ದುಗ್ಗಳ ಸದಾನಂದ
ಇಲ್ಲಿನ ಜನರಲ್ ಕೆ..ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ನಡೆದ ಫ್ರೀ ಕ್ವಾಟರ್ ಫೈನಲ್ ಪಂದ್ಯಗಳಲ್ಲಿ ಪಳಂಗಂಡ, ಪೆಮ್ಮಂಡ, ಕುಲ್ಲೆಟಿರ ಹಾಗೂ ನೆಲ್ಲಮಕ್ಕಡ ತಂಡಗಳು ಜಯ ಸಾಧಿಸಿದವು.ಪಳಂಗಂಡ, ಪಾಡೆಯಂಡ ವಿರುದ್ಧ 3-0ಯಿಂದ, ಪೆಮ್ಮಂಡ, ಪುಲ್ಲಂಗಡ ವಿರುದ್ಧ 4-3ರಿಂದ, ಕುಲ್ಲೆಟಿರ, ಸಣ್ಣವಂಡ ವಿರುದ್ಧ 6-2ರಿಂದ, ನೆಲ್ಲಮಕ್ಕಡ, ಬಿದ್ದಾಟಂಡ ವಿರುದ್ಧ 4-0 ಅಂತರದಿಂದ ಜಯ ಗಳಿಸಿದವು. ಪೆಮ್ಂಡ ಮತ್ತು ಪುಲ್ಲಂಗಡ ತಂಡಗಳ ನಡುವೆ ಸ್ಪರ್ಧಾ ರೋಚಕವಾಗಿದ್ದು, ಎರಡು ತಂಡಗಳು ಪಂದ್ಯದಲ್ಲಿ 1-1 ಗೋಲು ಗಳಿಸಿದವು. ನಂತರ ಟೈ ಬ್ರೇಕರ್ ನಲ್ಲಿ ಪೆಮ್ಮಂಡ 4-3ರಿಂದ ಪುಲ್ಲಂಗಡ ವಿರುದ್ಧ ಗೆಲುವು ಸಾಧಿಸಿತು.ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಶಿವಾಚಾಳಿಯಂಡ, ಬಿದ್ದಾಟಂಡ ವಿರುದ್ಧ 3-0ಯಿಂದ, ನಾಪಂಡ, ಮುಕ್ಕಾಟಿರ ವಿರುದ್ಧ 2-0ಯಿಂದ, ಮುಕ್ಕಾಟಿರ (ಹರಿಹರ) 8-0ಯಿಂದ ಚೌರಿರ (ಹೊದವಾಡ) ವಿರುದ್ಧ, ಮೇವಡ 1-0ಯಿಂದ ತೀತಿಮಾಡ ವಿರುದ್ಧ, ಪಳಗಂಡ 3- 0ಯಿಂದ ಪಾಡೆಯಂಡ ವಿರುದ್ಧ , ಮಾಪಣಮಾಡ 2-0ಯಿಂದ ಕಡೆಮಾಡ ವಿರುದ್ಧ, ಮಾಚಮಾಡ 2-0ಯಿಂದ ಮೂವೆರ ವಿರುದ್ಧ,ಶಿವಾಚಾಳಿಯಂಡ 2-0ಯಿಂದ ಕುಟ್ಟಂಡ (ಮಾದಾಪುರ ) ವಿರುದ್ಧ, ತೆಕ್ಕಡ 1-0ಯಿಂದ ಪರದಂಡ ವಿರುದ್ಧ, ಕಾಯಪಂಡ 1-0 ಯಿಂದ ಮಾಪಣ ಮಾಡ ವಿರುದ್ಧ, ನಾಪಂಡ 2-0ಯಿಂದ ಗುದ್ದಂಡ ವಿರುದ್ಧ ಗೆಲುವು ಸಾಧಿಸಿದವು. ಟೈ ಬ್ರೇಕರ್ ನಲ್ಲಿ ಬುಟ್ಟಿಯಂಡ ಪಾಂಡಿರ ವಿರುದ್ಧ, ಮುಕ್ಕಾಟಿರ ಮೇವಡ ವಿರುದ್ಧ, ಚೇನಂಡ ಚೋಯಮಾಡಂಡ ವಿರುದ್ಧ ಜಯ ಗಳಿಸಿದವು. ಪೊರ್ಕೊಂಡ, ಮನೆಯಪಂಡ, ತಾತಂಡ ತಂಡಗಳು ವಾಕ್ಓವರ್ ಗಳಿಸಿದವು.
ಅರಮಣಮಾಡ v/s ಕಂಬೀರಂಡ ಬೆಳಗ್ಗೆ 9
ಕೋಳೇರ v/s ಚೆಪ್ಪುಡಿರ ಬೆಳಗ್ಗೆ 10.30ಮೂಕೊಂಡ v/s ಇಟ್ಟೀರ 12.00ಕ್ಕೆ
ಪರದಂಡ v/s ಮಂಡೇಪಂಡ 1.30ಕ್ಕೆ