ದೊಡ್ಡಬಳ್ಳಾಪುರ: ತ್ಯಾಗ ಮತ್ತು ಬಲಿದಾನದ ಸಂಕೇತವಾಧ ಬಕ್ರೀದ್ ಹಬ್ಬವನ್ನು ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸೋಮವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಶಾಂತಿನಗರದ ದರ್ಗಾ ಮತ್ತು ಪ್ರಾರ್ಥನಾ ಸ್ಥಳಗಳಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸಲ್ಮಾನ ಬಾಂಧವರು ಪಾಲ್ಗೊಂಡಿದ್ದರು.
ಪ್ರಾಮಾಣಿಕತೆ, ತ್ಯಾಗ, ಬಲಿದಾನ, ಮತ್ತು ಪ್ರೀತಿ ಈ ಹಬ್ಬದ ಸಂದೇಶವಾಗಿದೆ.ಈ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಸತ್ಪ್ರಜೆಯಾಗಿ ಬಾಳಲು, ಉತ್ತಮ ಸಮಾಜ ನಿರ್ಮಾಣವಾಗುವುದಕ್ಕೆ ಬಕ್ರೀದ್ ಹಬ್ಬದ ಸಂದೇಶ ಪೂರಕವಾಗಲಿದೆ. ಪರಸ್ಪರ ಸಂಸ್ಕೃತಿಯನ್ನು ನಾವು ಹಂಚಿಕೊಂಡು ಅರ್ಥ ಮಾಡಿಕೊಂಡರೆ ಬಲಿಷ್ಠ ಭಾರತ ನಿರ್ಮಾಣವಾಗಲು ಸಾಧ್ಯವಾಗಲಿದೆ. ನಮ್ಮ ಸಮಾಜದಲ್ಲಿ ಸಾಮರಸ್ಯ ಮತ್ತು ಒಗ್ಗಟ್ಟಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂಬ ಸಂದೇಶವನ್ನು ಸಾರಿದರು.
ದೊಡ್ಡಬಳ್ಳಾಪುರ ನಗರದ ವಿವಿಧ ದರ್ಗಾಗಳು, ಪ್ರಾರ್ಥನಾ ಸ್ಥಳಗಳು, ದೊಡ್ಡಬೆಳವಂಗಲ, ಮಧುರೆ, ಸಾಸಲು ಹಾಗೂ ತೂಬಗೆರೆ ಹೋಬಳಿಗಳ ವಿವಿದೆಡೆಗಳಲ್ಲೂ ಬಕ್ರೀದ್ ಸಂಭ್ರಮ ಮನೆಮಾಡಿತ್ತು.17ಕೆಡಿಬಿಪಿ1-ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿ ಸಹಸ್ರಾರು ಮುಸಲ್ಮಾನ ಬಾಂಧವರು ಬಕ್ರೀದ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.17ಕೆಡಿಬಿಪಿ2-