ಬಸವಾದಿ ಶರಣರ ಕಾಯಕ ತತ್ವ ಪಾಲಿಸುವ ಬಂಜಾರಾ ಸಮಾಜ

KannadaprabhaNewsNetwork |  
Published : Sep 21, 2024, 01:49 AM IST
ಸಚಿವ ಎಂ. ಬಿ. ಪಾಟೀಲ ಅವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಎಲ್. ಟಿ.-1 ರಲ್ಲಿ ನಡೆದ ದುರ್ಗಾದೇವಿ ಜಾತ್ರೆಯಲ್ಲಿ ಪಾಲ್ಗೋಂಡು ದೇವಿಯ ದರ್ಶನ ಪಡೆದರು.   | Kannada Prabha

ಸಾರಾಂಶ

ಬಂಜಾರಾ ಸಮಾಜ ಬಸವಾದಿ ಶರಣರ ಕಾಯಕ ತತ್ವ ಪಾಲಿಸುವುದರ ಜತೆಗೆ ಅದರದೇ ಆದ ಸಂಸ್ಕೃತಿಯನ್ನೂ ಮುಂದುವರೆಸಿಕೊಂಡು ಬರುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಂಜಾರಾ ಸಮಾಜ ಬಸವಾದಿ ಶರಣರ ಕಾಯಕ ತತ್ವ ಪಾಲಿಸುವುದರ ಜತೆಗೆ ಅದರದೇ ಆದ ಸಂಸ್ಕೃತಿಯನ್ನೂ ಮುಂದುವರೆಸಿಕೊಂಡು ಬರುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಾಲೂಕಿನ ಜಾಲಗೇರಿ ಎಲ್.ಟಿ.1 ರಲ್ಲಿ ದುರ್ಗಾದೇವಿ ಜಾತ್ರೆಯಲ್ಲಿ ಮಾತನಾಡಿದ ಅವರು, ಬಂಜಾರಾ ಸಮಾಜ ಅದರದೇ ಆದ ವಿಭಿನ್ನ ಸಂಸ್ಕೃತಿ ಹೊಂದಿದ್ದು, ದುಡಿಮೆಯ ಕುರಿತು ಬಸವಾದಿ ಶರಣರು ಮತ್ತು ಅಣ್ಣ ಬಸವಣ್ಣನವರು ಹೇಳಿದಂತೆ ಕಾಯಕ ತತ್ವಕ್ಕೆ ಮಹತ್ವ ಕೊಡುತ್ತದೆ. ಶ್ರಮ ಜೀವಿಗಳಾಗಿರುವ ಈ ಸಮಾಜದ ಜನರು ಶ್ರಮವಹಿಸಿ ದುಡಿದು ತಂತಮ್ಮ ತಾಂಡಾಗಳಲ್ಲಿ ಅಷ್ಟೇ ಶ್ರದ್ಧಾ ಭಕ್ತಿಯಿಂದ ದೇವರ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕಾಯಕಕ್ಕೆ ನೀಡುವಷ್ಟೇ ಮಹತ್ವವನ್ನು ಸಂಸ್ಕೃತಿಗೂ ನೀಡುತ್ತಿದೆ. ಬಹಳಷ್ಟು ಸಮುದಾಯಗಳು ತಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವ ಇಂದಿನ ದಿನಗಳಲ್ಲಿ ಬಂಜಾರಾ ಸಮುದಾಯದ ತಾಯಂದಿರು, ಸಹೋದರಿಯರು ಇವತ್ತಿಗೂ ತಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವುದು ಶ್ಲಾಘನೀಯ ಎಂದರು.2013-18ರಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ನಾನು ಪ್ರತಿ ತಾಂಡಾಗಳಿಗೆ ಕನಿಷ್ಠ ₹50 ಲಕ್ಷದಿಂದ ₹1 ಕೋಟಿಯವರೆಗೆ ದೇವಸ್ಥಾನ, ಸಮುದಾಯ ಭವನಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಅಲ್ಲದೇ, ವಿಜಯಪುರ ನಗರದಲ್ಲಿ ಸೇವಾಲಾಲ, ರಾಮರಾವ ಮಹಾರಾಜರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಅಲ್ಲದೇ, ಹಾಮುಲಾಲ ದೇವಸ್ಥಾಕ್ಕೆ ನಿವೇಷನ ಒದಗಿಸಿ ದೇವಸ್ಥಾನ ನಿರ್ಮಾಣಕ್ಕೆ ಹಾಗೂ ಅಥಣಿ ತಾಲೂಕಿನಲ್ಲಿರುವ ಮೂಲ ಗದ್ದುಗೆಯ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ನಮ್ಮ ಪ್ರಯತ್ನದ ಫಲವಾಗಿ ಈ ಬಾರಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ ಎಂದು ತಿಳಿಸಿದರು. ಪ್ರಕಾಶ ಮಹಾರಾಜರು, ಅರ್ಜುನ ರಾಠೋಡ, ರಾಜಶೇಖರ ಪವಾರ, ವಾಮನ ಚವ್ಹಾಣ, ಧನಸಿಂಗ್ ಚವ್ಹಾಣ, ತಾವರು ರಾಠೋಡ, ರಾಮು ಕಾರಬಾರಿ, ಅಮಸಿದ್ಧ ನಾಯಕ, ಗ್ರಾಮ ಪಂಚಾಯತಿ ಸದಸ್ಯರು, ಸೋಮು ಢಾವ, ಸೋಮು ಡಾವ ಮುಂತಾದವರು ಇದ್ದರು.ನಮ್ಮ ತಂದೆಯವರ ಕಾಲದಿಂದಲೂ ಈ ಸಮುದಾಯ ನಮಗೆ ಪ್ರೀತಿ ತೋರಿಸುತ್ತ ಬಂದಿದೆ. ನಮ್ಮ ಜೊತೆ ನೀವಿದ್ದೀರಿ. ನಿಮ್ಮ ಜೊತೆ ನಾವಿದ್ದೇವೆ. ಸಮಾಜದ ಕೆಲಸಗಳಿಗೆ ಈ ಹಿಂದೆಯೂ ಸ್ಪಂದಿಸಿದ್ದೇನೆ. ಇಂದು ಮತ್ತು ಮುಂದೆಯೂ ಸ್ಪಂದಿಸುತ್ತೇನೆ. ಈ ದೇವಸ್ಥಾನದ ಅಭಿವೃದ್ಧಿಗೂ ನೆರವು ನೀಡುತ್ತೇನೆ.

ಎಂ.ಬಿ.ಪಾಟೀಲ, ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ