ಸೋಮವಾರಪೇಟೆ: ಬಕ್ರೀದ್ ಹಬ್ಬ ಆಚರಣೆ

KannadaprabhaNewsNetwork |  
Published : Jun 09, 2025, 04:23 AM IST
ತ್ಯಾಗದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. | Kannada Prabha

ಸಾರಾಂಶ

ತ್ಯಾಗದ ಪ್ರತೀಕವಾಗಿರುವ ಬಕ್ರೀದ್‌ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತ್ಯಾಗದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಪಟ್ಟಣದ ಜಲಾಲೀಯ, ಹನಫಿ ಜಾಮಿಯ, ಕಲ್ಕಂದೂರು, ತಣ್ಣೀರುಹಳ್ಳ, ಹೊಸತೋಟ, ಕಾಗಡಿಕಟ್ಟೆ ಸೇರಿದಂತೆ ಹಲವೆಡೆ ಹಬ್ಬದಾಚರಣೆ ಕಂಡುಬಂದಿತು.

ಸಮೀಪದ ಬಜೆಗುಂಡಿ ಗ್ರಾಮದ ಖೀಳಾರಿಯ ಮಸೀದಿಯಲ್ಲಿ ಬೆಳಗ್ಗೆ ಸಮಾಜಬಾಂಧವರು ಸೇರಿ ಸಾಮೂಹಿಕ ಪ್ರಾರ್ಥನೆ ಮಾಡುವುದರೊಂದಿಗೆ, ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಸೀದಿ ಗುರುಗಳಾದ ಉಬೈದ್ ಫೈಜಿ ಪ್ರಾರ್ಥನೆಯ ನೇತೃತ್ವ ವಹಿಸಿ, ಪ್ರವಚನ ನಡೆಸಿಕೊಟ್ಟರು.

ನಂತರ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಮಾನವೀಯ ಸಂಬಂಧಗಳನ್ನು ಬೆಸೆಯುವ ಆಶಯಗಳನ್ನು ಎಲ್ಲ ಧರ್ಮಗಳು ಪ್ರತಿಪಾದಿಸಿದೆ ಮತ್ತು ಹಿಂಸೆಯನ್ನು ಕಟುವಾಗಿ ವಿರೋಧಿಸಿದೆ. ಇಸ್ಲಾಂ ಮಾನವೀಯ ಸಂಬಂಧಗಳ ಅಡಿಪಾಯದಲ್ಲಿ ಬೇರೂರಿದೆ. ಈದುಲ್ ಹಬ್ಬ ಕುಟುಂಬ ಸಂಬಂಧಗಳನ್ನು ಅದರ ಮಹತ್ವವನ್ನು ಜಗತ್ತಿಗೆ ನೆನಪಿಸುತ್ತದೆ. ನಾಡಿನಲ್ಲಿ ಶಾಂತಿ ಸೌಹಾರ್ದತೆ ನಾಡು ನಮ್ಮದಾಗಲಿ ಎಂದು ಹೇಳಿದರು.

ಈ ಸಂದರ್ಭ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷ ಅನೀಫ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸುಲೈಮಾನ್, ಸಹ ಕಾರ್ಯದರ್ಶಿ ನಿಯಾದ್, ಖಜಾಂಚಿ ಅದ್ರಾಮ ಸೇರಿದಂತೆ ಸಮಾಜಬಾಂಧವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌
ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು