ಕಾರಟಗಿ: ತ್ಯಾಗ ಬಲಿ ದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ಶ್ರದ್ಧಾಭಕ್ತಿಯಿಂದ, ಪ್ರಾರ್ಥನೆ ಮಾಡುವ ಮೂಲಕ ಆಚರಿಸಿದರು.
ಧರ್ಮಗುರು ಜಫರ್ ಸಾಬ್ ಮೌಲಾನ್ ಸೈಯದ್ ಸಾಧೀಕ್, ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಧರ್ಮ ಗುರುಗಳು ಮಾತನಾಡಿ, ನಮ್ಮೆಲ್ಲರ ಜೀವನ ಪ್ರಾಮಾಣಿಕತೆಯಿಂದ ಕೂಡಿರಬೇಕು.ಬದುಕು ಸುಂದರವಾಗಿರಲು ನಮ್ಮಲ್ಲಿರುವ ಅಹಂಕಾರ, ವಂಚನೆ, ಅಸೂಯೆ. ಮತ್ಸರ ಮುಂತಾದ ದುರ್ಗುಣಗಳ ನ್ನು ತ್ಯಾಗ ಮಾಡಿ ಸದ್ಗುಣ ಮೈಗೂಡಿಸಿಕೊಂಡು ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬದುಕಬೇಕು ಎಂದರು.
ಸಾಮೂಹಿಕ ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಜಾಮಿಯಾ ಮಸೀದ್ ಅಧ್ಯಕ್ಷ ಅಬ್ದುಲ್ ಗನಿಸಾಬ್ ಮಾತನಾಡಿ, ಭಕ್ರೀದ್ ಸೌಹಾರ್ದ ಮತ್ತು ಗೌರವ ಬೆಳೆಸುವ ಹಬ್ಬವಾಗಿದೆ.ಸಮಾಜದ ಬಾಂಧವ್ಯ ಗಟ್ಟಿಗೊಳಿಸುತ್ತದೆ. ಇಂದು ದ್ವೇಷ, ವಿಭಜನೆ ಮತ್ತು ಅಸಹಿಷ್ಣುತೆಯ ನಡುವೆ ತ್ಯಾಗ ಸಹೋರತ್ವದ ಮತ್ತು ಸಮಾನತೆಯ ಸಂದೇಶ ಸಾರುತ್ತಿದೆ ಎಂದರು.ಈ ಸಂದರ್ಭದಲ್ಲಿ ಜಾಮಿಯಾ ಮಸೀದ್ ಅಧ್ಯಕ್ಷ ಅಬ್ದುಲ್ ಗನಿಸಾಬ್ ಬಾಬುಸಾಬ್ ಬಳಿಗಾರ, ಎಂ.ಡಿ.ಇಬ್ರಾಹಿಂ ಅಮದಿಹಾಳ, ಖಾಜಾಹುಸೇನ್ ಮುಲ್ಲಾ, ಅಮ್ರುಲ್ ಹುಸೇನ್, ಅಮ್ಜದ್ ಕಪಾಲಿ,ರಾಜಾಸಾಬ್ ಗ್ಯಾಸ್,ಸಿರಾಜ್ ಹುಸೇನ್, ಗೌಸ್ ಮೊಹಿನುದ್ದೀನ್, ಮುಸ್ತಫಾ ಬೇವಿನಗೀಡದ, ಎಂ.ಡಿ.ಯೂಸೂಪ್, ಜಾಕೀರ್ ಹುಸೇನ್ ಮೋಹಿನುದ್ದೀನ್, ಮಹಮದ್ ಅಲಿ ಬಳಿಗಾರ, ಮೆಹಬೂಬ್ ಅಂಚಿ, ಖಲಂದರ್ ಸಾಬ್ ಮುಲ್ಲಾ, ಜೀಲಾನ್‌ಸಾಬ್ ಗುಜರಿ, ಜಹಾಂಗೀರ್ ಸಾಬ್, ನಬೀಸಾಬ್ ಅಡ್ಡ, ರಬ್ಬಾನಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪ್ರಮುಖರು ಇದ್ದರು.