ಬಲ್ಡೋಟಾ ಸಣ್ಣ ಸಸಿ ನೆಟ್ಟು ದೊಡ್ಡ ಜೀವ ತೆಗೆಯುತ್ತಿದೆ: ಪ್ರದೀಪ್

KannadaprabhaNewsNetwork |  
Published : Dec 12, 2025, 02:30 AM IST
ಪೋಟೊ11.10: ಕೊಪ್ಪಳ ನಗರದಲ್ಲಿ ನಡೆದ ಧರಣಿಗೆ ಕೊಪ್ಪಳ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿ ಬೆಂಬಲಿಸಿದರು. | Kannada Prabha

ಸಾರಾಂಶ

ಬಲ್ಡೋಟಾ ನಗರದಲ್ಲಿ ಸಣ್ಣ ಸಸಿಗಳನ್ನು ನೆಟ್ಟು,ಕೂರಲು ಸಿಮೆಂಟ್ ಸೀಟು ಹಾಕಿಸಿ ದೊಡ್ಡ ಜೀವ ತೆಗೆಯಲು ಮುಂದಾಗಿದೆ.

ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯಿಂದ ನಡೆದ ಧರಣಿಯಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿ ಬೆಂಬಲಿಸಿದರು.

ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ ಪ್ರದೀಪಕುಮಾರ ಹದ್ದಣ್ಣವರ್ ಮಾತನಾಡಿ, ನಮ್ಮ ಪ್ರಾಣ ಉಳಿಸಿಕೊಳ್ಳಲು ಇರುವ ಏಕೈಕ ವೇದಿಕೆ ಈ ಹೋರಾಟವಾಗಿದೆ, ಇದೊಂದು ಸಾಂಕೇತಿಕ ಹೋರಾಟವಾಗಿರದೆ ಜನಸಾಮಾನ್ಯರ ಹೋರಾಟ ಆಗಬೇಕಿದೆ, ನಾವೆಲ್ಲರೂ ಬೆಂಬಲಿಸಬೇಕಿದೆ. ಹಾಗೇನಾದರೂ ಬಲ್ದೋಟ ವಿಸ್ತರಣೆ ಆಗಿ ಹೋರಾಟದಲ್ಲಿ ಸೋತರೆ ಅದು ನಮ್ಮ ಸಾವಿಗೆ ಸಮಾನವಾಗುತ್ತದೆ.

ಬಲ್ಡೋಟಾ ನಗರದಲ್ಲಿ ಸಣ್ಣ ಸಸಿಗಳನ್ನು ನೆಟ್ಟು,ಕೂರಲು ಸಿಮೆಂಟ್ ಸೀಟು ಹಾಕಿಸಿ ದೊಡ್ಡ ಜೀವ ತೆಗೆಯಲು ಮುಂದಾಗಿದೆ. ಅಂತಹ ಆಸೆಗಳಿಗೆ ಈಡಾಗದೇ, ಪರಿಸರ ಉಳಿಸಿಕೊಳ್ಳಲು ಮುಂದೆ ಬಂದು ಬೀದಿಗಿಳಿದು ಹೋರಾಟ ಮಾಡಬೇಕು. ರಾಜಕಾರಣಿಗಳು ಇದೆಲ್ಲವನ್ನು ನುಂಗಿ ನೀರು ಕುಡಿಯುತ್ತೇವೆ ಎನ್ನುವ ಧಾವಂತದಲ್ಲಿದ್ದಾರೆ. ನಮ್ಮ ಅಭಿವೃದ್ಧಿ ಕಂಪನಿ ಕೊಡುವ ಉದ್ಯೋಗದಲ್ಲಿ ಇಲ್ಲ ಕಂಪನಿಗಳು ಉದ್ಯೋಗದ ಆಸೆ ಹುಟ್ಟಿಸಿ ಹಿಂಬದಿಯಿಂದ ಚಿತ್ರ ಹಿಂಸೆ ನೀಡಿ ತಂತ್ರಜ್ಞಾನ ಅಳವಡಿಸಿ ಉದ್ಯೋಗ ಕಡಿತ ಮಾಡಿ ಇರುವ ಉದ್ಯೋಗಿಗಳನ್ನು ಹೊರಹಾಕುತ್ತಾರೆ. ಈ ಹೋರಾಟ ಯಶಸ್ವಿಯಾಗುವವರೆಗೆ ಜಿಲ್ಲೆಯ ಎಲ್ಲ ವಿಭಾಗದ ವಿದ್ಯಾರ್ಥಿಗಳು ಜೊತೆಗಿದ್ದು ಹೋರಾಡುತ್ತೇವೆ ಎಂದರು.

ಶರಣಪ್ಪ ಆಡಿನ್ ಮಾತನಾಡಿ,ನಮ್ಮ ಹೋರಾಟ ಇಲ್ಲಿನ ರಾಜಕಾರಣಿಗಳು ಕಡೆಗಣಿಸುತ್ತಿದ್ದಾರೆ. ಇವರಿಗೆ ನಾವು ಪಾಠ ಕಲಿಸಬೇಕಾಗಿದೆ ಇಷ್ಟೊಂದು ಜನರ ಜೀವಕ್ಕೆ ಮಾರಕವಾಗಿದ್ದರು. ಈ ವಿಚಾರದಲ್ಲಿ ಸರ್ಕಾರದಲ್ಲಾಗಲಿ ವಿಧಾನಸೌಧದಲ್ಲಾಗಲಿ ಏನನ್ನು ಮಾತನಾಡುತ್ತಿಲ್ಲ ನಾವು ಇವರ ಬಗ್ಗೆ ಯಾವುದೇ ಮುಲಾಜಿ ಕಾಯುವುದು ಬೇಡ ಕೂಡಲೇ ಇವರನ್ನು ಪ್ರಶ್ನೆ ಮಾಡಲು ಮುಂದಾಗೋಣ ರಸ್ತೆಯಲ್ಲಿ ನಿಲ್ಲಿಸಿ ಕೇಳೋಣ ಎಂದರು.

ಈ ಧರಣಿಯಲ್ಲಿ ನಿವೃತ್ತ ಅಧಿಕಾರಿ ಘಟ್ಟನಗೌಡ ಬಿ.ಪಾಟೀಲ್, ಸಾಹಿತಿ ಈಶ್ವರ ಹತ್ತಿ, ಜಂಟಿ ಕ್ರಿಯಾ ವೇದಿಕೆಯ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನೀವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರ, ಕವಿವಿ ವಿದ್ಯಾರ್ಥಿ ಬಸವರಾಜ ಬಡಿಗೇರ್, ರವಿ ಕಾಂತನವರ, ಕಾಶಿಂ ನಾಗೇಶನಹಳ್ಳಿ, ವೀರಣ್ಣ ಪಲ್ಲೇದ್, ಮೂಕಪ್ಪ ಮೇಸ್ತ್ರೀ,ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ವೀರಪ್ಪ ಹೊಸಮನಿ ಹಾಲವರ್ತಿ, ಯಶೋಧಾ ಗಡ್ಡೇರ್, ಉಮೇಶ ಗಣಪಾ, ಹನುಮಂತಪ್ಪ ಗೊಂದಿ, ನಾಗರಾಜ್ ಜೋಶಿ, ಭೀಮಪ್ಪ ಯಲಬುರ್ಗಿ, ಮಂಗಳೇಶ ರಾಠೋಡ್, ಪಂಪಣ್ಣ ಗಿಣಿಗೇರಿ, ಎ.ಎಂ. ಮದರಿ, ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಮಖ್ಬೂಲ್ ರಾಯಚೂರು, ಶಿವಪ್ಪ ಹಡಪದ, ಶರಣು ಗಡ್ಡಿ, ಬಸವರಾಜ ನರೇಗಲ್ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ