-1949ರಲ್ಲಿ ಆರಂಭಗೊಂಡ ಕೃಷಿ ಸಂಘ । ಅಧ್ಯಕ್ಷ ಟಿ.ಎಂ.ಉಮೇಶ್ ಮಾಹಿತಿ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಎಸಿಎಸ್) ಅಮೃತ ಮಹೋತ್ಸವ ಸಮಾರಂಭ ಅ.28ರಂದು ಕಡ್ಲೇಮಕ್ಕಿಯ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ತಿಳಿಸಿದ್ದಾರೆ.ಬಾಳೆಹೊನ್ನೂರಿನಲ್ಲಿ 1949ರಲ್ಲಿ ಊರಿನ ಹಲವು ಹಿರಿಯರ ಶ್ರಮದ ಫಲವಾಗಿ ರೈತರ ಹಿತದೃಷ್ಟಿಯಿಂದ ವ್ಯವಸಾಯ ಸೇವಾ ಸಹಕಾರ ಸಂಘ ಹೆಸರಿನಲ್ಲಿ ಆರಂಭಗೊಂಡ ಪಿಎಸಿಎಸ್ ಇಂದು ಯಶಸ್ಸಿನ ಹಾದಿಯಲ್ಲಿ ಮುನ್ನಡೆದು ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.28ರ ಸೋಮವಾರ ಸಂಘದ ಪ್ರಧಾನ ಕಚೇರಿಯಲ್ಲಿ ಸಹಕಾರಿ ಧ್ವಜಾರೋಹಣ ನೆರವೇರಿಸಿ ಪಟ್ಟಣದ ಮುಖ್ಯರಸ್ತೆಯಲ್ಲಿ ಸಹಕಾರಿ ಜಾಗೃತಿ ಜಾಥಾ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಂಘದ ನಿರ್ದೇಶಕ ಕೆ.ಟಿ.ವೆಂಕಟೇಶ್ ಮಾತನಾಡಿ, ಅಮೃತ ಮಹೋತ್ಸವ ಆಚರಣೆ ನಮ್ಮೆಲ್ಲರ ಹೆಮ್ಮೆ, 1949ರಲ್ಲಿ 216 ಸದಸ್ಯರಿಂದ ಕೇವಲ ₹2 ಸಾವಿರ ಷೇರು ಹಣದೊಂದಿಗೆ ಆರಂಭಗೊಂಡ ಸಂಘ ಸಹಕಾರ ತತ್ವದಡಿ ಕಾರ್ಯ ನಿರ್ವಹಿಸುತ್ತಿದೆ.
ವೈದ್ಯನಾಥನ್ ವರದಿ ಅನ್ವಯ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ತನ್ನ ಸ್ವಂತ ಲಾಭಾಂಶದಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ. ಮೂಲ ಬಂಡವಾಳ ಉತ್ತಮವಾಗಿ ಹೊಂದಿ ಸಂಘ ಭದ್ರವಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಎಂ.ಸಿ.ಚಂದ್ರಶೇಖರ್, ನಿರ್ದೇಶಕರಾದ ಹಿರಿಯಣ್ಣ, ಎಂ.ಎಸ್.ಅರುಣೇಶ್, ಕೆ.ಟಿ.ಗೋವಿಂದೇಗೌಡ, ಬಿ.ಎ. ರಾಜಪ್ಪಗೌಡ, ಸುಧಾ ಎಸ್.ಪೈ, ಲೀಲಾವತಿ, ಸಂಘದ ಸಿಇಒ ಎಚ್.ಉಮೇಶ್, ಕರಿಮನೆ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ಪ್ರವೀಣ್‌ಕುಮಾರ್, ಸಂಘದ ಸಿಬ್ಬಂದಿ ಎಚ್.ಎಂ.ವೆಂಕಟೇಶ್, ಸತೀಶ್, ಡಿ.ರಾಜೇಂದ್ರ, ಅಣ್ಣಪ್ಪ, ಬಿ.ಎಸ್.ಶ್ರೀನಿವಾಸ್, ಚಿರಾಗ್, ನಂದನ್, ಕಿಶೋರ್ ಹಾಜರಿದ್ದರು.-----
ಬಾಳೆಹೊನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ಬಿಡುಗಡೆಗೊಳಿಸಿದರು. ಚಂದ್ರಶೇಖರ್, ವೆಂಕಟೇಶ್, ಹಿರಿಯಣ್ಣ, ಅರುಣೇಶ್, ರಾಜಪ್ಪಗೌಡ, ಸುಧಾ ಪೈ ಇದ್ದರು.