ಜನಪರ ಸಾಹಿತ್ಯ ಪರಿಷತ್ತಿನಿಂದ ಸ್ವಾತಂತ್ರ್ಯ ದಿನಾಚರಣೆ

KannadaprabhaNewsNetwork |  
Published : Aug 16, 2025, 02:01 AM IST
21 | Kannada Prabha

ಸಾರಾಂಶ

ಕೊಳ್ಳೇಗಾಲ ಮಾಸಸ ಶಿಕ್ಷಣ ಸಂಸ್ಥೆಂಯ ಕಾರ್ಯದರ್ಶಿ ಡಾ.ಎಸ್‌. ದತ್ತೇಶ್‌ ಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರುಬೆಂಗಳೂರಿನ ಜನಪರ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ, ಕೊಳ್ಳೇಗಾಲ ಮಾನಸ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿಜಯನಗರದ ಒಂದನೇ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಏರ್ಪಡಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಾಧಕರನ್ನು ಅಭಿನಂದಿಸಲಾಯಿತು.ಖ್ಯಾತ ಆಯುರ್ವೇದ ತಜ್ಢ ಡಾ.ಅಬ್ದುಲ್‌ ಖಾದರ್‌, ಮಂಡ್ಯದಲ್ಲಿ ರೈತರಿಗೆ ಪಾಠಶಾಲೆ ನಡೆಸುವ ಸತ್ಯಮೂರ್ತಿ, ನಾಗಮಂಗಲದ ಸಾವಿತ್ರಮ್ಮ, ಬೆಂಗಳೂರಿನ ಸಂಧ್ಯಾರಾಮ್‌, ಮಹಾರಾಣಿ ವಾಣಿಜ್ಯ ಕಾಲೇಜಿನ ಡಾ.ಗೋವಿಂದೇಗೌಡ ಹಾಗೂ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ನಾಗೇಂದ್ರ ಅವರು ಸನ್ಮಾನಿತರು,ಇದಲ್ಲದೇ ಕೊಳ್ಳೇಗಾಲ ಮಾಸಸ ಶಿಕ್ಷಣ ಸಂಸ್ಥೆಂಯ ಕಾರ್ಯದರ್ಶಿ ಡಾ.ಎಸ್‌. ದತ್ತೇಶ್‌ ಕುಮಾರ್‌ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ದತ್ತೇಶ್‌ಅವರು ಮೂರು ದಶಕಗಳ ಹಿಂದೆ ಮೂವತ್ತು ವಿದ್ಯಾರ್ಥಿಗಳೊಂದಿಗೆ ಆರಂಭಿಸಿದ ಶಿಕ್ಷಣ ಸಂಸ್ಥೆಯಲ್ಲಿ ಇವತ್ತು ಮೂರುವರೆ ಸಾವಿರ ವಿದ್ಯಾರ್ಥಿಗಳಿದ್ದಾರೆ. ಎಲ್‌ಕೆಜಿಯಿಂದ ಹಿಡಿದು ಬಿ.ಇಡಿವರೆಗೆ ಗುಣಾತ್ಮಕ ಶಿಕ್ಷಣ ನೀಡಿ, ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಎಂದು ಮಾತನಾಡಿದ ಎಲ್ಲ ಗಣ್ಯರು ಶ್ಲಾಘಿಸಿದರು.ಕಾರ್ಯಕ್ರಮವನ್ನು ಶಾಸಕ ಟಿ.ಎಸ್‌. ಶ್ರೀವತ್ಸ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ಅಧ್ಯಕ್ಷತೆ ವಹಿಸಿದ್ದರು ಜನಪರ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಎಂ. ಮಹೇಶ ಚಿಕ್ಕಲ್ಲೂರು, ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್‌. ಶಿವರಾಜಪ್ಪ, ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್‌, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ. ಸೋಮೇಗೌಡ, ವಿಶ್ರಾಂತ ಪ್ರಾಧ್ಯಾಪಕ ಡಾ.ಆರ್‌. ನಾಗಭೂಷಣ್‌ಮಾತನಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ಇದ್ದರು.ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ ಸ್ವಾಗತಿಸಿದರು, ಲೋಲಾಕ್ಷಿ ನಿರೂಪಿಸಿದರು. ಡಾ.ವಿ. ಯೋಗೀಂದ್ರ ವಂದಿಸಿದರು. ಕೈಲಾಸಮೂರ್ತಿ ಪ್ರಾರ್ಥಿಸಿದರು. ಕೋಟ್‌ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಮೈಸೂರಿನಲ್ಲಿಯೇ ಮಾದಕ ವಸ್ತುಗಳ ಕಾರ್ಖಾನೆ ಪತ್ತೆಯಾಗಿದೆ ಎಂಬುದು ಆತಂಕ ಮೂಡಿಸುತ್ತದೆ. ಹೀಗಾಗಿಜೈಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಆಗಬೇಕು.- ಟಿ.ಎಸ್. ಶ್ರೀವತ್ಸ, ಶಾಸಕರು, ಕೃಷ್ಣರಾಜ ಕ್ಷೇತ್ರ---ಪ್ರಸ್ತುತ ಎಲ್ಲಿ ನೋಡಿದರೂ ಸಂಘರ್ಷದ ವಾತಾವರಣ, ಧರ್ಮ ಧರ್ಮಗಳ ನಡುವೆ ಸಂಘರ್ಷದ ಬದಲು ಧರ್ಮ ಸಮನ್ವಯ ಆಗಬೇಕು.- ಪ್ರೊ.ಎಸ್‌. ಶಿವರಾಜಪ್ಪ, ವಿಶೇಷಾಧಿಕಾರಿ, ಶ್ರೀ ನಟರಾಜ ಪ್ರತಿಷ್ಠಾನ---ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ಸವಾಲಾಗಿದೆ.-ಡಾ.ಆರ್. ನಾಗಭೂಷಣ್‌, ವಿಶ್ರಾಂತ ಪ್ರಾಧ್ಯಾಪಕರು---ಮಕ್ಕಳಲ್ಲಿ ದೇಶಪ್ರೇಮ, ರಾಜ್ಯಪ್ರೇಮ ಮತ್ತು ಭಾಷಾ ಪ್ರೇಮ ಬೆಳೆಸಬೇಕು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ನಡುವೆ ಇದ್ದ ಬಾಂಧವ್ಯ ಆದರ್ಶವಾಗಬೇಕು- ಕೆ.ಬಿ. ಸೋಮೇಗೌಡ, ಅಧ್ಯಕ್ಷರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ---ಡಾ.ಮಹೇಶ್‌ ಚಿಕ್ಕಲ್ಲೂರು ಅವರು ಜನಪರ ಸಾಹಿತ್ಯ ಪರಿಷತ್‌ಮೂಲಕ ಕನ್ನಡ ಕಟ್ಟುವ ಹಾಗೂ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.-ಎಂ. ಚಂದ್ರಶೇಖರ್‌, ಅಧ್ಯಕ್ಷರು, ಕನ್ನಡ ಕಲಾಕೂಟ---ಜನಪರ ಪರಿಷತ್ತು ನಿಜವಾಗಿಯೂ ಜನಪರವಾಗಿ ಕೆಲಸ ಮಾಡುತ್ತಿದೆ.- ಡಾ.ವೈ.ಡಿ. ರಾಜಣ್ಣ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪ--ಪ್ರತಿ ವರ್ಷ ಡಾ.ಎಸ್‌. ದತ್ತೇಶ್‌ಕುಮಾರ್‌ ಅವರ ಹೆಸರಿನಲ್ಲಿ ಮೈಸೂರಿನಲ್ಲಿ ಕಾರ್ಯಕ್ರಮ ಸಂಘಟಿಸುವ ಮೂಲಕ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ.-ಡಾ.ಎಂ. ಮಹೇಶ್‌ ಚಿಕ್ಕಲ್ಲೂರು, ಅಧ್ಯಕ್ಷರು, ಜನಪರ ಸಾಹಿತ್ಯ ಪರಿಷತ್ತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ