ಸದಸ್ಯರ ಸಹಕಾರದಿಂದ ಬ್ಯಾಂಕ್‌ಗೆ ₹12.90 ಲಕ್ಷ ಲಾಭ: ಯೋಗೀಶ್

KannadaprabhaNewsNetwork |  
Published : Sep 09, 2025, 01:00 AM IST
ತರೀಕೆರೆ ತಾ.ಪ್ರಾ.ಸ.ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತ ಸರ್ವ ಸದಸ್ಯರ ಸಭೆ | Kannada Prabha

ಸಾರಾಂಶ

ತರೀಕೆರೆ, 2024-25ನೇ ಸಾಲಿನಲ್ಲಿ ನಮ್ಮ ಸದಸ್ಯರ ಸಹಕಾರದಿಂದ ಬ್ಯಾಂಕ್ ₹12.90 ಲಕ್ಷ ಲಾಭ ಗಳಿಸಲು ಸಾಧ್ಯವಾಯಿತು ಎಂದು ತರೀಕೆರೆ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಯೋಗೀಶ್ ಎ.ಎಂ. ಹೇಳಿದ್ದಾರೆ.

- ತರೀಕೆರೆ ತಾ.ಪ್ರಾ.ಸ.ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸರ್ವ ಸದಸ್ಯರ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

2024-25ನೇ ಸಾಲಿನಲ್ಲಿ ನಮ್ಮ ಸದಸ್ಯರ ಸಹಕಾರದಿಂದ ಬ್ಯಾಂಕ್ ₹12.90 ಲಕ್ಷ ಲಾಭ ಗಳಿಸಲು ಸಾಧ್ಯವಾಯಿತು ಎಂದು ತರೀಕೆರೆ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಯೋಗೀಶ್ ಎ.ಎಂ. ಹೇಳಿದ್ದಾರೆ. ಸೋಮವಾರ ತರೀಕೆರೆ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ದ ನಿಂದ ನಡೆದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 1941ರಲ್ಲಿ ಸ್ಥಾಪನೆಯಾಗಿದ್ದ ಬ್ಯಾಂಕ್‌ ಈ ದಿನ 83ನೇ ಮಹಾಸಭೆಯನ್ನು ತಮ್ಮೆಲ್ಲರ ಸಮಕ್ಷಮದಲ್ಲಿ ನಡೆಸುತ್ತಿದ್ದೇವೆ. ಸ್ವಂತ ಬಂಡವಾಳ ಯೋಜನೆ ಚಾಲ್ತಿಯಲ್ಲಿದ್ದು, ಸ್ವಂತ ಬಂಡವಾಳದಲ್ಲಿ ಈ ವರೆಗೆ ಎಫ್.ಡಿ. ₹30.88 ಲಕ್ಷ ಮತ್ತು ಪಿಗ್ಮಿ ₹28.51 ಲಕ್ಷ ಹೊಂದಿದೆ. ಮುಂದಿನ ದಿನಗಳಲ್ಲಿ ಈ ರೀತಿ ಲಾಭ ಗಳಿಸಲು ತಮ್ಮೆಲ್ಲರ ಸಹಕಾರ ಮುಖ್ಯವಾಗಿದೆ. ಬ್ಯಾಂಕಿನಲ್ಲಿ ಸುಸ್ತಿ ಇರುವ ₹79.20ಲಕ್ಷ ವನ್ನು ಸಕಾಲದಲ್ಲಿ ಸುಸ್ತಿದಾರರು ಭರಿಸಬೇಕು ಎಂದು ಹೇಳಿದರು.

ಬ್ಯಾಂಕಿನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಬ್ಯಾಂಕಿನ ಕಾರ್ಯಕಾರಿ ಮಂಡಳಿ ಸದಸ್ಯರು, ಎಲ್ಲಾ ಸದಸ್ಯರಿಗೆ ಸಿಬ್ಬಂದಿಗೆ ರೈತ ಬಾಂಧವರಿಗೂ ಇಲ್ಲಿ ಸೇರಿರುವ ಸಹಕಾರಿ ಧುರೀಣರಿಗೆ, ಹಿತೈಷಿಗಳಿಗೂ ನನ್ನ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಹೇಳಿದರು.ನಿರ್ದೇಶಕ ತಮ್ಮಯ್ಯ ಆರ್. ಪಿ,ಎಸ್.ನಂಜುಂಡಸ್ವಾಮಿ, ಪ್ರೀತಮ್.ಡಿ. ಮಾತನಾಡಿದರು. ಬ್ಯಾಂಕಿನ ವ್ಯವಸ್ಥಾಪಕ ಕೆ.ಬಿ.ನಾಗೇಶ್ 2024-25ನೇ ಸಾಲಿನ ಬ್ಯಾಂಕಿನ ವರದಿ ನೀಡಿದರು. ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಟಿ.ಎಲ್. ರಮೇಶ್, ಉಪಾಧ್ಯಕ್ಷ ಪಿ.ಎಚ್.ದಿವಾಕರಮೂರ್ತಿ, ಲೆಕ್ಕಾಧಿಕಾರಿ ಜೆ.ಎ.ಗೌತಮ್, ಕಿರಣ್ ಕುಮಾರ್ ಭಾಗವಹಿಸಿದ್ದರು.

-

8ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದಿಂದ ಬ್ಯಾಂಕ್ ನ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಯೋಗೀಶ್ ಎ.ಎಂ. ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು