ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಹಳೇಬೀಡು ಹೋಬಳಿಯ ಐದಳ್ಳ ಕಾವಲು ಸರ್ಕಾರಿ ಭೂಮಿಯಲ್ಲಿ ಕೃಷಿ ಚಟವಟಿಕೆ ನಡೆಸುವ ರೈತರನ್ನು ಅರಣ್ಯ ಇಲಾಖೆ ಒಕ್ಕಲ್ಲೆಬ್ಬಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದು ರೈತರ ಭೂಮಿ ಉಳಿಸಿಕೊಡದಿದ್ದರೆ ಹಾಸನ ಮತ್ತು ಚಿಕ್ಕಮಗಳೂರು ರಸ್ತೆ ತಡೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದವರು ಎಚ್ಚರಿಕೆ ನೀಡಿದ್ದಾರೆ. ಐದಳ್ಳ ಕಾವಲಿನಲ್ಲಿ ಈಗಾಗಲೇ 870 ಕ್ಕೂ ಅಧಿಕ ರೈತರು ಸರ್ವೆ ನಂ. 1ರ 2555ರಲ್ಲಿ ಭೂಮಿ ಹಂಚಿಕೆ ಮಾಡಿಕೊಂಡು ಉಳುಮೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಐದಳ್ಳ ಕಾವಲ್ ಸರ್ವೆ ನಂ. 1 ಸರ್ಕಾರಿ ಭೂಮಿ ಎಂದು ಪಹಣೆಯಲ್ಲಿ ಬರುತ್ತಿದೆ ಎಂದು ಅರಣ್ಯ ಇಲಾಖೆ ಪ್ರತಿನಿತ್ಯ ಭೂಮಿಗೆ ಬಂದು ತೊಂದರೆ ನೀಡುತ್ತಿದ್ದಾರೆ. ಸೋಮವಾರ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ಲಾರಿಯಲ್ಲಿ ಜೆಸಿಬಿ ಯಂತ್ರ ತಂಬಿಕೊಂಡು ಬಂದು ಕಾಲುವೆ ತೆಗೆಸುವ ಸಂದರ್ಭದಲ್ಲಿ ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಜೆಸಿಬಿಯನ್ನು ವಾಪಸು ಕಳಿಸಿದ್ದು ಸ್ಥಳದಲ್ಲಿ ರೈತರು ಮೊಕ್ಕಾಂ ಹೂಡಿದ್ದಾರೆ.ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನಕುಮಾರ್, ಹಳೇಬೀಡು ಹೋಬಳಿ ಐದಳ್ಳ ಕಾವಲ್ 1 ಸರ್ವೆ ನಂ. 1ರಲ್ಲಿನ 2555 ಎಕ್ಕರೆ ಭೂಮಿಯನ್ನು ಈಗಾಗಲೇ 870ಕ್ಕೂ ಅಧಿಕ ಬಡ ರೈತರು ಸಾಗುವಳಿ ನಡೆಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ರೈತರ ಮೇಲೆ ಗದಾ ಪ್ರಹಾರ ನಡೆಸಿದ ಅರಣ್ಯ ಇಲಾಖೆ ಈ ಭೂಮಿ ನಮ್ಮದು ಎಂದು ಹೇಳಿಕೊಂಡು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ. ಈಗಾಗಲೇ ಐದಳ್ಳ ಕಾವಲ್ ಸರ್ವೆ ನಂ. 1ರ 2555 ಎಕರೆ ಸರ್ಕಾರಿ ಭೂಮಿ ಎಂದು ಪಹಣಿಯಲ್ಲಿ ಬರುತ್ತಿದೆ ಆದರೆ ಅರಣ್ಯ ಇಲಾಖೆ ತಮ್ಮದಲ್ಲದ ಭೂಮಿಗೆ ಏಕೆ ಆಸೆ ಪಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು.ಕೃಷಿಕರ ಭೂಮಿ, ಅರಣ್ಯ ಇಲಾಖೆ ಏಕಾಏಕಿ ನಮ್ಮ ಭೂಮಿ ಎಂದು ಬಡ ಕೃಷಿಕರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿರವ ಕಾರಣದಿಂದ ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ನೀಡಲಾಗಿದೆ. ಇದೇ ಭೂಮಿಗಾಗಿ ನೂರಾರು ರೈತರು ಬೇಲೂರಿಗೆ ಸತತ ಮೂರು ಬಾರಿ ಪಾದಯಾತ್ರೆ ಮಾಡಿದ್ದಾರೆ. ನಮ್ಮ ಹೋರಾಟಕ್ಕೆ ಪ್ರೊ. ನಂಜುಂಡಸ್ವಾಮಿಯವರೇ ಶಕ್ತಿ, ಈ ಕಾವಲಿನ ಭೂಮಿಯಲ್ಲಿ ಪ್ರೊ. ನಂಜುಂಡಸ್ವಾಮಿ ಪುತ್ಥಳಿ ಸ್ಥಾಪನೆಯೊಂದಿಗೆ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭ ರೈತ ಮುಖಂಡರಾದ ನಿಂಗಪ್ಪ, ಅಯ್ಯಬಾ ಸಾಬ್, ವಿಜಾಜ್ ಪಾಷ, ಮಹಮ್ಮದ್ ದಸ್ತಗಿರಿ, ಭೋಜರಾಜ್, ಹನುಮಂತ ಮುಂತಾದವರು ಭಾಗವಹಿಸಿದ್ದರು.ಐದಳ್ಳ ಕಾವಲು ಭೂಮಿ ಬಿಡಲ್ಲ ಎಂದು ರೈತರ ಪ್ರತಿಭಟನೆ
ಹಳೇಬೀಡು ಹೋಬಳಿಯ ಐದಳ್ಳ ಕಾವಲು ಸರ್ಕಾರಿ ಭೂಮಿಯಲ್ಲಿ ಕೃಷಿ ಚಟವಟಿಕೆ ನಡೆಸುವ ರೈತರನ್ನು ಅರಣ್ಯ ಇಲಾಖೆ ಒಕ್ಕಲ್ಲೆಬ್ಬಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದು ರೈತರ ಭೂಮಿ ಉಳಿಸಿಕೊಡದಿದ್ದರೆ ಹಾಸನ ಮತ್ತು ಚಿಕ್ಕಮಗಳೂರು ರಸ್ತೆ ತಡೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದವರು ಎಚ್ಚರಿಕೆ ನೀಡಿದ್ದಾರೆ. ಅರಣ್ಯ ಇಲಾಖೆ ಈ ಭೂಮಿ ನಮ್ಮದು ಎಂದು ಹೇಳಿಕೊಂಡು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ. ಈಗಾಗಲೇ ಐದಳ್ಳ ಕಾವಲ್ ಸರ್ವೆ ನಂ. 1ರ 2555 ಎಕರೆ ಸರ್ಕಾರಿ ಭೂಮಿ ಎಂದು ಪಹಣಿಯಲ್ಲಿ ಬರುತ್ತಿದೆ ಆದರೆ ಅರಣ್ಯ ಇಲಾಖೆ ತಮ್ಮದಲ್ಲದ ಭೂಮಿಗೆ ಏಕೆ ಆಸೆ ಪಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.