ಬಣಜಿಗರು ಸಂಸ್ಕಾರವಂತ ವ್ಯವಹಾರ ಕುಶಲರು: ಶ್ರೀ ಆನಂದ ದೇವರು

KannadaprabhaNewsNetwork |  
Published : May 05, 2025, 12:52 AM IST
ಬನಹಟ್ಟಿಯಲ್ಲಿ ನೂತನವಾಗಿ ಆರಂಭಗೊಂಡ ಬಣಜಿಗ ಪತ್ತಿನ ಸಹಕಾರಿ ಸಂಘವನ್ನು ಓಲೆಮಠದ ಶ್ರೀಆನಂದ ದೇವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

ಎಲ್ಲ ಬಲ್ಲಿದ ಬಣಜಿಗ ಎಂಬ ಮಾತಿನಂತೆ ಸಂಸ್ಕಾರವಂತ ವ್ಯವಹಾರ ಕುಶಲತೆಗೆ ಬಣಜಿಗರು ಪ್ರಸಿದ್ಧರು. ಜಿಲ್ಲೆಯಲ್ಲಿ ಮೊದಲ ಬಣಜಿಗ ಬ್ಯಾಂಕ್ ಆರ್ಥಿಕ ರಂಗದಲ್ಲಿ ಜನರ ಸೇವೆಗೆ ಬಂದಿರುವುದು ಬಹಳ ಖುಷಿಯ ವಿಚಾರವಾಗಿದೆ ಎಂದು ಜಮಖಂಡಿ ಓಲೆಮಠದ ಶ್ರೀ ಆನಂದ ದೇವರು ನುಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಎಲ್ಲ ಬಲ್ಲಿದ ಬಣಜಿಗ ಎಂಬ ಮಾತಿನಂತೆ ಸಂಸ್ಕಾರವಂತ ವ್ಯವಹಾರ ಕುಶಲತೆಗೆ ಬಣಜಿಗರು ಪ್ರಸಿದ್ಧರು. ಜಿಲ್ಲೆಯಲ್ಲಿ ಮೊದಲ ಬಣಜಿಗ ಬ್ಯಾಂಕ್ ಆರ್ಥಿಕ ರಂಗದಲ್ಲಿ ಜನರ ಸೇವೆಗೆ ಬಂದಿರುವುದು ಬಹಳ ಖುಷಿಯ ವಿಚಾರವಾಗಿದೆ ಎಂದು ಜಮಖಂಡಿ ಓಲೆಮಠದ ಶ್ರೀಆನಂದ ದೇವರು ನುಡಿದರು.

ಭಾನುವಾರ ಬಸವೇಶ್ವರ ಸಮುದಾಯ ಭವನದಲ್ಲಿ ನೂತನವಾಗಿ ಆರಂಭಗೊಂಡ ಬಣಜಿಗ ಪತ್ತಿನ ಸಹಕಾರಿ ಸಂಘವನ್ನು ಸಸಿಗೆ ನೀರುಣಿಸಿ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಈಶ್ವರ ಬಿದರಿ, ಸೋಮಶೇಖರ ಕೊಟ್ರಶೆಟ್ಟಿ ನೇತೃತ್ವದಲ್ಲಿ ಸಹಕಾರಿ ಸಂಘ ಆರಂಭಗೊಂಡಿದೆ. ಸಂಘವು ಸಹಕಾರಿ ಕ್ಷೇತ್ರದಲ್ಲಿ ಪ್ರಗತಿಯುತವಾಗಿ ಬೆಳೆಯಲಿ. ಇನ್ನೂ ಹಲವೆಡೆ ಹತ್ತಾರು ಶಾಖೆಗಳು ಆರಂಭಗೊಳ್ಳಲೆಂದು ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಡಾ.ತಾತಾಸಾಹೇಬ ಬಾಂಗಿ ವ್ಯವಹಾರ ಕುಶಲತೆ ಜೊತೆಗೆ ಇತರೆ ಸಮುದಾಯಗಳೊಡನೆ ಪರಸ್ಪರ ಸುಮಧುರ ಬಾಂಧವ್ಯ ಹೊಂದಿರುವ ನಮ್ಮ ಜನಾಂಗ ಆರ್ಥಿಕ ಕ್ಷೇತ್ರದಲ್ಲಿ ಸೇವೆ ಮಾಡಲು ಪಾದಾರ್ಪಣೆಗೊಂಡಿರುವುದು ಸ್ತುತ್ಯಾರ್ಹ. ಇನ್ನೂ ಹತ್ತಾರು ಶಾಖೆಗಳು ಈ ಸಂಸ್ಥೆಯಿಂದ ಮೂಡಿ ಬರಲೆಂದರು.

ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನ ಗಡೆನ್ನವರ ಮಾತನಾಡಿ, ಅಧ್ಯಕ್ಷರು, ನಿರ್ದೇಶಕರು ಯಾವುದೇ ಫಲಾಪೇಕ್ಷೆ ಇಲ್ಲದೇ ಬ್ಯಾಂಕಿನ ಉನ್ನತಿಗೆ ಶ್ರಮಿಸಬೇಕೆಂದರು. ಕೃಷಿ, ಶೃತಿ ಪ್ರಾರ್ಥಿಸಿದರು. ಶಿವಲಿಂಗ ಬಾಗಲಕೋಟ ಸ್ವಾಗತಿಸಿದರು. ಕಾರ್ಯದರ್ಶಿ ಈರಣ್ಣಾ ಜಿಗಜಿನ್ನಿ ಸಂದೇಶ ವಾಚಿಸಿದರು. ವೇದಿಕೆಯಲ್ಲಿ ಬಾಗಲಕೋಟೆ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಶರಣಪ್ಪ ಗುಳೇದ, ಸಹಾಯಕ ನಿಬಂಧಕ ರಾಮನಗೌಡ ಪಾಟೀಲ, ಗುರುಸಿದ್ದಪ್ಪ ಚನಾಳ, ನ್ಯಾಯಾಧೀಶ ಜೆ.ಆರ್.ಶೆಟ್ಟರ್ ಮುಖ್ಯ ಅತಿಥಿಗಳಾಗಿದ್ದರು. ಬಸವಶ್ರೀ ಪ್ರಶಸ್ತಿ ಪುರಸ್ಕೃತ ಸೋಮಶೇಖರ ಕೊಟ್ರಶೆಟ್ಟಿ, ರಾಜ್ಯ ಕಾರ್ಯದರ್ಶಿಯಾದ ಬಸವರಾಜ ಹನಗಂಡಿ ಅವರನ್ನು ಸನ್ಮಾನಿಸಲಾಯಿತು.

ಸಂಜಯ ತೆಗ್ಗಿ, ಗಿರೀಶ ಮುತ್ತೂರ, ಮಲ್ಲಿಕಾರ್ಜುನ ಹುಲಗಬಾಳಿ, ಉಮೇಶ ಹನಗಂಡಿ, ಮಹಾಶಾಂತ ಶೆಟ್ಟಿ, ಎಲ್ಲ ನಿರ್ದೇಶಕ ಮಂಡಳಿ, ಸಲಹಾ ಸಮಿತಿ, ರಬಕವಿ-ಬನಹಟ್ಟಿ, ಕುಲಹಳ್ಳಿ, ಹಿಪ್ಪರಗಿ, ನಾವಲಗಿ, ಆಸಂಗಿ, ಮಹಾಲಿಂಗಪುರ ಸಮಾಜದ ಸದಸ್ಯರು, ಮಹಿಳಾ ಮಂಡಲದ ಮಹಿಳೆಯರು ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಶೆಟ್ಟಿ ನಿರೂಪಿಸಿದರು. ಬಸವರಾಜ ದುಂಬಾಳಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!