ವಿಪ ಚುನಾವಣೆ ಮತದಾರರಿಗೆ ಮತಚೀಟಿ ವಿತರಿಸಬೇಕು

KannadaprabhaNewsNetwork |  
Published : May 25, 2024, 12:54 AM IST
ಕ್ಯಾಪ್ಷನಃ24ಕೆಡಿವಿಜಿ38ಃದಾವಣಗೆರೆಯಲ್ಲಿ ವಿಧಾನ ಪರಿಷತ್ ಚುನಾವಣೆ, ಮತದಾರರಿಗೆ ವೋಟರ್ ಸ್ಲಿಪ್ ವಿತರಣೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚನೆ ನೀಡಿದರು. | Kannada Prabha

ಸಾರಾಂಶ

ರಾಜ್ಯ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಮತದಾರರಿಗೆ ಮತಚೀಟಿ ಹಾಗೂ ವೋಟರ್ ಗೈಡ್ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ವಿಧಾನ ಪರಿಷತ್ತು ಸಹಾಯಕ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದ್ದಾರೆ.

- ಡಿಸಿ, ವಿಪ ಸಹಾಯಕ ಚುನಾವಣಾಧಿಕಾರಿ ಸೂಚನೆ । ತಾಲೂಕುಗಳ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಮತದಾರರಿಗೆ ಮತಚೀಟಿ ಹಾಗೂ ವೋಟರ್ ಗೈಡ್ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ವಿಧಾನ ಪರಿಷತ್ತು ಸಹಾಯಕ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ಶುಕ್ರವಾರ ಎಲ್ಲ ತಾಲೂಕುಗಳ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಸೂಚನೆ ನೀಡಿದರು. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ದಾವಣಗೆರೆ, ಹರಿಹರ, ಜಗಳೂರು ತಾಲೂಕುಗಳು ಮತ್ತು ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳು ಸೇರಲಿವೆ. ಮತದಾರರಿಗೆ ವೋಟರ್ ಸ್ಲಿಪ್ ಹಾಗೂ ವೋಟರ್ ಗೈಡ್ ವಿತರಣೆ ಮಾಡಲು ಸೂಚನೆ ನೀಡಿದರು. ಮತಚೀಟಿ ವಿತರಣೆಗೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ ಎಂದರು.

ಮತಗಟ್ಟೆವಾರು ಮತದಾರರ ವಿವರ:

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಹರಿಹರದ ಸರ್ಕಾರಿ ಪ್ರೌಢಶಾಲೆ, ಗಾಂಧಿ ನಗರ ಇಲ್ಲಿ 461, ದಾವಣಗೆರೆಯ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಕೊಠಡಿ ಸಂಖ್ಯೆ.1 ರಲ್ಲಿ 707, ಇಲ್ಲಿನ ಎರಡನೇ ಮತಗಟ್ಟೆ ಕೊಠಡಿ ಸಂಖ್ಯೆ 2ರಲ್ಲಿ 708, ಕೊಠಡಿ ಸಂಖ್ಯೆ 3ರಲ್ಲಿ 708, ಕೊಠಡಿ 4ರಲ್ಲಿ 708, ಕೊಠಡಿ ಸಂಖ್ಯೆ 5ರಲ್ಲಿ 708 ಹಾಗೂ ಜಗಳೂರಿನ ತಾಲೂಕು ಕಚೇರಿಯಲ್ಲಿ 351 ಮತದಾರರು ಸೇರಿ 4351 ಮತದಾರರಿದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರ:

ನ್ಯಾಮತಿ ತಾಲೂಕು ಕಚೇರಿ 79, ಹೊನ್ನಾಳಿ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಇಲ್ಲಿ 321, ಬಸವಾಪಟ್ಟಣ ಜನತಾ ಪ್ರೌಢಶಾಲೆ ಕೊಠಡಿ ಸಂಖ್ಯೆ 3ರಲ್ಲಿ 246, ಚನ್ನಗಿರಿ ತಾಲೂಕು ಪಂಚಾಯಿತಿ ಕೊಠಡಿ ಸಂಖ್ಯೆ 3ರಲ್ಲಿ 322 ಮತದಾರರು ಸೇರಿ ಒಟ್ಟು 968.

ನೈರುತ್ಯ ಪದವೀಧರರ ಕ್ಷೇತ್ರ:

ನ್ಯಾಮತಿ ತಾಲೂಕು ಕಚೇರಿ ಕೊಠಡಿ ಸಂಖ್ಯೆ 2ರಲ್ಲಿ 1012, ಹೊನ್ನಾಳಿ ತಾಲೂಕು ಆಡಳಿತಸೌಧ ಕೊಠಡಿ 1ರಲ್ಲಿ 751, ಇಲ್ಲಿನ ಕೊಠಡಿ 2ರಲ್ಲಿ 729, ಕೊಠಡಿ 3ರಲ್ಲಿ 724, ಬಸವಾಪಟ್ಟಣ ಜನತಾ ಪ್ರೌಢಶಾಲೆ ಪೂರ್ವ ವಿಭಾಗದ ಕೊಠಡಿ 1ರಲ್ಲಿ 765, ಇಲ್ಲಿನ ಕೊಠಡಿ 2ರಲ್ಲಿ 764, ಚನ್ನಗಿರಿ ತಾಲೂಕು ಪಂಚಾಯಿತಿ ಕಟ್ಟಡದ ಪೂರ್ವ ವಿಭಾಗದ ಕೊಠಡಿ 1ರಲ್ಲಿ 907 ಹಾಗೂ ಇಲ್ಲಿನ ಕೊಠಡಿ 2 ರಲ್ಲಿ 906 ಸೇರಿ 6558 ಮತದಾರರಿದ್ದಾರೆ.

- - - -24ಕೆಡಿವಿಜಿ38ಃ:

ದಾವಣಗೆರೆಯಲ್ಲಿ ವಿಪ ಚುನಾವಣೆ, ಮತದಾರರಿಗೆ ವೋಟರ್ ಸ್ಲಿಪ್ ವಿತರಣೆಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಳಿಂಗ ಸರ್ಪ ರಕ್ಷಣೆ
ಸಂವಿಧಾನ ದಿನಾಚರಣೆ: ವಿವಿಧ ಸ್ಪರ್ಧೆ ಆಯೋಜನೆ