ರಾಮನಗರ: ಬಮೂಲ್‌ನಲ್ಲಿ ಹಲವು ಸುಧಾರಣೆಗಳನ್ನು ಕೈಗೊಂಡ ನಂತರ ನಷ್ಟದಲ್ಲಿದ್ದ ಒಕ್ಕೂಟ ಇದೀಗ ಜನವರಿಯಲ್ಲಿ ಮಾಸಿಕ 20 ಕೋಟಿ ಲಾಭದಲ್ಲಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ಒಕ್ಕೂಟದ ಅಧಿಕಾರಿ ಮತ್ತು ಸಿಬ್ಬಂದಿಗಳು ಇತ್ತೀಚೆಗೆ 5 ಕೋಟಿಯಷ್ಟು ಡಿಎ ಭತ್ಯೆಯನ್ನು ಕೋರಿ ಪ್ರತಿಭಟನೆಗೆ ಮುಂದಾಗಿದ್ದರು. ನನ್ನ ಬಳಿ ಪ್ರಸ್ತಾವನೆ ಬಂದಿತು. ರೈತರಿಗೆ ಏನು ಕೊಡಲು ಸಾಧ್ಯವಾಗಿಲ್ಲ. ಮೊದಲ ರೈತರಿಗೆ ಏನಾದರು ಕೊಡುಗೆ ನೀಡಬೇಕು. ನಂತರ ನಿಮಗೆ ನೀಡುತ್ತೇನೆ. ರೈತರು ಇಲ್ಲದಿದ್ದರೆ ನಮಗೆ ಕೆಲಸವೇ ಇರಲ್ಲ. ಮೊದಲು ಹೈನುಗಾರರಿಗೆ ಹೆಚ್ಚು ಲಾಭ ದೊರಕುವಂತೆ ಮಾಡಲು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದಿದ್ದೇನೆ ಎಂದು ಹೇಳಿದರು.
ಕೃಷಿಯೇ ಜೀವನಾಧಾರ :ಕೃಷಿ ಕ್ಷೇತ್ರದಲ್ಲಿ ರೈತರಿಗೆ ಆದಾಯ ತಂದು ಕೊಡುತ್ತಿರುವುದು ಹಾಲು ಮತ್ತು ರೇಷ್ಮೆ ಮಾತ್ರ. ಕ್ಷೀರ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರುವ ಕೆಲಸ ಮಾಡುತ್ತಿದ್ದೇನೆ. ಮುಂದೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಎಲ್ಲೂ ಕೆಲಸ ಸಿಗಲ್ಲ. ದುಡಿಯುವ ಕೈಗಳಿಗೆ ಮಾತ್ರ ಆದಾಯ ಸಿಗುತ್ತದೆ. ಕೃಷಿ ಕ್ಷೇತ್ರ ಜೀವನಾಧರ ಆಗುತ್ತದೆ ಎಂದು ತಿಳಿಸಿದರು.
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಶಾಶ್ವತ ನೀರಾವರಿಗಾಗಿ ಡಿ.ಕೆ.ಸುರೇಶ್ ಶ್ರಮ ಪಟ್ಡಿದ್ದಾರೆ. ಇದರಿಂದ ರೇಷ್ಮೆ ಮತ್ತು ಹೈನುಗಾರಿಕೆಗೆ ಸಹಕಾರಿಯಾಗಿದೆ.2 8 ಕೋಟಿ ರು.ವೆಚ್ಚದಲ್ಲಿ ಕಾಳೇಗೌಡನ ದೊಡ್ಡಿ ಏತ ನೀರಾವರಿ ಯೋಜನೆ ಇನ್ನೊಂದು ವರ್ಷದಲ್ಲಿ ಪೂರ್ಣವಾಗಲಿದೆ. ಮಂಚನಬೆಲೆ ಎಡ ಮತ್ತು ಬಲದಂಡೆ ನಾಲೆ ಆಧುನೀಕರಣಕ್ಕೆ 70 ಕೋಟಿ ಯೋಜನೆಗೆ ಅನುಮೋದನೆ ದೊರೆಯುತ್ತಿದೆ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಬಮೂಲ್ ನಿರ್ದೇಶಕ ಪಿ.ನಾಗರಾಜು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವಿ.ಎಚ್.ರಾಜು, ಮುಖಂಡರಾದ ವಾಸು, ಗೋವಿಂದ್, ಪ್ರಭು, ಪ್ರಾಣೇಶ್, ರಾಮಯ್ಯ, ಉಮಾಶಂಕರ್, ರಮೇಶ್, ಜಗದೀಶ್, ಕಾಳೇಗೌಡನದೊಡ್ಡಿ ಶೇಖರ್, ಬಮೂಲ್ ವ್ಯವಸ್ಥಾಪಕ ಡಾ.ಶ್ರೀಧರ್, ಉಪವ್ಯವಸ್ಥಾಪಕ ಡಾ.ಗಣೇಶ್ ಹಾಗಲಹಳ್ಳಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ವೆಂಕಟಪ್ಪ, ಕಾರ್ಯದರ್ಶಿ ಮೂರ್ತಿ, ನಿರ್ದೇಶಕರಾದ ಶಿವಕುಮಾರ್, ಅಪ್ಪಾಜಯ್ಯ, ಮೂಡಲಗಿರಿಯಪ್ಪ, ಗುಂಡಪ್ಪ, ಗಿರಿತಿಮ್ಮಯ್ಯ, ಗಣೇಶಪ್ಪ, ನರಸಿಂಹಯ್ಯ, ಮಂಗಳಗೌರಮ್ಮ, ಕಮಲಮ್ಮ, ವಿಜಯಮ್ಮ, ಗಿರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.1ಕೆಆರ್ ಎಂಎನ್ 3.ಜೆಪಿಜಿ
ರಾಮನಗರ ತಾಲೂಕಿನ ಹಾಗಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಉದ್ಘಾಟಿಸಿದರು.---------------------------------