ಬಣಜಿಗ ಸಮಾಜ ಬಲಿಷ್ಠಗೊಳಿಸಲು ನಿರ್ಧಾರ

KannadaprabhaNewsNetwork |  
Published : Aug 21, 2025, 02:00 AM IST
ಸಭೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸಪ್ಟೆಂಬರ್ ಕೊನೆ ವಾರದಲ್ಲಿ ನಡೆಸಲು ತೀರ್ಮಾನಿಸಿರುವ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾದಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ನಿವೃತ್ತಿ ಹೊಂದಿರುವ ನೌಕರರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅಶೋಕ ಚಟ್ಟೇರ, ಕಾರ್ಯದರ್ಶಿ ರಾಜು ಬಳ್ಳೊಳ್ಳಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಪ್ಟೆಂಬರ್ ಕೊನೆ ವಾರದಲ್ಲಿ ನಡೆಸಲು ತೀರ್ಮಾನಿಸಿರುವ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾದಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ನಿವೃತ್ತಿ ಹೊಂದಿರುವ ನೌಕರರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅಶೋಕ ಚಟ್ಟೇರ, ಕಾರ್ಯದರ್ಶಿ ರಾಜು ಬಳ್ಳೊಳ್ಳಿ ತಿಳಿಸಿದರು.

ಪಟ್ಟಣದ ಹೊಸಮಠದಲ್ಲಿ ಮಂಗಳವಾರ ಸಂಜೆ ನಡೆದ ಸಂಘದ ಪದಾಧಿಕಾರಿಗಳು, ಸಮಾಜದ ಮುಖಂಡರ ಪೂರ್ವಭಾವಿ ಸಭೆ ನಂತರ ಮಾತನಾಡಿದ ಅವರು, ಬಣಜಿಗ ಸಮಾಜವನ್ನು ಬಲಿಷ್ಠಗೊಳಿಸಲು ತೀರ್ಮಾನಿಸಿರುವ ಮೊದಲ ಘಟ್ಟವಾಗಿ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ. ಮುಂದೆ ಹಲವು ಸಮಾಜೋಪಯೋಗಿ ಚಟುವಟಿಕೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ಈ ವೇಳೆ ಸಮಾಜ ಸಂಘಟನೆ ಮತ್ತು ಪೂರ್ವ ತಯಾರಿ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಪ್ರಮುಖರಾದ ಪ್ರಭುರಾಜ ಕಲಬುರ್ಗಿ, ರುದ್ರೇಶ ಕಿತ್ತೂರ, ಸಂತೋಷ ನಾಯನೆಗಲಿ, ಶಿವು ಹುರಕಡ್ಲಿ, ಮುರುಗೇಶ ಹೊಕ್ರಾಣಿ, ಅಶೋಕ ಚಿನಿವಾರ, ಜಗದೀಶ ಲಕ್ಷಟ್ಟಿ, ಸಂತೋಷ ನಾವದಗಿ, ಶಂಕರ ಕಡಿ, ಸುಚಿತ್ ಚಳಗೇರಿ, ಚನ್ನಬಸ್ಸು ಅಂಗಡಿ, ವಿನಾಯಕ ಸಂಗಮದ, ಮುರಿಗೆಪ್ಪ ಮೋಟಗಿ, ಮುತ್ತಣ್ಣ ಕಡಿ, ಲೋಹಿತ್ ನಾಲತವಾಡ, ಜಗದೀಶ ಕಂಠಿ ಸೇರಿ ಹಲವರು ಇದ್ದರು.ಪ್ರತಿಭಾ ಪುರಸ್ಕಾರ: 2022-23, 2023-24 ಮತ್ತು 2024-25ರ ಎಸ್ಸೆಸ್ಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ಬಣಜಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಿನ್ನಲೆ ಹೆಸರು ನೀಡಲಿರುವವರು ಸೆ.15 ರೊಳಗಾಗಿ ಸಮಾಜದ ಪ್ರಮುಖರಾದ ಎಂ.ಜಿ.ಹೊಕ್ರಾಣಿ (ಮೋ:9449578696), ಲೋಹಿತ್ ನಾಲತವಾಡ (7760171700), ಚನ್ನಬಸವರಾಜ ಅಂಗಡಿ(6360736880) ಜಗದೀಶ ಲಕ್ಷಟ್ಟಿ (9060107077) ಅಥವಾ ಶಿವರಾಜ ಹುರಕಡ್ಲಿ(9886985835) ಸಂಪರ್ಕಿಸಿ ಹೆಸರು ನೋಂದಾಯಿಸುವಂತೆ ತಿಳಿಸಿದರು.ನಿವೃತ್ತರಿಗೆ ಸನ್ಮಾನ: 2022-23, 2023-24 ಮತ್ತು 2024-25ರಲ್ಲಿ ಸೇವಾ ನಿವೃತ್ತಿ ಹೊಂದಿರುವ ಸಮಾಜದ ನೌಕರರು ತಮ್ಮ ಹೆಸರುಗಳನ್ನು ಹಿರಿಯರಾದ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ (9481081537), ಸುರೇಶ ಮಾಟಲದಿನ್ನಿ(8660813736), ಬಿ.ವಿ.ಕೋರಿ (9945779630) ಅಥವಾ ಸಂಗಣ್ಣ ನಾಶಿ(9448541146) ಇವರಲ್ಲಿ ಹೆಸರು ನೋಂದಾಯಿಸುವಂತೆ ಮನವಿ ಮಾಡಿದರು.24ಕ್ಕೆ ಸಾಮಾನ್ಯ ಸಭೆ: ಆ.24ರಂದು ಬೆಳಿಗ್ಗೆ 10 ಗಂಟೆಗೆ ಮುದ್ದೇಬಿಹಾಳದ ಕಿಲ್ಲಾದಲ್ಲಿನ ಹೊಸಮಠದಲ್ಲಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಾಮಾನ್ಯ ಸಭೆಯನ್ನು ಕರೆಯಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡುವಂತೆ ಕಾರ್ಯದರ್ಶಿ ರಾಜು ಬಳ್ಳೊಳ್ಳಿ ಮನವಿ ಮಾಡಿದ್ದಾರೆ.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ