈದ್ಯಕೀಯ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಸರ್ಕಾರ ನಿರ್ಧಾರ ಪ್ರಕಟಿಸಬೇಕು. ಸಿಎಂಅವರ ಬಳಿಗೆ ಮತ್ತೊಮ್ಮೆ ನಾವು ನಿಯೋಗ ಬರುವ ಅವಶ್ಯಕತೆ ಇಲ್ಲ, ಸಚಿವರೇ ನಮ್ಮ ನಿಯೋಗವಿದ್ದಂತೆ. ಅವರೇ ಸಿಎಂ ಅವರಿಗೆ ಮನವರಿಕೆ ಮಾಡಲಿ. ಸಚಿವ ಸಂಪುಟದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಲಾಗುವುದು ಎಂದು ತೀರ್ಮಾನ ಆಗುವವರೆಗೂ ನಮ್ಮ ಹೋರಾಟ ಇರಲಿದೆ ಎಂದು ತಿಳಿಸಿದರು.ಮುಖಂಡ ಅನೀಲ ಹೊಸಮನಿ ಮಾತನಾಡಿ, ವಾರಕ್ಕೊಮ್ಮೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಜೆಂಡಾ ಪ್ರಕಟಿಸಿ, ಚರ್ಚಿಸಿ ತೀರ್ಮಾನಿಸಬೇಕು. ಜ.9ಕ್ಕೆ ಸಿಎಂ ವಿಜಯಪುರಕ್ಕೆ ಬರಲಿದ್ದಾರೆ, ಅಷ್ಟರಲ್ಲಿ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬೇಕು. ಇದು ಪಕ್ಷಾತೀತವಾದ ಹೋರಾಟವಿದ್ದು, ಉಸ್ತುವಾರಿ ಸಚಿವರು ಸೇರಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಸೇರಿ ಸರ್ಕಾರಿ ಮೆಡಿಕಲ್ ಕಾಲೇಜು ತರಬೇಕು. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 11 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿ ಕಾಲೇಜು ಮಾಡಬೇಕು ಎಂದು ನಿರ್ಣಯಿಸಲಾಗಿತ್ತು ಎಂದು ಉಸ್ತುವಾರಿ ಸಚಿವರು ಹೇಳಿದ್ದಾರೆ. ಆದರೆ, ಆ ಬಳಿಕ 11 ಜಿಲ್ಲೆಗಳಲ್ಲಿ ಮೂರು ಜಿಲ್ಲೆಗಳಾದ ಬಾಗಲಕೋಟೆ, ಕನಕಪುರ, ಉಡುಪಿಯಲ್ಲಿ ಪಿಪಿಪಿ ಬದಲಾಗಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಯಾಕೆ ಬದಲಾಯಿಸಿದರು?. ಅದರಂತೆ ವಿಜಯಪುರಕ್ಕೂ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಮಲ್ಲಿಕಾರ್ಜುನ. ಎಚ್.ಟಿ, ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಬಟಗಿ, ಸುರೇಶ ಬಿಜಾಪುರ, ಅಕ್ರಂ ಮಾಶಾಳಕರ, ಸುರೇಖಾ ರಜಪೂತ, ಗೀತಾ.ಹೆಚ್, ಜಗದೇವ ಸೂರ್ಯವಂಶಿ, ಹೋರಾಟ ಸಮಿತಿ ಸದಸ್ಯರು ಇದ್ದರು.