ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಶಿಶು ಸಾವು : ವೈದ್ಯರ ನಿರ್ಲಕ್ಷ್ಯ ಆರೋಪ

ಸಾರಾಂಶ

ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಗುರುವಾರ ಶಿಶು ಮರಣ ಹೊಂದಿದ್ದು, ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಿರುಗುಪ್ಪ ತಾಲೂಕಿನ ಶಿರಿಗೇರಿ ಗಂಗೋತ್ರಿ ಎಂಬವರು ಗಂಡು ಶಿಶುವಿಗೆ ಜನ್ಮ ನೀಡಿದ್ದರು.

ಬಳ್ಳಾರಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಗುರುವಾರ ಶಿಶು ಮರಣ ಹೊಂದಿದ್ದು, ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಿರುಗುಪ್ಪ ತಾಲೂಕಿನ ಶಿರಿಗೇರಿ ಗಂಗೋತ್ರಿ ಎಂಬವರು ಗಂಡು ಶಿಶುವಿಗೆ ಜನ್ಮ ನೀಡಿದ್ದರು. 

ಹೆರಿಗೆ ಬಳಿಕ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದರು. ಸ್ವಲ್ಪ ಹೊತ್ತಿನಲ್ಲಿ ಶಿಶುವಿನ ಆರೋಗ್ಯದಲ್ಲಿ ಏರುಪೇರಾಗಿ ಅಸುನೀಗಿದೆ. ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಮಾಡಿರುವ ಆರೋಪ ನಿರಾಕರಿಸಿರುವ ಬಿಮ್ಸ್‌ ವೈದ್ಯರು, ಗರ್ಭದಲ್ಲಿರುವಾಗಲೇ ಶಿಶು ಶ್ವಾಸಕೋಶ ಸಮಸ್ಯೆ ಎದುರಿಸುತ್ತಿತ್ತು. ಶಸ್ತ್ರಚಿಕಿತ್ಸೆ ಹೆರಿಗೆ ಮಾಡುವುದು ಬೇಡ. ಸಹಜ ಹೆರಿಗೆ ಆಗಲಿ ಎಂದು ಕುಟುಂಬದ ಸದಸ್ಯರು ತಡೆದಿದ್ದರು. ಗರ್ಭದಲ್ಲಿರುವಾಗಲೇ ಶಿಶು ಮಲ ತಿಂದು ಸಮಸ್ಯೆಯಲ್ಲಿತ್ತು ಎಂದಿದ್ದಾರೆ.

Share this article