ಬಾಲರಾಜು ಗೆದ್ದು ಮೋದಿ 3ನೇ ಬಾರಿ ಪ್ರಧಾನಿ ಆಗಲಿ

KannadaprabhaNewsNetwork | Published : Apr 21, 2024 2:17 AM

ಸಾರಾಂಶ

ದೇಶದ ಹಿತದೃಷ್ಟಿಯಿಂದ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಚಾಮರಾಜನಗರ ಮತ್ತು ಮೈಸೂರು-ಕೊಡಗು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಬಿಜೆಪಿ ಮುಖಂಡ ಗುರುಪಾದಸ್ವಾಮಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಾಮರಾಜನಗರದೇಶದ ಹಿತದೃಷ್ಟಿಯಿಂದ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಚಾಮರಾಜನಗರ ಮತ್ತು ಮೈಸೂರು-ಕೊಡಗು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಬಿಜೆಪಿ ಮುಖಂಡ ಗುರುಪಾದಸ್ವಾಮಿ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೩೦ ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಪಕ್ಷ ವಹಿಸಿದ್ದ ಜವಾಬ್ದಾರಿಗಳನ್ನು ಪ್ರಾಮಾಣಿಕತೆಯಿಂದ ಮಾಡುತ್ತಾ ಬಂದಿದ್ದೆ, ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇ ಆದರೆ ನನಗೆ ದೊರೆಯಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಟಿಕೆಟ್ ಕೇಳಿದೆ, ಲಕ್ಷಣ್ ಅವರಿಗೆ ನೀಡಿದರು.

ಕಾಂಗ್ರೆಸ್‌ನಲ್ಲಿ ವೀರಶೈವರಿಗೆ ಅನ್ಯಾಯವಾಗುತ್ತಿದೆ. ಈಗ ನನ್ನ ಬೆಂಬಲಿಗರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇನೆ. ರಾಜಶೇಖರಮೂರ್ತಿಯವರ ಗರಡಿಯಲ್ಲಿ, ಧ್ರುವನಾರಾಯಣ ಮತ್ತು ಎಸ್.ಬಾಲರಾಜು ಜೊತೆ ರಾಜಕೀಯಕ್ಕೆ ಬಂದೆ. ಧ್ರುವನಾರಾಯಣ ಮತ್ತು ಎಸ್.ಬಾಲರಾಜು ನನ್ನ ಆತ್ಮೀಯ ಗೆಳೆಯರು. ಎಸ್.ಬಾಲರಾಜು ಒಳ್ಳೆಯ ವ್ಯಕ್ತಿ. ಈ ಚುನಾವಣೆಯಲ್ಲಿ ಅವರು ಗೆಲ್ಲಬೇಕು. ಸಮಾಜದ ಬಾಂಧವರು, ಸ್ನೇಹಿತರು, ಹಿತೈಷಿಗಳು ಬಾಲರಾಜು ಅವರನ್ನು ಬೆಂಬಲಿಸಬೇಕು ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ೧೦ ವರ್ಷಗಳಿಂದ ಉತ್ತಮ ಆಡಳಿತ ನಡೆಸಿದ್ದಾರೆ. ಆದರಿಂದ ಮತ್ತೇ ಮೋದಿಯೇ ಪ್ರಧಾನಿ ಆಗಬೇಕು, ಈ ಕ್ಷೇತ್ರದಲ್ಲಿ ಎಸ್. ಬಾಲರಾಜು ಗೆಲ್ಲಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಗುರುಪಾದಸ್ವಾಮಿಯವರ ಜೊತೆ ಬಿಜೆಪಿ ಸೇರಿದ ಕ್ಷತ್ರೀಯ ಮುಖಂಡ ಎನ್.ಎಸ್.ರಾಜೇಂದ್ರ, ಕುರುಬರ ಸಂಘದ ಮುಖಂಡ ರಂಗನಾಥ್, ಒಕ್ಕಲಿಗರ ಸಂಘದ ಜೆ.ನವೀನ್‌ಕೃಷ್ಣ, ಮುಸ್ಲಿಂ ಮುಖಂಡರಾದ ಪ್ಯಾರಿಜಾನ್, ಎಜಾಜ್ ಪಾಷಾ, ಇಮ್ರಾನ್ ಪಾಷ, ನಾಗೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎನ್‌ರಿಚ್ ಮಹದೇವಸ್ವಾಮಿ ಇದ್ದರು.

Share this article