ತ್ಯಾಗ, ಬಲಿದಾನದ ಸಾರವೇ ಬಕ್ರೀದ್

KannadaprabhaNewsNetwork |  
Published : Jun 08, 2025, 01:23 AM ISTUpdated : Jun 08, 2025, 01:24 AM IST
ಫೆÇೀಟೋ 1 * 2  : ಸೋಂಪುರ ಹೋಬಳಿಯ ಲಕ್ಕೂರಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಯುಕ್ತ ಜಾಮೀಯಾ ಮಸೀದಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಪ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಖಲೀಂ ಉಲ್ಲಾ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. | Kannada Prabha

ಸಾರಾಂಶ

5000 ಹಜರತ್ ವರ್ಷಗಳ ಇತಿಹಾಸವಿರುವ, ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನದ ಸಾರವೇ ಬಕ್ರೀದ್ ಎಂದು ಜಾಮೀಯಾ ಮಸೀದಿ ಅಧ್ಯಕ್ಷ ಖಲೀಂ ಉಲ್ಲಾ ಹೇಳಿದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

5000 ಹಜರತ್ ವರ್ಷಗಳ ಇತಿಹಾಸವಿರುವ, ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನದ ಸಾರವೇ ಬಕ್ರೀದ್ ಎಂದು ಜಾಮೀಯಾ ಮಸೀದಿ ಅಧ್ಯಕ್ಷ ಖಲೀಂ ಉಲ್ಲಾ ಹೇಳಿದರು.

ಸೋಂಪುರ ಹೋಬಳಿಯ ಲಕ್ಕೂರಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.ನಾಡಿನೆಲ್ಲೆಡೆ ಇಂದು ಶ್ರದ್ದಾ ಭಕ್ತಿಯ, ತ್ಯಾಗ ಬಲಿದಾನದ ಆಚರಣೆಯಾಗಿ ಬಕ್ರೀದ್ ನಡೆಯುತ್ತಿದೆ, ನಮ್ಮ ಗ್ರಾಮದ ಸುಮಾರು 3,500ಕ್ಕೂ ಅಧಿಕ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಭಾವೈಕ್ಯತರ ಸಾರಿದ್ದೇವೆ, ಸಾಮೂಹಿಕ ಗೀತೆ ಹಾಡಿ, ಪರಸ್ಪರ ಶುಭಾಶಯ ಕೋರಿದ್ದೇವೆ, ಪ್ರವಾದಿ ಇಬ್ರಾಹಿಂ ಸ್ಮರಣೆ ಹಾಗೂ ಕಳೆದ ವರ್ಷ ದಾಬಸ್‍ಪೇಟೆ ಮತ್ತು ಲಕ್ಕೂರು ಭಾಗಕ್ಕೆ ಅಲ್ಪಸಂಖ್ಯಾತ ಮತ್ತು ವಕ್ಟ್ ಸಚಿವರಾದ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ, ಲಕ್ಕೂರಿನ ಮದರಸ ಹಾಗೂ ಗೋವಿಂದಪುರ, ಕೂತಘಟ್ಟ ಗ್ರಾಮದ ಅಭಿವೃದ್ಧಿ ಮುಂದಾಗುತ್ತೇವೆ ಎಂದು ತಿಳಿಸಿರುವುದು ಅತ್ಯಂತ ಹೆಚ್ಚು ಸ್ವಾಗತಾರ್ಹ ವಿಚಾರ ಎಂದರು. ನೆಲಮಂಗಲ ಶಾಸಕರಾದ ಎನ್.ಶ್ರೀನಿವಾಸ್ ರವರು ಅಲ್ಪಸಂಖ್ಯಾತ ಇಲಾಖೆಯಡಿಯ ಅನುದಾನದಲ್ಲಿ ಸಾಕಷ್ಟು ಕಾಮಗಾರಿ ಜಾರಿ ತಂದಿದ್ದಾರೆ, ₹1 ಕೋಟಿ ಲಕ್ಕೂರು ಗ್ರಾಮಕ್ಕೆ, ದಾಬಸ್ ಪೇಟೆಗೂ ₹50 ಲಕ್ಷ, ಕೂತಘಟ್ಟ ಗ್ರಾಮಕ್ಕೆ ₹50 ಲಕ್ಷ ಅನುದಾನ ನೀಡಿದ್ದಾರೆ ಎಂದರು. ಸೋಂಪುರ ಹೋಬಳಿಯ ಬಿಲ್ಲಿನಕೋಟೆ, ದಾಬಸ್‍ಪೇಟೆ, ಕೂತಘಟ್ಟ, ಹಾಲೇನಹಳ್ಳಿ ಗ್ರಾಮದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಿದರು. ಧರ್ಮಗುರು ಸಲೀಂ ಅಹಮ್ಮದ್, ಲಕ್ಕೂರಿನ ಜಾಮೀಯ ಮಸೀದಿ ಉಪಾಧ್ಯಕ್ಷರಾದ ಸೈಯದ್ ಸುಭಾನ್ ಸಾಬ್, ಅಶ್ವಕ್ ಅಹಮದ್, ಗ್ರಾ.ಪಂ.ಸದಸ್ಯರಾದ ಸೈಯದ್ ಮುಜಿಬ್ ಉಲ್ಲಾ, ಅಲ್ಲಾ ಭಕ್ಷ, ಸೈಯದ್ ಮಫ್ತಿಯಾರ್, ಜುನೈದ್ ಅಹಮದ್, ಜಮೀಲ್ ಅಹಮದ್, ಮನ್ಸೂರ್ ಅಹಮದ್, ಹಮ್ಜದ್ ಖಾನ್, ಮಹಮ್ಮದ್ ಗೌಸ್, ಅಶ್ವಕ್, ಇಸ್ಮಾಯಿಲ್ ಷರೀಫ್, ಅಮ್ಜರ್, ನವಾಬ್, ಶಫೀ, ಅಲ್ಲಾ ಭಕ್ಷ್, ನಿಜಾಂ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ