ಆಂಜನೇಯಪುರದಲ್ಲಿ ಶಾಲೆಯಲ್ಲಿ ಬಂಜಾರ ಮತಗಟ್ಟೆ ಸ್ಥಾಪನೆ

KannadaprabhaNewsNetwork | Published : Apr 18, 2024 2:16 AM

ಸಾರಾಂಶ

ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂಜನೇಯಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆ ಸಂಖ್ಯೆ 92ರಲ್ಲಿ ಸಾಂಪ್ರದಾಯಿಕ "ಬಂಜಾರ ಮತಗಟ್ಟೆ " ಸ್ಥಾಪನೆ ಮಾಡಲಾಗಿದೆ.

- ಮತದಾನ ಜಾಗೃತಿ ಅಭಿಯಾನ: ಬೈಕ್ ರ್ಯಾಲಿಗೆ ಚಾಲನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಕಮ್ಮಾರಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂಜನೇಯಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆ ಸಂಖ್ಯೆ 92ರಲ್ಲಿ ಸಾಂಪ್ರದಾಯಿಕ "ಬಂಜಾರ ಮತಗಟ್ಟೆ " ಸ್ಥಾಪನೆ ಮಾಡಲಾಗಿದೆ.

ಈ ಭಾಗದಲ್ಲಿನ ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು. 100ಕ್ಕೆ 100ರಷ್ಟು ಮತದಾನ ಆಗುವಂತೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಹಾಯಕ ಚುನಾವಣಾಧಿಕಾರಿ ವಿ. ಅಭಿಷೇಕ್ ಹೇಳಿದರು.

ಮಂಗಳವಾರ ಮತದಾನ ಜಾಗೃತಿ ಅಭಿಯಾನದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬಂಜಾರ ಸಮುದಾಯದ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಗ್ರಾಮದ ಮುಖ್ಯ ದ್ವಾರದಿಂದ ಕನ್ನಯ್ಯ ಕೃಷ್ಣ ಎಂಬ ಹಾಡಿಗೆ ನೃತ್ಯದ ಮೂಲಕ ಗಣ್ಯರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಅನಂತರ ಅವರಿಗೆ ಎಆರ್‌ಒ ಅವರು ಮತದಾನದ ಮಹತ್ವ ಕುರಿತು ಮಾತನಾಡಿದರು.

ಈ ಸಂದರ್ಭ ತಹಸೀಲ್ದಾರ್ ಪುರಂದರ ಹೆಗಡೆ, ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ತಾಪಂ ಇಒ ಡಿ.ಎಸ್. ಸುಮಾ, ಸಹಾಯಕ ನಿರ್ದೇಶಕ ಎಂ.ಜಿ. ರಾಘವೇಂದ್ರ ಭಾಗವಹಿಸಿದ್ದರು.

ಅದೇ ರೀತಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ್ಯಾಲಿಗೆ ತಾಪಂ ಇಒ ಡಿ.ಎಸ್. ಸುಮಾ ಚಾಲನೆ ನೀಡಿದರು. ಬೈಕ್ ರ್ಯಾಲಿಯು ಬೇಲಿಮಲ್ಲೂರು, ಅರಕೆರೆ, ಮಾಸಡಿ, ಬೆನಕನಹಳ್ಳಿ, ಬೀರಗೊಂಡನಹಳ್ಳಿ ಮತ್ತು ಕಮ್ಮಾರಗಟ್ಟೆ ಗ್ರಾ.ಪಂ.ವರೆಗೆ ನಡೆಯಿತು.

ಈ ಸಂದರ್ಭ ಮಾತನಾಡಿದ ಇಒ ಅವರು, ಮೇ 7ರಂದು ನಡೆಯುವ ಮತದಾನದಲ್ಲಿ ಶೇ.100 ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

- - -

-16ಎಚ್.ಎಲ್,ಐ3:

ಹೊನ್ನಾಳಿ ತಾಲೂಕಿನ ಆಂಜನೇಯಪುರ ಸರ್ಕಾರಿ ಶಾಲೆಯ ಬಂಜಾರ ಮತಗಟ್ಟೆಯಲ್ಲಿ ಸಹಾಯಕ ಚುನಾವಣಾಧಿಕಾರಿ ವಿ. ಅಭಿಷೇಕ್ ಮತದಾನದ ಕುರಿತು ಮಾತನಾಡಿದರು.

Share this article