- ಜಗಳೂರಲ್ಲಿ ಬಿಜೆಪಿ ಮಾಜಿ ಶಾಸಕ ಎಚ್.ಪಿ.ರಾಜೇಶ್‌ರಿಂದ ಸನ್ಮಾನ ಸ್ವೀಕಾರ
ಕನ್ನಡಪ್ರಭ ವಾರ್ತೆ ಜಗಳೂರು
ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಪಕ್ಷ ಸೂಚಿಸಿದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಎಸ್. ಸೋಮಣ್ಣ ಹೇಳಿದರು.ಜಗಳೂರು ಗಡಿ ಭಾಗವಾದ ಉಜ್ಜಯಿನಿ ಶ್ರೀಮರಳು ಸಿದ್ದೇಶ್ವರ ಸ್ವಾಮಿ ಶಿಖರದ ತೈಲಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮುನ್ನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರಿಂದ ಸನ್ಮಾನ ಸ್ವೀಕರಿಸಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಹಿಂದೆ ಎಂ.ಎಲ್.ಸಿ. ಆಗಿದ್ದಾಗ, ರಾಜೇಶ್ ಶಾಸಕರಿದ್ದರು. ರಾಜಕೀಯ ಜೀವನದಲ್ಲಿ ಸೋಲು- ಗೆಲುವು ಸಾಮಾನ್ಯ. ಆದರೆ ನಮ್ಮನ್ನು ನಂಬಿದ ಮತದಾರ ಕಾರ್ಯಕರ್ತರನ್ನು ಎಂದಿಗೂ ಮರೆಯಬಾರದು. ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿರುವ ನೀವು ಪಕ್ಷದ ಅಧ್ಯಕ್ಷರು ಸೂಚಿಸುವ ಎಲ್ಲ ಕಾರ್ಯ ಚಟುವಟಿಯಲ್ಲಿ ತೊಡಗಿ, ಜನರ ಮಧ್ಯೆ ಇದ್ದರೆ ಖಂಡಿತ ನಿಮ್ಮ ಸೇವೆಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯತಿ ಅಧ್ಯಕ್ಷ ಕೆ.ಎಸ್. ನವೀನ್ ಕುಮಾರ್, ಬಿಜೆಪಿ ಮುಖಂಡರಾದ ಬಿ.ಲೋಕೇಶ್, ಎ.ಎಂ. ಮರುಳಾರಾಧ್ಯ, ಓಬಳೇಶ್, ಪಿ.ರೇವಣ್ಣ, ನಂಜುಡಸ್ವಾಮಿ, ಹೊನ್ನೂರು ಸ್ವಾಮಿ, ಮಾಜಿ ತಾಪಂ ಸದಸ್ಯ ಜಗಳೂರಯ್ಯ ಇತರರು ಇದ್ದರು.
-04ಜೆ.ಜಿ.ಎಲ್.1: