ಬಲ್ಲಮಾವಟಿ ನಾಲ್ನಾಡ ಹಾಕಿ ಕ್ಲಬ್‌ ತರಬೇತಿ ಶಿಬಿರ

KannadaprabhaNewsNetwork |  
Published : Apr 28, 2026, 02:30 AM IST
ಹಾಕಿ | Kannada Prabha

ಸಾರಾಂಶ

ಬಲ್ಲಮಾವಟಿ ನಾಲ್ನಾಡ ಹಾಕಿ ಕ್ಲಬ್‌ ವತಿಯಿಂದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲಾ ಆಟದ ಮೈದಾನದಲ್ಲಿ ಹಾಕಿ ತರಬೇತಿ ಶಿಬಿರ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಬಲ್ಲಮಾವಟಿ ನಾಲ್ನಾಡ ಹಾಕಿ ಕ್ಲಬ್‌ ವತಿಯಿಂದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲಾ ಆಟದ ಮೈದಾನದಲ್ಲಿ ಹಾಕಿ ತರಬೇತಿ ಶಿಬಿರ ಉದ್ಘಾಟಿಸಲಾಯಿತು.ಕೊಡಗಿನ ಹಿರಿಯ ಹಾಕಿ ಆಟಗಾರ ಮಡಿಕೇರಿಯ ವಾಂಡರ್ಸ್ ಕ್ಲಬ್‌ನ ತರಬೇತುದಾರ ಕೋಟೆರ ನಾಣಯನ್‌ ಅವರು ಉದ್ಘಾಟಿಸಿ ಮಾತನಾಡಿ, ಶಿಬಿರಾರ್ಥಿಗಳು ಯಾವ ರೀತಿಯಲ್ಲಿ ಶಾಲೆಯಲ್ಲಿ ಶಿಸ್ತುಬದ್ಧವಾಗಿ ಪಾಠ ಪ್ರವಚನಗಳಲಿ ಭಾಗವಹಿಸುತ್ತಿರೋ ಅದೇ ರೀತಿಯಲ್ಲಿ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಸಂಘದ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಅಪ್ಪಚೆಟ್ಟೋಳಂಡ ಡಾಲಿ ಬೋಪಯ್ಯ, ನುಚ್ಚಿಮಣಿಯಂಡ ಗಣೇಶ್‌ ಭಾಗವಹಿಸಿದ್ದರು. ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ತರಬೇತುದಾರರಾದ ಅಂಜಪರವಂಡ ರೋಷನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕರವಂಡ ಅಪ್ಪಣ್ಣ ಹಾಗೂ ನಾಲ್ನಾಡ ಹಾಕಿ ಕ್ಲಬ್‌ನ ಉಪಾಧ್ಯಕ್ಷ ಕೈಬಿಲಿರ ಉಮೇಶ್ ಉತ್ತಪ್ಪ, ಬೈರುಡ ಮಾಚಯ್ಯ, ನಾಲ್ನಾಡ್ ಹಾಕಿ ಕ್ಲಬ್ ನ ಸಹ ಕಾರ್‍ಯದರ್ಶಿ ಮಚ್ಚುರ ಯಧುಕುಮಾರ್ ಮತ್ತಿತರರಿದ್ದರು.

ಮಚ್ಚುರ ರಕ್ಷ , ಚೇನಂಡ ತಾನ್ವಿ ಪ್ರಾರ್ಥಿಸಿದರು. ಕಾರ್‍ಯದರ್ಶಿ ಚಂಗೇಟಿರ ಸೋಮಣ್ಣ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಅರಮೇರಿ ಶ್ರೀ
ಮುಕ್ಕಾಟಿರ ಹರಿಹರ, ಕಾಂಡಂಡ ತಂಡ ಹಗ್ಗಜಗ್ಗಾಟ ಚಾಂಪಿಯನ್ಸ್‌