ಸೂಲಿಬೆಲೆ: ಜನರ ವಿಶ್ವಾಸ, ನಂಬಿಕೆಯನ್ನು ಗಳಿಸಿರುವ ನಂದಿನಿ ಉತ್ಪನ್ನಗಳ ಮೇಲೆ ಕೆಲವರು ತಪ್ಪು ಸಂದೇಶಗಳನ್ನು ನೀಡಿ ದಾರಿ ತಪ್ಪಿಸುತ್ತಿರುವುದು ಖಂಡನೀಯ. ಈ ಉತ್ಪನ್ನಗಳ ಸೇವನೆಯಿಂದ ಯಾವುದೇ ತೊಂದರೆಯಿಲ್ಲ ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ ಹೇಳಿದ್ದಾರೆ.
ಹೊಸಕೋಟೆ ಶಿಬಿರ ಉಪ ವ್ಯವಸ್ಥಾಪಕ ಶ್ರೀರಾಮ್ ಮಾತನಾಡಿ, ಕೆಲವು ಖಾಸಗಿ ವ್ಯಕ್ತಿಗಳು ನಂದಿನಿ ಹಾಲಿನ ಮಾರುಕಟ್ಟೆ ಹಾಳು ಮಾಡಬೇಕು ಎಂಬ ದುರುದ್ದೇಶವನ್ನಿಟ್ಟುಕೊಂಡು ಈ ರೀತಿ ಅಪಪ್ರಚಾರ ಮಾಡುತ್ತಿದ್ದು, ನಂದಿನಿ ರೈತರಿಂದ ಕಟ್ಟಿರುವ ಸಂಸ್ಥೆಯಾಗಿದೆ. ರೈತರ ನೀಡಿರುವ ನೀಡಿರುವ ಹಾಲನ್ನು ಸಂಸ್ಕರಿಸಿ ಎಲ್ಲ ರೀತಿಯ ತಪಾಸಣೆ ಮಾಡಿ ಉತ್ಪನ್ನ ತಯಾರಿಸಲಾಗುತ್ತಿದೆ. ಹಾಲಿನ ಎಲ್ಲ ರೀತಿ ಗುಣಮಟ್ಟ ಪರೀಕ್ಷೆ ಮಾಡಿದ ನಂತರವೇ ಮಾರುಕಟ್ಟೆಗೆ ರವಾನೆಯಾಗುತ್ತಿದೆ. ಉದ್ದೇಶಪೂರ್ವಕವಾಗಿ ಕೆಲವರು ನಂದಿನಿ ಬಗ್ಗೆ ತಪ್ಪು ಸಂದೇಶ ಹರಡುತ್ತಿದ್ದಾರೆ. ಇದರ ಬಗೆ ಜನರು ತಲೆಕೆಡಿಸಿಕೊಳ್ಳಬಾರದು ಎಂದರು. ಈ ಸಂದರ್ಭದಲ್ಲಿ ಡಾ.ಸಂತೋಷ್ ಕುಮಾರ್ ಎಂ.ಡಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ಹಾಜರಿದ್ದರು