ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪಟ್ಟಣದ ವಿಶ್ವರಾಜ್ ಸಭಾಭವನದಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇತ್ತೀಚೆಗೆ ತಾಲೂಕಿನಲ್ಲಿ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಣ, ಹೆಂಡ, ಅಧಿಕಾರದ ಬಲಪ್ರಯೋಗ ನಡೆಸಿದವರಿಗೆ ಸ್ವಾಭಿಮಾನಿ ಮತದಾರರು ತಕ್ಕಶಾಸ್ತಿ ಮಾಡಿದ್ದಾರೆ. ಹಿರಿಯರ ದೂರದೃಷ್ಟಿಯಿಂದ ಎಲ್ಲ ಸಮುದಾಯದ ಹಿತಬಯಸಿ ಸ್ಥಾಪಿಸಿದ ಸಹಕಾರಿ ಸಂಘಗಳಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಹಕಾರಿ ಸಂಸ್ಥೆಗಳನ್ನು ಉಳಿಸಿ ಬೆಳೆಸಲು ತಾಲೂಕಿನ ಜನತೆ ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದರು.
ಚುನಾವಣೆಯಲ್ಲಿ ತಮ್ಮ ವಿರುದ್ಧ ಮತ ಚಲಾಯಿಸಿದ ಸಂಘಗಳಿಗೂ ಈ ಮೊದಲಿನಂತೆಯೇ ಸಾಲ ಮರುಪಾವತಿ ವ್ಯವಸ್ಥೆ ಮಾಡಲಾಗುವುದು. ತಾಲೂಕಿನ ಜನತೆ ಸಹಕಾರಿ ಸಂಘಗಳನ್ನು ತಾಯಿ ಅಂದುಕೊಂಡಿದ್ದಾರೆ. ಆದರೆ, ಹೊರಗಿನವರು ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಿ ಹಾಳು ಮಾಡುವ ಹುನ್ನಾರ ನಡೆಸಿದ್ದಾರೆ. ತಾಲೂಕಿನ ಸಂಸ್ಥೆಗಳ ಮೇಲೆ ಯಾರಾದರೂ ಕಣ್ಣು ಹಾಕಿದರೆ ಅಂಥವರ ಭವಿಷ್ಯದ ರಾಜಕೀಯ ಅಂತ್ಯಗೊಳಿಸುತ್ತೇವೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್‌ಗೆ ಕಳೆದ 45 ವರ್ಷಗಳಿಂದ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ತಾಲೂಕಿನ 92 ಸಂಘಗಳ ಮೂಲಕ 54 ಸಾವಿರ ರೈತ ಸದಸ್ಯರು ಶೂನ್ಯ ಬಡ್ಡಿದರದಲ್ಲಿ ₹ 400 ಕೋಟಿ ಸಾಲ ಪಡೆದು ₹ 380 ಕೋಟಿ ಸಾಲ ಮನ್ನಾ ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.
------
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಏರ್ಪಟ್ಟ ಕತ್ತಿ ಹಾಗೂ ಎ.ಬಿ.ಪಾಟೀಲ ಕುಟುಂಬದ ನಡುವಿನ ಮೈತ್ರಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಬಿರುಕು ಕಾಣದು. ತಾಲೂಕಿನ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸಂಕೇಶ್ವರ ಮತ್ತು ಹುಕ್ಕೇರಿ ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕತ್ತಿ-ಪಾಟೀಲ ಕುಟುಂಬದ ನಡುವಿನ ಮೈತ್ರಿಕೂಟ ಒಂದಾಗಿ ಎದುರಿಸಿ, ಹೊರಗಿನ ವಿರೋಧಿಗಳನ್ನು ಸೆದೆಬಡಿಯಲಿದೆ. ಜೊತೆಗೆ 2028ರ ವಿಧಾನಸಭೆ ಚುನಾವಣೆಯಲ್ಲಿ ಯಮಕನಮರಡಿಯಿಂದ ಹೊರಗಿನವರನ್ನು ಓಡಿಸಲಾಗುವುದು.