ಕನ್ನಡಪ್ರಭ ವಾರ್ತೆ ಬಾದಾಮಿ
ವಿಶ್ವ ಪರಿಸರ ದಿನದ ನಿಮಿತ್ತ ಗುರುವಾರ ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಇಕೋ ಕ್ಲಬ್, ಭಾರತ ಸೈಟ್ಸ್ ಹಾಗೂ ಗೈಡ್ಸ್ ಸಂಸ್ಥೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಶಾಲೆಗಳಲ್ಲಿ ಗಿಡ ಬೆಳೆಸಿ. ಪರಿಸರ ಸಂರಕ್ಷಣೆಯಲ್ಲಿ ಕೈ ಜೋಡಿಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಸದಸ್ಯ ಬಸವರಾಜ ಅಂಗಡಿ, ಪ್ರಭಾರಿ ಪ್ರಾಚಾರ್ಯ ಶಂಕರರಾವ್ ಕುಲಕರ್ಣಿ, ಶಿಕ್ಷಕರಾದ ರಮೇಶ ಕತ್ತಿಕೈ, ಬಸವರಾಜ ಸಿಂದಗಿಮಠ, ಭಾಗ್ಯಲಕ್ಷ್ಮಿಟಿ.ಎಚ್, ಹನುಮಂತ ಬಂಡಿಗಣಿ, ಶ್ರೀನಿವಾಸ ಈಳಗೇರ, ಬಸವರಾಜ ಚಿಕ್ಕನ್ನವರ, ರಮೇಶ ಹಂಜಿ, ಎಸ್.ಎಸ್. ರಾಠೋಡ, ಎಸ್.ಬಿ. ಮುದೇನಗುಡಿ ಮತ್ತಿತರರು ಇದ್ದರು.