ಕನ್ನಡಪ್ರಭ ವಾರ್ತೆ ನಾಪೋಕ್ಲು
ಗಣಪತಿ ಪ್ರಾರ್ಥನೆ, ನದಿ ಪೂಜೆ, ವೃಕ್ಷ ಪೂಜೆ, ಗೋಪೂಜೆ, ಶ್ರೀ ಅಗಸ್ತ್ಯೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ಪರ್ಜನ್ಯ ಜಪ, ರುದ್ರಾಭಿಷೇಕ, ಅಲಂಕಾರ ಪೂಜೆ ಹಾಗು ಮಳೆಗಾಗಿ ಊರಿನ ತಕ್ಕ ಮುಖ್ಯಸ್ಥರು ನಾಡಿಗೆ ಉತ್ತಮ ಮಳೆಯಾಗಿ ಜನರ ಜೀವನ ಸಮೃದ್ಧಿ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖರು ಹಾಗೂ ಕಾರ್ಯಕರ್ತರು, ದುರ್ಗಾ ವಾಹಿನಿ, ಮಾತೃಮಂಡಳಿ, ಬಜರಂಗದಳದ ಸದಸ್ಯರು, ಬಲಮುರಿ ಗ್ರಾಮಸ್ಥರು ದೇವಾಲದ ಅಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.ದೇವಸ್ಥಾನದ ಪುರೋಹಿತ ಮಹಾಬಲೇಶ್ವರ ಭಟ್ ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಪರ್ಜನ್ಯ ಜಪದ ಮಹತ್ವವನ್ನು ವಿವರಿಸಿದ ಅವರು, ನದಿಯಿಂದ ನೀರನ್ನು ತಂದು ಶಿವಾಲಯದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ಅಭಿಷೇಕದ ಜಲ ನಿರಂತರವಾಗಿ ಹರಿದು ಮತ್ತೆ ನದಿಯನ್ನು ಸೇರಬೇಕು, ಹೀಗೆ ಮಾಡುವಾಗ ನಿರಂತರವಾಗಿ ರುದ್ರಪಠಣ ನಡೆಯಬೇಕು.