ಕುರುಗೋಡು: ಒಳ ಜಗಳ ಮರೆತು ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಬಣಜಿಗ ಸಮಾಜವು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ. ಮರಿರಾಜುಗೌಡ ಅಭಿಪ್ರಾಯಪಟ್ಟರು.
ಬಸವತತ್ವ ಮತ್ತು ಲಿಂಗಾಯತ ಧರ್ಮದ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಬಣಜಿಗ ಸಮಾಜ ನಾಡಿನಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಸಮಾಜದ ದ್ಯೇಯಗಳನ್ನು ಉಳಿಸಿ ಬೆಳೆಸಲು ಸಮಾಜದ ಯುವಕರು ಮುಂದಾಗಬೇಕು ಎಂದರು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದಪ್ಪ ದಂಡಿನ್ ಮಾತನಾಡಿ, ವ್ಯಾಪಾರ ವಹಿವಾಟು ನಡೆಸುತ್ತ ಸಮಾಜದ ಎಲ್ಲ ವರ್ಗದವರೊಂದಿಗೆ ಸೌಹಾರ್ದಯುತವಾಗಿ ಜೀವಿಸುವ ಬಣಜಿಗ ಸಮಾಜವನ್ನು ಸಾಮಾನ್ಯ ವರ್ಗಕ್ಕೆ ಸೇರಿಸಿದ್ದಾರೆ. ಇದರಿಂದ ಮಕ್ಕಳ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಹಿನ್ನಡೆಯಾಗುತ್ತಿದೆ. ಪ್ರವರ್ಗ೨ಎ ನೀಡುವಂತೆ ಒತ್ತಾಯಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಟ ರೂಪಿಸುವ ಅಗತ್ಯವಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿದರು. ೨ನೇ ಶತಮಾನದಲ್ಲಿನ ಬಸವಣ್ಣನವರ ತತ್ವದಿಂದ ಪ್ರೇರಿತರಾದ ಬಣಜಿಗರು ಲಿಂಗವಂತರಾಗಿ ಬದಲಾಗಿದ್ದೇವೆ ಎಂದು ವ್ಯಾಪಾರ ವೃತ್ತಿಯಲ್ಲಿ ಗುರುತಿಸಿಕೊಂಡಿರುವ ಬಣಜಿಗರು. ಅನ್ಯ ಜಾತಿ ಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಬಣಜಿಗ ಸಮಾಜದ ಸಮ್ಮುಖದಲ್ಲಿ ನೂತನ ತಾಲೂಕು ಅಧ್ಯಕ್ಷರದ ಎಚ್.ಹೇಮಾದ್ರಿ, ಆಯ್ಕೆ ಮಾಡಲಾಯಿತು. ಎನ್.ವೀರೇಂದ್ರ ಗೌಡ ಕಾರ್ಯಕ್ರಮ ಕುರಿತು ಪ್ರಸ್ತಾವಿಕ ಮಾತನಾಡಿದರು. ಎನ್.ಮರೇಗೌಡ, ಜೆ. ಸೋಮಶೇಖರ ಗೌಡ, ಎಚ್.ವಾಗೀಶ್, ಅಂಗಡಿ ಶಂಕ್ರಪ್ಪ, ಎಚ್.ಹೇಮಾದ್ರಿ, ಕೋರಿ ವಿರೂಪಾಕ್ಷಪ್ಪ, ರಾಜಣ್ಣ, ಗುತ್ತಿಗನೂರು ಚಂದ್ರೇಗೌಡ, ಗಂಗಾವತಿ ವೀರೇಶ್ ಮತ್ತು ಶಾಪುರ ದೊಡ್ಡ ರಂಗಪ್ಪ, ಜಗದೀಶ್, ಶಿಕ್ಷಕರಾದ ಗವಿಯಪ್ಪ ಇದ್ದರು.